ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

'ಓ ಮೈ ಗಾಡ್' ಇನ್ನು ಕನ್ನಡದಲ್ಲಿ

ಹಲವಾರು ಹಳೆಯ ನಿರ್ಮಾಪಕರು ಮತ್ತೆ ಕನ್ನಡ ಚಲನಚಿತ್ರಗಳಿಗೆ ಹೂಡಿಕೆ ಮಾಡುತ್ತಿರುವುದು ಆಸಕ್ತಿದಾಯಕ ಸಂಗತಿ. ಹಿಂದೆ 'ಪ್ರೇಮ ರಾಗ ಹಾಡು ಗೆಳತಿ', 'ನಮ್ಮೂರ ಮಂದಾರ ಹೂವೆ'

ಹಿಂದಿ ಸಿನೆಮಾ 'ಓ ಮೈ ಗಾಡ್' ಸ್ಟಿಲ್
Guruprasad Narayana
Updated On : 4 Nov 2015, 11:07 am

ಬೆಂಗಳೂರು: ಹಲವಾರು ಹಳೆಯ ನಿರ್ಮಾಪಕರು ಮತ್ತೆ ಕನ್ನಡ ಚಲನಚಿತ್ರಗಳಿಗೆ ಹೂಡಿಕೆ ಮಾಡುತ್ತಿರುವುದು ಆಸಕ್ತಿದಾಯಕ ಸಂಗತಿ. ಹಿಂದೆ 'ಪ್ರೇಮ ರಾಗ ಹಾಡು ಗೆಳತಿ', 'ನಮ್ಮೂರ ಮಂದಾರ ಹೂವೆ' ಮತ್ತು 'ಶ್ರೀ ಮಂಜುನಾಥ' ಸಿನೆಮಾಗಳನ್ನು ನಿರ್ಮಿಸಿದ್ದ ಜಯಶ್ರೀ ದೇವಿ ಅವರು ಹಿಂದಿ ಸಿನೆಮಾ 'ಓ ಮೈ ಗಾಡ್' (ಒ ಎಂ ಜಿ) ಸಿನೆಮಾದ ಹಕ್ಕುಗಳನ್ನು ಖರೀದಿಸಿದ್ದಾರಂತೆ. ಹಾಗೆಯೇ ಅದನ್ನು ಕನ್ನಡದಲ್ಲಿ ನಿರ್ಮಿಸಲಿದ್ದಾರಂತೆ.

ಉಮೇಶ್ ಶುಕ್ಲಾ ಅವರ ಗುಜರಾತಿ ನಾಟಕ ಆಧಾರಿತ 'ಒ ಎಂ ಜಿ' ೨೦೧೨ ರಲ್ಲಿ ತೆರೆ ಕಂಡ ವ್ಯಂಗ್ಯ ಭರಿತ ಹಿಂದಿ ಹಾಸ್ಯ ಸಿನೆಮಾ. ಇದರಲ್ಲಿ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಮುಖ್ಯ ಭೂಮಿಕೆಯಲ್ಲಿದ್ದರು. ಸಿನೆಮಾಗೆ ಒಳ್ಳೆಯ ಪ್ರತಿಕ್ರಿಯೆ ಕೂಡ ಬಂದಿತ್ತು ಹಾಗು ಕನ್ನಡತಿ ನಿಧಿ ಸುಬ್ಬಯ್ಯ ಈ ಸಿನೆಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ನಂತರ ಈ ಸಿನೆಮಾವನ್ನು ವೆಂಕಟೇಶ್ ಮತ್ತು ಪವನ್ ಕಲ್ಯಾಣ್ ಅವರ ನಟನೆಯಲ್ಲಿ 'ಗೋಪಾಲ ಗೋಪಾಲ' ಎಂದು ರಿಮೇಕ್ ಮಾಡಲಾಗಿತ್ತು.

ಇನ್ನೂ ಅಧಿಕೃತ ಹೇಳಿಕೆ ಹೊರಬೀಳಬೇಕಿದ್ದರೂ, ಗಾಂಧಿನಗರದ ವದಂತಿಯಂತೆ ಈ ಸಿನೆಮಾವನ್ನು ಎಂ ಡಿ ಶ್ರೀಧರ್ ನಿರ್ದೇಶಿಸಲಿದ್ದಾರೆ. ಉಪೇಂದ್ರ, ಅಕ್ಷಯ್ ಕುಮಾರ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಮತ್ತು ಪರೇಶ್ ರಾವಲ್ ಪಾತ್ರಕ್ಕೆ ರವಿಚಂದ್ರನ್ ಅವರನ್ನು ಕೇಳಲಾಗಿದೆಯಂತೆ. ಎಲ್ಲವೂ ಎಣಿಕೆಯಂತೆ ನಡೆದರೆ ಸಿನೆಮಾ ನವೆಂಬರ್ ವೇಳೆಗೆ ಸೆಟ್ಟೇರಲಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments