ಐರಾವತದಲ್ಲಿ ದರ್ಶನ್ 
ಸಿನಿಮಾ ಸುದ್ದಿ

೭೨ ಥಿಯೇಟರ್ ಗಳಲ್ಲಿ ೫೦ ದಿನ ಪೂರೈಸಿದ ಐರಾವತ

ವಿಮರ್ಶಕರಿಂದ ತೇರ್ಗಡೆ ಹೊಂದದಿದ್ದರೂ ನಿರ್ದೇಶಕ ಎ ಪಿ ಅರ್ಜುನ್ ನಿರ್ದೇಶನದ, ದರ್ಶನ್ ಅಭಿನಯದ 'ಐರಾವತ' ಜನಮೆಚ್ಚುಗೆ ಪಡೆದು ೭೨ ಥಿಯೇಟರ್ ಗಳಲ್ಲಿ ೫೦ ದಿನ ಪೂರೈಸಿದೆ

ಬೆಂಗಳೂರು: ವಿಮರ್ಶಕರಿಂದ ತೇರ್ಗಡೆ ಹೊಂದದಿದ್ದರೂ ನಿರ್ದೇಶಕ ಎ ಪಿ ಅರ್ಜುನ್ ನಿರ್ದೇಶನದ, ದರ್ಶನ್ ಅಭಿನಯದ 'ಐರಾವತ' ಜನಮೆಚ್ಚುಗೆ ಪಡೆದು ೭೨ ಥಿಯೇಟರ್ ಗಳಲ್ಲಿ ೫೦ ದಿನ ಪೂರೈಸಿದೆ ಎನ್ನುತ್ತಾರೆ ನಿರ್ದೇಶಕ. ನಿರ್ಮಾಪಕ ೩೦ ಕೋಟಿ ವ್ಯವಹಾರ ಮಾಡಿದ್ದಾರೆ ಎನ್ನುವ ಅವರು "ಯಾವುದೇ ಉತ್ಪ್ರೇಕ್ಷೆ ಇಲ್ಲ, ಆದರೆ ೨೦೧೫ರಲ್ಲಿ ಇಷ್ಟು ಹಣ ಗಳಿಸಿದ ಒಂದೇ ಕನ್ನಡ ಸಿನೆಮಾ ಐರಾವತ" ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಎಲ್ಲ ವಿಮರ್ಶಕರಿಗೂ ಅವರ ಅಭಿಪ್ರಾಯ ತಿಳಿಸುವ ಹಕ್ಕಿದೆ ಎನ್ನುವ ನಿರ್ದೇಶಕ ಆದರೆ ಕೊನೆಗೆ ಪ್ರೇಕ್ಷಕರ ಅಭಿಪ್ರಾಯವೇ ಮುಖ್ಯ. "ಒಂದು ರೀತಿಯಲ್ಲಿ, ಪ್ರತಿ ಪ್ರೇಕ್ಷಕನೂ ವಿಮರ್ಶಕನೇ. ಸಾಮಾಜಿಕ ಜಲತಾಣಗಳಲ್ಲಿ ಅವನೂ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ" ಎನ್ನುತ್ತಾರೆ.

ಇಂದು ಸಿನೆಮಾ ಕ್ಷೇತ್ರ ಎಷ್ಟು ವಾಣಿಜ್ಯೀಕರಣ ಆಗಿದೆಯೆಂದರೆ ೧೦೦ ದಿನ ಪೂರೈಸಿದ ಚಿತ್ರ ಮಾಡುವ ನಿರ್ದೇಶಕನಿaಗೂ ಅವಕಾಶಗಳ ಮಹಾಪೂರವೇನೂ ಇರುವುದಿಲ್ಲ ಎನ್ನುವ ಅರ್ಜುನ್ "ಗಾಂಧಿನಗರ ಮಂತ್ರ ಎಂದರೆ 'ನನಗೆ ದುಡ್ಡು ತೋರಿಸು' ಎನ್ನುವುದು. ಆದುದರಿಂದ ನಮ್ಮ ವೃತ್ತಿಜೀವನ ತೊಂದರೆಯಲ್ಲಿದೆ. ಸಿನೆಮಾ ಚೆನ್ನಾಗಿದ್ದು ಬ್ಲಾಕ್ ಬಸ್ಟರ್ ಎನ್ನಿಸಿಕೊಂಡರು ನಿರ್ಮಾಪಕನಿಗೆ ಲಾಭ ಗಳಿಸಿಕೊಡದ ಹೊರತು ನಿಮಗೆ ಮುಂದಿನ ಯೋಜನೆಗೆ ಯಾರೂ ಅವಕಾಶ ನೀಡುವುದಿಲ್ಲ" ಎನ್ನುತ್ತಾರೆ.

ಐರಾವತ ನಿರ್ದೇಶಿಸುವಾಗ ತಾವು ಉಬ್ಬು ತಗ್ಗುಗಳನ್ನು ನೋಡಿದ್ದನ್ನು ವಿವರಿಸಿವ ನಿರ್ದೇಶಕ ಅದು ಪಾಠ ಕಲಿಸಿತು ಎನ್ನುತ್ತಾರೆ. "ದೊಡ್ಡ ಸ್ಟಾರ್ ಮತ್ತು ದೊಡ್ಡ ಬಜೆಟ್ ಸಿನೆಮಾವನ್ನು ನಿಭಾಯಿಸುವುದ ಕಲಿತೆ. ಅದಕ್ಕಿಂತಲೂ ಚಿತ್ರರಂಗದಲ್ಲಿ ಹೆಚ್ಚು ವೃತ್ತಿಪರತೆಯಿಂದ ಇರುವುದನ್ನು ಕಲಿತೆ" ಎಂದು ಅವರು ವಿವರಿಸುತ್ತಾರೆ.

ತಮ್ಮ ಮುಂದಿನ ಯೋಜನೆ ಬಗ್ಗೆ ಮಾತನಾಡುವ ಅರ್ಜುನ್ "ಆರ್ ಎಸ್ ನಿರ್ಮಾಣ ಸಂಸ್ಥೆಯಿಂದ ಒಂದು ಅವಕಾಶವಿದೆ, ಧ್ರುವ ಸರ್ಜಾ ಅವರ ಜೊತೆ ಮತ್ತೊಂದು ಯೋಜನೆ ಸಿದ್ಧವಾಗುವ ಸಾಧ್ಯತೆಯಿದೆ. ಜೊತೆಗೆ ಇನ್ನೆರಡು ಯೋಜನೆಗಳು ಕೈಯ್ಯಲ್ಲಿವೆ. ಯಾವ ಸಿನೆಮಾ ಪ್ರಾರಂಭವಾಗಬೇಕು ಎಂಬ ಸ್ಪಷ್ಟತೆ ಸಿಕ್ಕ ನಂತರ ಚಿತ್ರೀಕರಣ ಪ್ರಾರಂಭಿಸಲಿದ್ದೇನೆ" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT