ಆಸ್ಕರ್ ಗೆಲ್ಲುವುದು ಬೇಡ ಎಂದ ಜಾನಿ ಡೆಪ್
ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾಗಿರುವುದಕ್ಕೆ ಸಂತಸಗೊಂಡಿರುವ ಹಾಲಿವುಡ್ ನಟ ಜಾನಿ ಡೆಪ್, ಆಸ್ಕರ್ ಎಂದಿಗೂ ಗೆಲ್ಲುವುದು ಬೇಡ ಎಂದಿದ್ದಾರೆ.
ಲಂಡನ್: ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾಗಿರುವುದಕ್ಕೆ ಸಂತಸಗೊಂಡಿರುವ ಹಾಲಿವುಡ್ ನಟ ಜಾನಿ ಡೆಪ್, ಆಸ್ಕರ್ ಎಂದಿಗೂ ಗೆಲ್ಲುವುದು ಬೇಡ ಎಂದಿದ್ದಾರೆ.
'ಬ್ಲ್ಯಾಕ್ ಮಾಸ್' ಸಿನೆಮಾದ ನಟನೆಗಾಗಿ ಆಸ್ಕರ್ ನಾಮಾಂಕಿತವಾಗಿರುವ ನಟ ನನಗೆ ಆಸ್ಕರ್ ಗೆಲ್ಲಲು ಇಷ್ಟವಿಲ್ಲ ಏಕೆಂದರೆ ಅದು ಮತ್ತೊಬ್ಬನ ಜೊತೆ ಸ್ಪರ್ಧಿಸಿದಂತೆ ಎಂದು ತಿಳಿಸಿದ್ದಾರೆ ಎಂದು ದ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ನಾನು ಯಾರ ಜೊತೆಗೂ ಸ್ಪರ್ಧೆಗೆ ಇಳಿದಿಲ್ಲ ಎಂದು ೫೨ ವರ್ಷದ ನಟ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಪೈರೇಟ್ಸ್ ಆಫ್ ದ ಕೆರೆಬಿಯನ್ ಮತ್ತು ಫೈಂಡಿಂಗ್ ನೆವೆರ್ಲ್ಯಾಂಡ್ ಮತ್ತು ಸ್ವೀನಿ ಟಾಡ್ ಸಿನೆಮಾಗಳ ನಟನೆಗಾಗಿ ಈ ನಟ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು.
ಅಮೆರಿಕಾದ ವಿಮರ್ಶಕರಿಂದ 'ಬ್ಲ್ಯಾಕ್ ಮಾಸ್' ಸಿನೆಮಾಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.