ನಿಯಮ ಉಲ್ಲಂಘಿಸಿದ ಹುಚ್ಚಾ ವೆಂಕಟ್ ಬಿಗ್ಬಾಸ್ ಮನೆಯಿಂದ ಔಟ್
ಬಿಗ್ಬಾಸ್ ನ ಮೂರನೇ ಸೀಸನ್ ನ ಬಿಗ್ಬಾಸ್ ಎಂದೇ ಬಿಂಬಿಸಲ್ಪಟ್ಟಿದ್ದ ಹುಚ್ಚಾ ವೆಂಕಟ್ ಸದ್ಯ ಬಿಗ್ ಬಾಸ್ ಮನೆಯಿಂದ ಕಿಕ್ ಔಟ್ ಆಗಿದ್ದಾರೆ ಎಂದು ಮೂಲಗಳಿಂದ...
ಬೆಂಗಳೂರು: ಬಿಗ್ಬಾಸ್ ನ ಮೂರನೇ ಸೀಸನ್ ನ ಬಿಗ್ಬಾಸ್ ಎಂದೇ ಬಿಂಬಿಸಲ್ಪಟ್ಟಿದ್ದ ಹುಚ್ಚಾ ವೆಂಕಟ್ ಸದ್ಯ ಬಿಗ್ ಬಾಸ್ ಮನೆಯಿಂದ ಕಿಕ್ ಔಟ್ ಆಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹುಚ್ಚಾ ವೆಂಕಟ್ ತಮ್ಮ ರಫ್ ಅಂಡ್ ಟಫ್ ಮ್ಯಾನರಿಸಂ ಮೂಲಕ ಬಿಗ್ ಬಾಸ್ ಮನೆಗೆ ಕಿಚ್ಚು ಹಚ್ಚಿದ್ದರು. ಹೀಗೆ ತಮ್ಮ ಸ್ವಾಭಾವವನ್ನು ಬಿಡದ ಹುಚ್ಚಾ ವೆಂಕಟ್ ಸ್ಫರ್ಧಾಳುಗಳ ಮೇಲೆ ಹಲ್ಲೆಗೆ ಯತ್ನಿಸಿದ್ದು, ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೆಂಕಟ್ ನನ್ನು ಮನೆಯಿಂದ ಹೊರ ಹಾಕಲಾಗಿದೆ ಎಂದು ಬಿಗ್ ಬಾಸ್ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.
ರಮ್ಯಾಗಾಗಿ ಮನೆ ಖಾಲಿ ಮಾಡಿದ್ನಾ ವೆಂಕಟ್
ಬಿಗ್ ಬಾಸ್ ಮನೆಗೆ ನಟಿ ರಮ್ಯಾ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡುತ್ತಿದ್ದಾರೆ. ರಮ್ಯಾಗಾಗಿ ಹುಚ್ಚಾ ವೆಂಕಟನನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಗುತ್ತಿದೆಯೇ ಎಂಬ ಸಂಶಯವೂ ಒಂದೆಡೆ ಮೂಡತೊಡಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.