ಬೆಂಗಳೂರು: ಅನೂಪ್ ಮತ್ತು ಅದಿತಿ ರಾವ್ ನಟನೆಯ, ಸಂತು ನಿರ್ದೇಶಿಸಿರುವ 'ಡವ್' ಚಿತ್ರೀಕರಣ ಮುಗಿಸಲು ಮೂರು ವರ್ಷ ತೆಗೆದುಕೊಂಡರು ಅಂತಿಮವಾಗಿ ನಾಳೆ ಶುಕ್ರವಾರ ಬಿಡುಗಡೆಯಾಗಲು ಸಿದ್ಧವಾಗಿದೆ.
ಆದರೆ ಸಿನೆಮಾ ಬಗ್ಗೆ ಭರವಸೆ ಹೊಂದಿರುವ ಸಂತು "ಸಿನೆಮಾ ತಡವಾಗಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದು ಹಲವಾರು ಜನರ ಶಾಂತಿ ಕೆಡಿಸಿತು, ಆದರೆ ಎಲ್ಲವೂ ನಮ್ಮ ಕೈನಲ್ಲಿರುವುದಿಲ್ಲ. ಈಗ ಸಿನೆಮಾ ಥಿಯೇಟರ್ ಗಳಿಗೆ ಬರುತ್ತಿರುವುದು ಸಂತಸ ತಂದಿದೆ" ಎಂದು ನಿರ್ಮಾಪಕ ಸಾ ರಾ ಗೋವಿಂದ್ ಅವರ ಮಗ ಅನೂಪ್ ಅವರನ್ನು ಪರಿಚಯಿಸುತ್ತಿರುವ ಈ ಸಿನೆಮಾದ ಬಗ್ಗೆ ಹೇಳುತ್ತಾರೆ.
ಸಿನೆಮಾ ಬಿಡುಗಡೆ ತಡವಗಿದ್ದರೂ ವಿಷಯ ಮಾತ್ರ ಈಗಲೂ ಫ್ರೆಶ್ ಎನ್ನುತ್ತಾರೆ ಸಂತು. "ಇದು ಪ್ರೀತಿಯ ವಿಷಯವಾಗಿರುವುದರಿಂದ ನಮ್ಮ ಮನಸ್ಸಿನಲ್ಲಿ ಯಾವಾಗಲೂ ಆಹ್ಲಾದಕರವಾಗಿರುತ್ತದೆ. ಇದು ಹುಡುಗನ ಹಿಂದೆ ಹುಡುಗಿ ಓಡಿ ಹೋಗುವ ಚಿತ್ರಕಥೆಯಲ್ಲ. ಸೂಕ್ಷ್ಮವಾದ ಕಥೆ ಹೊಂದಿದೆ. ಎಲ್ಲ ಬಗೆಯ ಜನರೂ ನೋಡಬಹುದಾದ ಸಿನೆಮಾ ಇದು" ಎನ್ನುತ್ತಾರೆ ಸಂತು.
ಬಿಕೆ ಶ್ರೀನಿವಾಸ್ ನಿರ್ಮಾಣದ ಈ ಸಿನೆಮಾದಲ್ಲಿ ಹಿರಿಯ ನಟರಾದ ಅವಿನಾಶ್, ಶರತ್ ಲೋಹಿತಾಶ್ವ, ರಂಗಾಯಣ ರಘು ಕೂಡ ನಟಿಸಿದ್ದಾರೆ.