ಪ್ರಜ್ವಲ್ ದೇವರಾಜ್, ರಾಗಿಣಿ ಚಂದ್ರನ್
ಬೆಂಗಳೂರು: ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಅವರೊಂದಿಗೆ ಸ್ಯಾಂಡಲ್ವುಡ್ ನಟ ಪ್ರಜ್ವಲ್ ದೇವರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅರಮನೆ ಮೈದಾನದಲ್ಲಿ ಬೆಳಗ್ಗೆ 10.30ಕ್ಕೆ ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ಪ್ರಜ್ವಲ್ ದೇವರಾಜ್ ರಾಗಿಣಿ ಕೈಹಿಡಿದರು. ಒಗ್ಗಲಿಗ ಹಾಗೂ ಅಯ್ಯರ್ ಪದ್ಧತಿಯಂತೆ ಮದುವೆ ಶಾಸ್ತ್ರ ನೆರವೇರಿತು.
ರಮಾ ಮತ್ತು ಚಂದ್ರನ್ ಬಾಲು ಅವರ ಜೇಷ್ಠ ಪುತ್ರಿಯಾಗಿರುವ ರಾಗಿಣಿ ಚಂದ್ರನ್, ಪ್ರಜ್ವಲ್‌ಗೆ ಬಾಲ್ಯದ ಗೆಳತಿಯಾಗಿದ್ದು ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈಗ ಇಬ್ಬರು ವಿವಾಹವಾಗುವ ಮೂಲಕ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ರಾಗಿಣಿ ಚಂದ್ರನ್ ಮಾಡೆಲ್ ಹಾಗೂ ಪ್ರತಿಭಾವಂತ ನೃತ್ಯಗಾರ್ತಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಸಹ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇವರ ವಿವಾಹ ಮಹೋತ್ಸವಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು, ಗಣ್ಯರು, ರಾಜಕಾರಣಿಗಳು ಸೇರಿದಂತೆ ತಮಿಳು, ತೆಲಗು ಚಿತ್ರರಂಗದ ನಟ-ನಟಿಯರೂ ಸಹ ಆಗಮಿಸಿದ್ದರು.