ವಿನಯ್ ರಾಜಕುಮಾರ್ 
ಸಿನಿಮಾ ಸುದ್ದಿ

ವಿನಯ್ ರಾಜಕುಮಾರ್ ಮುಂದಿನ ಚಿತ್ರ 'ರನ್ ಆಂಟನಿ'

ತಮ್ಮ ಚೊಚ್ಚಲ ಪ್ರಯತ್ನದಲ್ಲಿ ನಿರೀಕ್ಷಿತ ಯಶಸ್ಸೇನು ದೊರಕದಿದ್ದರಿಂದ ವರನಟ ರಾಜಕುಮಾರ್ ಅವರ ಮೊಮ್ಮಗ ವಿನಯ್ ರಾಜಕುಮಾರ್ ಈ ಬಾರಿ ಹೆಚ್ಚು ಚಿಂತನ ಮಂಥನ

ಬೆಂಗಳೂರು: ತಮ್ಮ ಚೊಚ್ಚಲ ಚಲನಚಿತ್ರ ಸಿದ್ಧಾರ್ಥದಿಂದ ನಿರೀಕ್ಷಿತ ಯಶಸ್ಸೇನು ದೊರಕದಿದ್ದರಿಂದ ವರನಟ ರಾಜಕುಮಾರ್ ಅವರ ಮೊಮ್ಮಗ ವಿನಯ್ ರಾಜಕುಮಾರ್ ಈ ಬಾರಿ ಹೆಚ್ಚು ಚಿಂತನ ಮಂಥನ ನಡೆಸಿದ್ದಾರಂತೆ. ತಮ್ಮ ತಂದೆ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ಸುಮಾರು ೩೦ ಸ್ಕ್ರಿಪ್ಟ್ ಗಳನ್ನು ಪರಿಶೀಲಿಸಿ ಕೊನೆಗೆ 'ರನ್ ಆಂಟನಿ' ಅಂತಿಮಗೊಳಿಸಿದ್ದಾರೆ.

ಸಿನೆಮಾವನ್ನು ಚೊಚ್ಚಲ ನಿರ್ದೇಶಕ ರಘು ಶಾಸ್ತ್ರಿ ನಿರ್ದೇಶಿಸಲಿದ್ದು, ಸ್ವಂತ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ಚಿತ್ರ ನಿರ್ಮಿಸಲಿದೆ.  ಇದಕ್ಕೂ ಮೊದಲು ನಿರ್ದೇಶಕ ಪ್ರೇಮ್ ಸಿನೆಮಾದಲ್ಲಿ ವಿನಯ್ ನಟಿಸಲಿದ್ದಾರೆ ಎಂಬ ಸುದ್ದಿ ಇದ್ದರೂ ಆ ಯೋಜನೆ ರದ್ದಾಗಿದೆ ಎಂದು ತಿಳಿದುಬಂದಿ.

ಇನ್ನೂ ಅಧಿಕೃತ ದಿನಾಂಕ ನಿಗದಿ ಪಡಿಸಬೇಕಾಗಿದೆ ಎನ್ನುವ ರಾಘವೇಂದ್ರ ರಾಜಕುಮಾರ್ "ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶಕ. ಯುವ ತಂತ್ರಜ್ಞರನ್ನು ಆಯ್ಕೆ ಮಾಡಲು ನಿರ್ದೇಶಕನಿಗೆ ಮುಕ್ತ ಅವಕಾಶ ನೀಡಿದ್ದೇವೆ. ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ" ಎಂದು ತಿಳಿಸಿದ್ದಾರೆ.

ನವೆಂಬರ್ ಅಂತ್ಯಕ್ಕೆ ಅಥವಾ ಡಿಸೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಏಪ್ರಿಲ್ ನಲ್ಲಿ ಸಿನೆಮಾ ತೆರೆ ಕಾಣಲಿದೆ ಎನ್ನಲಾಗಿದೆ.

ವಿನಯ್ ಅವರೇ ಈ ಸ್ಕ್ರಿಪ್ಟ್ ಅಂತಿಮಗೊಳಿಸಿದ್ದು ಎನ್ನುವ ರಾಘವೇಂದ್ರ "ಅವನಿಗೆ ಸ್ಕ್ರಿಪ್ಟ್ ಇಷ್ಟವಾಯಿತು ಆದುದರಿಂದ ನಿರ್ದೇಶಕರ ಜೊತೆ ಮಾತನಾಡಲು ತಿಳಿಸಿದ. ಸ್ಕ್ರಿಪ್ಟ್ ಅವನಿಗೆ ಬಹಳ ಹಿಡಿಸುತ್ತದೆ ಹಾಗೆಯೇ ಶೀರ್ಷಿಕೆ ಕೂಡ" ಎನ್ನುತ್ತಾರೆ.

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗೆ ಕೆಲಸ ಮಾಡಿರುವ ರಘು ಶಾಸ್ತ್ರಿ ಅವರಿಗೆ ಚೊಚ್ಚಲ ಸಿನೆಮಾವನ್ನು ಕನ್ನಡದಲ್ಲಿ ಮಾಡುತ್ತಿರುವುದಕ್ಕೆ ಸಂತಸ ತಂದಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?