ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ಸಿನೆಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪುನೀತ್ ರಾಜಕುಮಾರ್ ಅರ್ಪಿಸುತ್ತಿರುವ ಈ ಸಿನೆಮಾದಲ್ಲಿ ಶರಣ್ ನಾಯಕನಟನಾಗಿ ಅಭಿನಯಿಸುತ್ತಿದ್ದು, ಮಯೂರಿ ನಾಯಕ ನಟಿ. ಎನ್ ಎಸ್ ರಾಜಕುಮಾರ್ ನಿರ್ಮಿಸುತ್ತಿರುವ ಈ ಸಿನೆಮಾದ ಹಾಡೊಂದರ ಚಿತ್ರೀಕರಣ ಬೆಂಗಳೂರಿನಲ್ಲಿ ಸಂಪೂರ್ಣಗೊಂಡಿದೆ.
ಚಲನಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಕಥೆಯ ಬಗ್ಗೆ ಕುತೂಹಲ ಹುಟ್ಟಿಸಿದೆ. "ಚಿತ್ರತಂಡದಲ್ಲಿ ಸ್ವಲ್ಪ ಆಸಕ್ತಿ ಕೆರಳಿಸಲು ಹಾಡಿನ ಚಿತ್ರೀಕರಣದಿಂದ ಪ್ರಾರಂಭಿಸಿದೆವು. ಇದು ಟಪಾಂಗುಚ್ಚಿ ಹಾಡು. ಇದನ್ನು ನಾನೆ ಬರೆದಿದ್ದೇನೆ" ಎಂದು ವಿವರಿಸುತ್ತಾರೆ ನಿರ್ದೇಶಕ ಪವನ್.
ನಟರಾಜ ಪೆನ್ಸಿಲ್ ನಲ್ಲಿ ಸ್ಕ್ರಿಪ್ಟ್ ಬರೆಯುತ್ತಿದ್ದ ಪವನ್ ಅವರಿಗೆ 'ನಟರಾಜ ಸರ್ವಿಸ್' ಶೀರ್ಷಿಕೆ ಹೊಳೆಯಿತಂತೆ. "ಹಿರೋ ಹೆಸರು ನಟರಾಜ, ಹೀಗೇ ಯೋಚನೆ ಮಾಡುವಾಗ ನಾನು ಬರೆಯುತ್ತಿದ್ದ ಪೆನ್ಸಿಲ್ ಹೆಸರು ಕೂಡ ನಟರಾಜ, ಆದುದರಿಂದ ಈ ಶೀರ್ಷಿಕೆ ಹೊಳೆಯಿತು" ಎಂದು ಪವನ್ ತಿಳಿಸುತ್ತಾರೆ.
ಮುರಳಿ ನೃತ್ಯ ನಿರ್ದೇಶಕ. ಅನೂಪ್ ಸೀಳಿನ್ ಸಂಗೀತ ಮತ್ತು ಅರುಳ್ ಕೆ ಸೋಮಸುಂದರಂ ಛಾಯಾಗ್ರಹಣ ನಡೆಸುತ್ತಿದ್ದಾರೆ.