ಸಿನಿಮಾ ಸುದ್ದಿ

ವೀಕೆಂಡ್ ವಿತ್ ರಮೇಶ್-2

Vishwanath S

ಸೆಲೆಬ್ರಿಟಿಗಳ ಇನ್ನೊಂದು ಮುಖವನ್ನು ಪರಿಚಯಿಸುವ, ಅವರ ಬದುಕಿನ ಗೊತ್ತಿಲ್ಲದ ಸಂಗತಿಗಳನ್ನು ತಿಳಿಸುವ ಮೂಲಕ ಗಮನಸೆಳೆದಿದ್ದ ವೀಕೆಂಡ್ ವಿತ್ ರಮೇಶ್ ಮತ್ತೆ ಬರುತ್ತಿದೆ.

ನಟ ರಮೇಶ್ ಅರವಿಂದ್ ನಡೆಸಿಕೊಡುವ ಈ ಕಾರ್ಯಕ್ರಮ, ಮೊದಲ ಸೀಸನ್‍ನಲ್ಲಿ ಖ್ಯಾತ ನಟರಾದ ಉಪೇಂದ್ರ, ಪುನೀತ್, ರವಿಚಂದ್ರನ್, ಅರ್ಜುನ್ ಸರ್ಜಾ, ರಾಧಿಕಾ ಪಂಡಿತ್, ಶಿವರಾಜ್ ಕುಮಾರ್, ಯೋಗರಾಜ ಭಟ್ ಸೇರಿದಂತೆ ಚಿತ್ರರಂಗಕ್ಕೆ ಸೇರದ ಅನೇಕರನ್ನೂ ಪರಿಚಯಿಸಲಾಗಿತ್ತು.

26 ಕಂತುಗಳ ಈ ಕಾರ್ಯಕ್ರಮ ಅಪಾರ ಮೆಚ್ಚುಗೆಯನ್ನು ಪಡೆದಿತ್ತು. ಈಗ ಎರಡನೆಯ ಕಂತು ಡಿಸೆಂಬರ್‍ನಲ್ಲಿ ಆರಂಭವಾಗಲಿದ್ದು, ಇದಕ್ಕಾಗಿ ಎಲ್ಲ ಸಿದಟಛಿತೆಗಳು ನಡೆದಿವೆ. ಈ ಬಾರಿ ಇನ್ನಷ್ಟು ತಾರೆಯರನ್ನು ಪರಿಚಯಿಸುವುದಕ್ಕೆ ರಮೇಶ್ ತಯಾರಾಗಿದ್ದಾರೆ. ಮೊದಲ ಕಂತಿನಲ್ಲೇ ನಟಿ, ರಾಜಕಾರಣಿ ರಮ್ಯ ಅವರು ಅತಿಥಿಗಳಾಗಿ ಆಗಮಿಸಲಿದ್ದಾರಂತೆ. ನಂತರದ ಕಂತುಗಳಲ್ಲಿ ಕಿಚ್ಚ ಸುದೀಪ್, ದರ್ಶನ್, ಅಂಬರೀಷ್, ನಿರ್ದೇಶಕ ಗುರುಪ್ರಸಾದ್ ಇನ್ನು ಹಲವರು ರಮೇಶ್ ಅವರೊಂದಿಗೆ ವೀಕೆಂಡ್ ಕಳೆಯಲಿದ್ದಾರೆ.

SCROLL FOR NEXT