ಸಿನಿಮಾ ಸುದ್ದಿ

ಬರ್ಕ್ಲಿ ಸಂಗೀತ ಶಾಲೆಯಲ್ಲಿ ವಿಜಯ್ ಪ್ರಕಾಶ್ ನಿನಾದ

Guruprasad Narayana

ಬೆಂಗಳೂರು: 'ಜೈ ಹೊ' ಹಾಡಿನ ಮೂಲಕ ಗಮನ ಸೆಳೆದ ಗಾಯಕ ವಿಜಯ್ ಪ್ರಕಾಶ್ ಈಗ ವಿಶ್ವ ಶ್ರೋತೃಗಳಿಗೂ ತಮ್ಮ ಗಾಯನವನ್ನು ಉಣಬಡಿಸಿ ಮನಗೆದ್ದಿದ್ದಾರೆ. ಅಮೆರಿಕಾದ ಬಾಸ್ಟನ್ ನ ಬರ್ಕ್ಲಿ ಸಂಗೀತ ಶಾಲೆಯಲ್ಲಿ ಸಂಗೀತ ಕಛೇರಿಯನ್ನು ನೀಡಿ ಅಲ್ಲಿನ ರಸಿಕರನ್ನು ಮೆಚ್ಚಿಸಿದ್ದಾರೆ.

ಮೂಲಗಳ ಪ್ರಕಾರ ಈ ಕಛೇರಿ ಭಾರಿ ಯಶಸ್ಸು ಕಂಡಿತಂತೆ. "ಮೊದಲೇ ಎಲ್ಲ ಟಿಕೆಟ್ ಗಳು ಖಾಲಿಯಾಗಿದ್ದವು. ಬಹುತೇಕ ಅಮೆರಿಕನ್ನರೇ ನೆರೆದಿದ್ದರು. ಬೇರೆ ದೇಶದ ಸಂಗೀತ ರಸಿಕರು ಬಂದಿದ್ದರು. ಹಲವಾರು ಹಿರಿಯ ಸಂಗೀತ ವಿದ್ವಾಂಸರು ಕೂಡ ಸಮಯ ಮಾಡಿಕೊಂಡು ಕಛೇರಿ ಆಲಿಸಿದರು" ಎಂದು ಮೂಲಗಳು ತಿಳಿಸಿವೆ.

ಇದನ್ನು ಧೃಢೀಕರಿಸುವ ಗಾಯಕ ವಿಜಯ್ "ಹೌದು. ನಿಜ. ಪ್ರತಿ ವರ್ಷ ವಿಶ್ವದ ಹಲವು ಸಂಗೀತಕಾರರು ಇಲ್ಲಿ ಪ್ರದರ್ಶನ ನೀಡುತ್ತಾರೆ. ಕಳೆದ ವರ್ಷ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರು ಇಲ್ಲಿದ್ದರು. ಈ ವರ್ಷ ನನ್ನ ಹಾಡುಗಳನ್ನು ಹಾಡಲಾಯಿತು. ೨೨ ದೇಶಗಳಿಂದ ಆಯ್ಕೆಯಾಗಿದ್ದ ೪೦ ವಿದ್ಯಾರ್ಥಿಗಳ ಜೊತೆ ನಾನು ಪ್ರದರ್ಶನ ನೀಡಿದೆ" ಎಂದು ತಿಳಿಸುತ್ತಾರೆ.  

ಹಲವಾರು ಕನ್ನಡದ ಹಾಡುಗಳನ್ನು ಕೂಡ ವಿಜಯ್ ಹಾಡಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ಕೂಡ ನೀಡಿದ್ದಾರಂತೆ. ಕೆನಡಾದ ಟೊರಂಟೊದಲ್ಲಿ ಕೂಡ ಗಾಯಕ ಪ್ರದರ್ಶನ ನಿಡಲಿದ್ದಾರೆ.

SCROLL FOR NEXT