ಸಿನಿಮಾ ಸುದ್ದಿ

ಕಿರಗೂರಿನ ಗಯ್ಯಾಳಿಗಳು ನನ್ನ ಚೊಚ್ಚಲ ಚಿತ್ರ: ಶ್ವೇತಾ

Guruprasad Narayana

ಬೆಂಗಳೂರು: ರಂಗಭೂಮಿಯಿಂದ ಕಿರುತೆರೆಗೆ ಜಿಗಿದು ನಂತರ ಬೆಳ್ಳಿತೆರೆಯಲ್ಲಿ 'ಸೈಬರ್ ಯುಗದೊಳ್ ನವ ಯುವ ಪ್ರೇಮ ಕಾವ್ಯಂ', 'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ಮತ್ತು 'ಫೇರ್ ಅಂಡ್ ಲವ್ಲಿ' ಸಿನೆಮಾಗಳಲ್ಲಿ ನಟಿಸಿರುವ ಶ್ವೇತಾ ಶ್ರೀವಾತ್ಸವ್, ಸುಮನಾ ಕಿತ್ತೂರು ನಿರ್ದೇಶನದ 'ಕಿರಗೂರಿನ ಗಯ್ಯಾಳಿಗಳು' ನನ್ನ ಮೊದಲ ಸಿನೆಮಾ ಎನ್ನುತ್ತಾರೆ. "ಯಾವುದೇ ನಟಿಗೆ ತನ್ನ ಮೊದಲ ಸಿನೆಮಾ ಎಂದು ಹೇಳಿಕೊಳ್ಳಲು ಅದಕ್ಕಾಗಿ ಅತಿ ಹೆಚ್ಚು ಶ್ರಮವಹಿಸಿರಬೇಕು. ನಾನು ಕಿರಗೂರಿನ ಗಯ್ಯಾಳಿಗಳಲ್ಲಿ ನಟಿಸುವಾಗ ಇದೇ ನನ್ನ ಚೊಚ್ಚಲ ಚಿತ್ರ ಎಂದೆನಿಸಿತು" ಎನ್ನುತ್ತಾರೆ ನಟಿ.

ಎರಡು ದಿನಗಳ ಹಿಂದೆ ಡಬ್ಬಿಂಗ್ ಮುಗಿಸಿರುವ ಶ್ವೇತಾ ಚಿತ್ರೀಕರಣಕ್ಕಾಗಿ ಹಾಕಿದ ಶ್ರಮ ಒಳ್ಳೆಯ ಅನುಭವ ಎನ್ನುತ್ತಾರೆ. "ಯಾವುದೇ ಸರಿಯಾದ ಸೌಲಭ್ಯಗಳಿಲ್ಲದ ಹಳ್ಳಿಯಲ್ಲಿ ಇರಬೇಕಾಯಿತು. ಚಿತ್ರೀಕರಣ ಮುಗಿಯುವವರೆಗೂ ಬರಿಗಾಲಿನಲ್ಲೇ ಇದ್ದೆ. ಇಂತಹ ಸಿನೆಮಾ ಮಾಡುವಾಗ ಅದು ಸಾಮಾನ್ಯ ಆದರೆ ಮನೆಯಲ್ಲೂ ಚಪ್ಪಲಿ ತೊಡುವ ನನಗೆ ಇದು ಕಷ್ಟವಾಯಿತು. ಇಂತಹ ಸಣ್ಣ ಸಂಗತಿಗಳು ಹಳ್ಳಿ ಜೀವನದ ಬಗ್ಗೆ ಅರಿಯಲು ಸಹಾಯ ಮಾಡಿದವು" ಎನ್ನುತ್ತಾರೆ.

ಕನ್ನಡದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆ 'ಕಿರಗೂರಿನ ಗಯ್ಯಾಳಿಗಳು' ಆಧಾರಿತ ಸಿದ್ಧವಾಗಿರುವ ಈ ಸಿನೆಮಾಗೆ ಸ್ಕ್ರಿಪ್ಟ್ ಬರೆದಿರುವವರು ಅಗ್ನಿ ಶ್ರೀಧರ್. ಸಿನೆಮಾದಲ್ಲಿ ಶ್ವೇತಾ ಅಲ್ಲದೆ ಎಸ್ ನಾರಾಯಣ್, ಬಿ ಜಯಶ್ರೀ, ಅಚ್ಚುತ್ ಕುಮಾರ್, ಸುಕೃತಾ ವಾಗ್ಲೆ, ಸೋನು, ಕಿಶೋರ್ ಕೂಡ ನಟಿಸಿದ್ದಾರೆ. ಮನೋಹರ್ ಜೋಷಿ ಅವರ ಛಾಯಾಗ್ರಹಣವಿದ್ದು ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ.

SCROLL FOR NEXT