ತೆಲುಗು, ತಮಿಳು, ಹಾಗೂ ಬಾಲಿವುಡ್ ನಲ್ಲಿ ಪ್ರಸಿದ್ದವಾಗಿರುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಈ ಬಾರಿ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಪಟಾಕಿ ಹಚ್ಚಿ ಸದ್ದು ಗದ್ದಲ ಮಾಡೋ ಬದಲು ಅಭಿನಯ ಚಕ್ರವರ್ತಿ ಸದ್ದು ಮಾಡದೇ ಚಾರಿಟಿ ಟ್ರಸ್ಟ್'ವೊಂದಕ್ಕೆ 10 ಲಕ್ಷ ರೂ. ನೀಡುವ ಮೂಲಕ ದೀಪಾವಳಿ ಹಬ್ಬದಂದು ಟ್ರಸ್ಟ್ ಪಾಲಿಗೆ ಬೆಳಕಾಗಿದ್ದಾರೆ.
ವಿದ್ಯಾಭ್ಯಾಸ ಮತ್ತು ಆರೋಗ್ಯ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿರುವವರಿಗೆ ಸಹಾಯವಾಗಲೆಂದು ಗೌಪ್ಯವಾಗಿ ಕಿಚ್ಚ ನೆರವು ನೀಡಿದ್ದಾರೆ.
ಬೆಳ್ಳಿಪರದೆ-ಕಿರುತೆರೆಗಳಲ್ಲಿ ಹೀರೊ ಆಗಿ ಮಿಂಚುತ್ತಿರುವ ಕಿಚ್ಚ ಸುದೀಪ್ ಬೆಳಕಿನ ಹಬ್ಬದಂದು ಧನ ಸಹಾಯ ಮಾಡುವ ಮೂಲಕ ನಿಜ ಜೀವನದಲ್ಲೂ ಹೀರೊ ಎನಿಸಿಕೊಂಡು ಮಾನವೀಯತೆ ಮೆರೆದಿದ್ದಾರೆ.