ಶ್ರೀಮುರಳಿ 'ರಾಥಾವರ' ಆಡಿಯೋ ವಿಶಿಷ್ಟ ಬಿಡುಗಡೆ
ಶ್ರೀಮುರಳಿ ಮತ್ತು ರಚಿತಾ ರಾಮ್ ನಟನೆಯ 'ರಥಾವರ' ಸಿನೆಮಾದ ಆಡಿಯೋ ಬಿಡುಗಡೆ ವಿಶಿಷ್ಟವಾಗಿ ನಡೆದಿದೆ. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮತ್ತು ಚಿತ್ರತಂಡ,
ಬೆಂಗಳೂರು: ಶ್ರೀಮುರಳಿ ಮತ್ತು ರಚಿತಾ ರಾಮ್ ನಟನೆಯ 'ರಥಾವರ' ಸಿನೆಮಾದ ಆಡಿಯೋ ಬಿಡುಗಡೆ ವಿಶಿಷ್ಟವಾಗಿ ನಡೆದಿದೆ. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮತ್ತು ಚಿತ್ರತಂಡ, ಸಿದ್ಧಗಂಗಾ ಮಠದ ೧೦೮ ವರ್ಷದ ಆಧ್ಯಾತ್ಮಿಕ ಗುರು ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ತುಮಕೂರಿಗೆ ತೆರಳಿತ್ತು. ಅಲ್ಲಿ ಸ್ವಾಮೀಜಿಗಳೇ ಸಿಡಿ ಬಿಡುಗಡೆ ಮಾಡಿದ್ದಾರೆ. "ನಾನು ಗುರೂಜಿಯಲ್ಲಿ ನಂಬಿಕೆಯಿಟ್ಟಿದ್ದೇನೆ. ಆದುದರಿಂದ ಅವರೇ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದರು" ಎನ್ನುತ್ತಾರೆ ನಟ ಮುರಳಿ.
"ಗುರೂಜಿ ನಮಗೆ ಆಶೀರ್ವಾದ ಮಾಡಿದ ಕ್ಷಣ ಆಡಿಯೋ ಬಿಡುಗಡೆಯಾಯಿತು" ಎನ್ನುತ್ತಾರೆ ಮುರಳಿ.
ಗುರುವಾರ ಅಂತರ್ಜಾಲದಲ್ಲಿ ಬಿಡುಗಡೆಯಾದ ಚಿತ್ರದ ಹಾಡುಗಳು ಅಪಾರ ಜನಮನ್ನಣೆ ಗಳಿಸಿವೆಯಂತೆ. "ಟೀಸರ್ ಈಗಗಾಲೇ ೧ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಒಂದು ಹಾಡು ಕೂಡ ೭೦೦೦೦ ವೀಕ್ಷಣೆ ದಾಟಿದೆ" ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಮುರಳಿ.
ಜಯಣ್ಣ ಸಿನೆಮಾದ ವಿತರಣಾ ಹಕ್ಕನ್ನು ಖರೀದಿಸಿದ್ದು, ಇನ್ನು ಬಿಡುಗಡೆ ದಿನಾಂಕ ನಿಗದಿಯಾಗದಿದ್ದರೂ ಡಿಸೆಂಬರ್ ನಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುರಳಿ ಅವರ ಹಿಂದಿನ ಚಿತ್ರ 'ಉಗ್ರಂ' ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿತ್ತು.
ಮುರಳಿ ಹಾಡಿರುವ ಒಂದು ಹಾಡಿನ ತುಣುಕು ಇಲ್ಲಿದೆ ನೋಡಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.