ಸಿನಿಮಾ ಸುದ್ದಿ

ಮತ್ತೆ ಬಣ್ಣ ಹಚ್ಚಲಿದ್ದಾರೆಯೇ ಪ್ರೇಮಾ?

Sumana Upadhyaya

ಪ್ರೇಮಾ...ನಮ್ಮೂರ ಮಂದಾರ ಹೂವೆ..., ಓಂ, ಯಜಮಾನ, ಕನಸುಗಾರ ಹೀಗೆ ಅನೇಕ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿದ್ದವರು, ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ರಾಣಿಯಾಗಿ ಮೆರೆದವರು. ಈ ಕೊಡಗಿನ ಕುವರಿ ವಿವಾಹವಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಅಷ್ಟೇ ಏಕೆ ಸಾರ್ವಜನಿಕವಾಗಿ ಕಾಣುವುದು ಕೂಡ ಅಪರೂಪವಾಗಿಬಿಟ್ಟಿತ್ತು.

ದೀರ್ಘ ವರ್ಷಗಳ ವಿರಾಮದ ಬಳಿಕ ಇದೀಗ ಮತ್ತೆ ಪ್ರೇಮಾ ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ ಅನ್ನುವ ಸುದ್ದಿ ಕೇಳಿಬರುತ್ತಿದೆ. ಮೊನ್ನೆ ಶಿವರಾಜ್ ಕುಮಾರ್  ಅವರ ಅಭಿನಯದ  ಶ್ರೀಕಂಠ ಸಿನಿಮಾದ ಮುಹೂರ್ತ ನಡೆಯಿತು. ಅಲ್ಲಿ ಪ್ರೇಮಾ ಕಾಣಿಸಿಕೊಂಡಿದ್ದರು. ಹಾಗಾಗಿ ಹಿಟ್ ಚಿತ್ರಗಳನ್ನು ನೀಡಿದ ಜೋಡಿ ಮತ್ತೆ ಒಂದಾಗಿ ಅಭಿನಯಿಸುತ್ತಿದ್ದಾರೆ ಅನ್ನೋ ಸುದ್ದಿ ಕೇಳಿಬರುತ್ತಿದೆ. ಆದರೆ ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಕೂಡ ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿಲ್ಲ. 

SCROLL FOR NEXT