ದ ಪ್ಲ್ಯಾನ್ ಚಿತ್ರದಲ್ಲಿ ಅನಂತನಾಗ್ 
ಸಿನಿಮಾ ಸುದ್ದಿ

ರಾಕೆಟ್ ಸೇರಿದಂತೆ ನಾಳೆ ನಾಲ್ಕು ಚಿತ್ರಗಳ ಬಿಡುಗಡೆ

ಸಿನೆಮಾ ಬಿಡುಗಡೆಯ ದೀಪಾವಳಿ ಈ ವಾರವೂ ಮುಂದುವರೆದಿದೆ. ಕಳೆದ ಎರಡು ವಾರಗಳಲ್ಲಿ ೧೦ ಚಿತ್ರಗಳು ಬಿಡುಗಡೆಯಾಗಿದ್ದು ಈ ವಾರವೂ ಕನಿಷ್ಠ ೪ ಚಿತ್ರಗಳು

ಬೆಂಗಳೂರು: ಸಿನೆಮಾ ಬಿಡುಗಡೆಯ ದೀಪಾವಳಿ ಈ ವಾರವೂ ಮುಂದುವರೆದಿದೆ. ಕಳೆದ ಎರಡು ವಾರಗಳಲ್ಲಿ ೧೦ ಚಿತ್ರಗಳು ಬಿಡುಗಡೆಯಾಗಿದ್ದು ಈ ವಾರವೂ ಕನಿಷ್ಠ ೪ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ರಾಕೆಟ್, ದ ಪ್ಲ್ಯಾನ್, ಅಲೋನ್ ಮತ್ತು ಫರ್ಸ್ಟ್ ರ್ಯಾಂಕ್ ರಾಜು ಬಿಡುಗಡೆಯಾಗುತ್ತಿರುವ ಚಿತ್ರಗಳು.

ರಾಕೆಟ್: ಮೊದಲ ಬಾರಿಗೆ ನೀನಾಸಿಂ ಸತೀಶ್ ನಿರ್ಮಾಣಕ್ಕೆ ಇಳಿದಿರುವ ಚಿತ್ರವಿದು. ಶಿವಶಶಿ ನಿರ್ದೇಶನದ ಈ ಆಕ್ಷನ್-ರೊಮ್ಯಾಂಟಿಕ್ ಚಿತ್ರದಲ್ಲಿ ಸತೀಶ್ ಜೊತೆ ಐಶಾನಿ ಶೆಟ್ಟಿ ನಟಿಸಿದ್ದು, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಇದೆ.

ದಿ ಪ್ಲ್ಯಾನ್: ಅನಂತನಾಗ್ ಅವರಿಗೆ ಇದು ಪರ್ವ ಕಾಲ. ಹಲವಾರು ಸಿನೆಮಾಗಳಲ್ಲಿ ಮುಖ್ಯ ನಟರಾಗಿ ಕಾಣಿಸಿಕೊಳ್ಳುತ್ತಿರುವ ಸಮಯದಲ್ಲಿ ಮತ್ತೀಗ ಜೈಲ್ ಬ್ರೇಕ್ ಸಿನೆಮಾವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸಬರ ತಂಡವೇ ಈ ಚಿತ್ರದ ಹೊಣೆ ಹೊತ್ತಿದ್ದು ಕೀರ್ತಿ ಈ ಸಿನೆಮಾದ ನಿರ್ದೇಶಕ.

ಫರ್ಸ್ಟ್ ರ್ಯಾಂಕ್ ರಾಜು: ಬಾಲಿವುಡ್ ನಲ್ಲೂ ಮಿಂದೆದ್ದು ಬಂದ ದಿಗಂತ್ ಮತ್ತೆ ಕನ್ನಡ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಫ್ಟ್ವೇರ್ ಎಂಜಿನಿಯರ್ ನರೇಶ್ ಕುಮಾರ್ ಸಿನೆಮಾ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಹಾಸ್ಯಪ್ರಧಾನ ಈ ಚಿತ್ರಕ್ಕೆ ಗೋವರ್ಧನ್ ನಾಯಕ ನಟ.

ಅಲೋನ್: ಸಿಮ್ರನ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಲೋನ್ ಚಿತ್ರದ ನಿರ್ದೇಶಕ ಜೆ ಕೆ ಎಸ್. ವಸಿಷ್ಠ ನಾಯಕನಟ. ಸುಜಿತ್ ಶೆಟ್ಟಿ ಸಂಗೀತ ಸಂಯೋಜನೆಯ ಈ ಚಿತ್ರ ಕೂಡ ನಾಳೆ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT