ನಟ ದರ್ಶನ್ ತನ್ನ ಗೆಳೆಯನಿಗಾಗಿ ಕಾಲ್ ಶೀಟ್ ಕೊಟ್ಟಿರುವ ಸುದ್ದಿಯೊಂದು ಸ್ಯಾಂಡಲ್ ವುಡ್'ನಲ್ಲಿ ಸಖತ್ತಾಗೆ ಸೌಂಡ್ ಮಾಡಿದೆ.
ದರ್ಶನ್ ಚಿತ್ರದ ಖಾಯಂ ಹಾಸ್ಯನಟ ಬುಲೆಟ್ ಪ್ರಕಾಶ್ ನಿರ್ಮಿಸಲಿರುವ ಹೊಸ ಚಿತ್ರದಲ್ಲಿ ಅಭಿನಯಿಸಲು 'ದರ್ಶನ್ ಓಕೆ ಅಂದಿದ್ದಾರೆ. ಬುಲೆಟ್ ಪ್ರಕಾಶ್ ಗೆ ದರ್ಶನ್'ರನ್ನು ನಾಯಕರನ್ನಾಗಿಸಿ ಚಿತ್ರ ಮಾಡುವ ಆಸೆ ಇತ್ತಂತೆ ,ಇದನ್ನು ಅವರ ಆಪ್ತರ ಬಳಿ ಹೇಳಿಕೊಂಡಿದ್ದರು.
ಆದರೆ ಚಾಲೆಂಜಿಂಗ್ ಸ್ಟಾರ್ 3 ವರ್ಷದ ಕಾಲ್ ಶೀಟ್ ಈಗಾಗಲೇ ಬುಕ್ ಆಗಿರುವುದರಿಂದ ಡೇಟ್ ಸಿಗುವುದು ಡೌಟು ಅಂತ ಬುಲೆಟ್ ಪ್ರಕಾಶ್ ಚಿತ್ರ ನಿರ್ಮಿಸುವ ಕನಸನ್ನು ಬದಿಗೊತ್ತಿದ್ದರು. ಈ ವಿಷಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿವಿಗೂ ಬಿದ್ದಿತ್ತು. ಗೆಳೆಯನನ್ನು ಸೀದಾ ಚಿತ್ರೀಕರಣ ಸ್ಟಾಟ್'ಗೆ ಕರೆಸಿದ ದರ್ಶನ್ ನಿನಗಾಗಿ ಸಿನೆಮಾ ಮಾಡ್ತೀನಿ ತಯಾರಾಗಿರು ಎಂದು ಬುಲೆಟ್ ಪ್ರಕಾಶ್'ಗೆ ಹೇಳಿದ್ದಾರೆ. ತೀವ್ರ ಖುಷಿಗೊಂಡಿರುವ ಬುಲೆಟ್ ಪ್ರಕಾಶ್ ಈ ಹೊಸ ಚಿತ್ರದ ನಿರ್ದೇಶಕ ಮತ್ತು ಮೂಹೂರ್ತ ದಿನಾಂಕದ ಬಗ್ಗೆ ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ.
ದರ್ಶನ್ ತೂಗುದೀಪ್ 'ಜಗ್ಗುದಾದ' ಚಿತ್ರದ ಮೂಲಕ ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಬರುವೆ ಎಂದು ಭರವಸೆ ನೀಡಿದ್ದಾರೆ. ಸದ್ಯ ಜಗ್ಗುದಾದ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.