ಬಾಕ್ಸರ್ ಚಲನಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಬಾಕ್ಸರ್ ಗೆ 'ಯು ಪ್ರಮಾಣಪತ್ರ'; ಬಿಡುಗಡೆಗೆ ಸಿದ್ಧ

ಪ್ರೀತಮ್ ಗುಬ್ಬಿ ನಿರ್ದೇಶನದ, ಧನಂಜಯ್ ನಟಿಸಿರುವ ಬಾಕ್ಸರ್ ಸಿನೆಮಾಗೆ ಯಾವುದೇ ಕತ್ತರಿಯಿಲ್ಲದೆ ಸೆನ್ಸಾರ್ ಮಂಡಲಿಯಿಂದ 'ಯು' ಪ್ರಮಾಣಪತ್ರ ದೊರೆತಿದೆ.

ಬೆಂಗಳೂರು: ಪ್ರೀತಮ್ ಗುಬ್ಬಿ ನಿರ್ದೇಶನದ, ಧನಂಜಯ್ ನಟಿಸಿರುವ ಬಾಕ್ಸರ್ ಸಿನೆಮಾಗೆ ಯಾವುದೇ ಕತ್ತರಿಯಿಲ್ಲದೆ ಸೆನ್ಸಾರ್ ಮಂಡಲಿಯಿಂದ 'ಯು' ಪ್ರಮಾಣಪತ್ರ ದೊರೆತಿದೆ. ಇದರಿಂದ ಸಂತಸಗೊಂಡಿರುವ ಚಿತ್ರತಂಡ ಸಿನೆಮಾವನ್ನು ಬಿಡುಗಡೆಗೆ ಸಿದ್ಧಪಡಿಸಿದೆ.

"ನಾವು ಬಿಡುಗಡೆಗೆ ಸಿದ್ಧರಾಗಿದ್ದೇವೆ. ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅವರು ನವೆಂಬರ್ ೨೭ ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಈ ಮೊದಲು ದೀಪಾವಳಿಗೆ ಬಿಡುಗಡೆ ಮಾಡಬೇಕೆಂದಿದ್ದೆವು. ಆದರೆ ಸೆನ್ಸಾರ್ ಪ್ರಮಾಣ ಪತ್ರ ದೊರೆಯುವುದು ತಡವಾದ್ದರಿಂದ ಎರಡು ವಾರ ಪ್ರಚಾರಕ್ಕೆ ಮೀಸಲಿಟ್ಟು ಬಿಡುಗಡೆ ಮುಂದೂಡಿದೆವು" ಎನ್ನುತ್ತಾರೆ ನಿರ್ದೇಶಕ ಪ್ರೀತಮ್ ಗುಬ್ಬಿ.

ಬಾಕ್ಸರ್ ಪ್ರೇಮಕಥೆಯಾಗಿದ್ದು ಹೇರಳ ಆಕ್ಷನ್ ದೃಶ್ಯಗಳಿವೆಯಂತೆ, ಧನಂಜಯ್ ಅವರು ಕಿಕ್ ಬಾಕ್ಸಿಂಗ್ ನಲ್ಲಿ ತರಬೇತಿಯನ್ನು ತೆಗೆದುಕೊಂಡಿದ್ದಾರೆ. ಕೃತಿಕ ಜಯಕುಮಾರ್ ಬೆಳ್ಳಿತೆರೆಗೆ ನಾಯಕನಟಿಯಾಗಿ ಪಾದಾರ್ಪಣೆ ಮಾಡುತ್ತಿದ್ದು ವಿ ಹರಿಕೃಷ್ಣ ಅವರ ಸಂಗೀತ ಇದೆ. ಪ್ರೀತ ಜಯರಾಮನ್ ಸಿನೆಮ್ಯಾಟೋಗ್ರಾಫರ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT