ನಟಿ ಶೃತಿ ಹರಿಹರನ್ 
ಸಿನಿಮಾ ಸುದ್ದಿ

ತೆರೆಯ ಮೇಲೆ ತಾಯಿಯಾಗಿ ಕಾಣಿಸಿಕೊಳ್ಳಲಿರುವ ಶೃತಿ

ಕನ್ನಡ, ತಮಿಳು ಮತ್ತು ತೆಲುಗು ಚಿತ್ರೋದ್ಯಮದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಛಾಪು ಮೂಡಿಸಿರುವ ನಟಿ ಶೃತಿ ಹರಿಹರನ್ ಅವರಿಗೆ ಹೊಸ ಸವಾಲುಗಳೆಂದರೆ ಪ್ರಿಯ.

ಬೆಂಗಳೂರು: ಕನ್ನಡ, ತಮಿಳು ಮತ್ತು ತೆಲುಗು ಚಿತ್ರೋದ್ಯಮದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಛಾಪು ಮೂಡಿಸಿರುವ ನಟಿ ಶೃತಿ ಹರಿಹರನ್ ಅವರಿಗೆ ಹೊಸ ಸವಾಲುಗಳೆಂದರೆ ಪ್ರಿಯ.

ತೆರೆಯ ಮೇಲಿನ ಪಾತ್ರಗಳಿಗೆ ವಯಸ್ಸು ಎಂದೂ ಅಡ್ಡಿ ಮಾಡುವುದಿಲ್ಲ ಎನ್ನುವ ನಟಿ 'ರೆಂಜಿತ್ ಕಾಳಿದಾಸ್' ಎಂಬುವ ದ್ವಿಭಾಷಾ ಚಲನಚಿತ್ರದಲ್ಲಿ ಅರ್ಜುನ್ ಸರ್ಜಾ ಅವರ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಅಚ್ಚಮುಂಡು ಅಚ್ಚಮುಂಡು' ಖ್ಯಾತಿಯ ಅರುಣ್ ವೈದ್ಯನಾಥನ್ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ನಿರ್ದೇಶಿಸುತ್ತಿರುವ ಈ ಸಿನೆಮಾದಲ್ಲಿ ಶೃತಿ ತಾಯಿಯಾಗಿ ಕೂಡ ಕಾಣಿಸಿಕೊಳ್ಳಲಿದ್ದಾರೆ. "ಈ ಸಿನೆಮಾದಲ್ಲಿ ಸುಮಾರು ೩೩ ವರ್ಷದ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದೇನೆ. ಅರುಣ್ ವೈದ್ಯನಾಥನ್ ಅವರ ಕ್ರೈಮ್ ಥ್ರಿಲ್ಲರ್ ಸ್ಕ್ರಿಪ್ಟ್ ಅದ್ಭುತವಾಗಿದೆ. ಈ ರೀತಿಯ ಸಿನೆಮಾಗಳು ತಮಿಳಿನಲ್ಲಿ ಜನಪ್ರಿಯ ಆದರೆ ಕನ್ನಡದಲ್ಲಿ ವಿರಳ" ಎನ್ನುತ್ತಾರೆ ಶೃತಿ.

ಇಡೀ ಸಿನೆಮಾ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುವುದು ಎಂಬ ಸಂಗತಿ ಕೂಡ ಈ ಸಿನೆಮಾ ಒಪ್ಪಿಕೊಳ್ಳುವುದಕ್ಕೆ ಮತ್ತೊಂದು ಕಾರಣ ಎನ್ನುತ್ತಾರೆ ಶೃತಿ.

ಶೃತಿ ನಟನೆಯ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಕೂಡ ಬಿಡುಗಡೆಗೆ ಸಿದ್ಧವಾಗಿದ್ದು 'ಜೈ ಮಾರುತಿ ೮೦೦' ಚಿತ್ರೀಕರಣ ಕೂಡ ಭರದಿಂದ ಸಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

SCROLL FOR NEXT