ಸುಮಂತ್ ಶೈಲೇಂದ್ರ 
ಸಿನಿಮಾ ಸುದ್ದಿ

'ಬೆತ್ತನಗೆರೆ'ಯಲ್ಲಿ ಭೂಗತ ದೊರೆಯಾಗಿ ಸುಮಂತ್

ಹಲವಾರು ಬಗೆತ ಪಾತ್ರಗಳಲ್ಲಿ ನಟಿಸಲು ಇಚ್ಛಿಸುವ ಸುಮಂತ್ ಶೈಲೇಂದ್ರ, ಬಿಜಿ ಮೋಹನ್ ಗೌಡ ನಿರ್ದೇಶನದ ಬೆತ್ತನೆಗೆರೆ ಸಿನೆಮಾದಲ್ಲಿ ಭೂಗತ ದೊರೆಯ ವೇಷ

ಬೆಂಗಳೂರು: ಹಲವಾರು ಬಗೆತ ಪಾತ್ರಗಳಲ್ಲಿ ನಟಿಸಲು ಇಚ್ಛಿಸುವ ಸುಮಂತ್ ಶೈಲೇಂದ್ರ, ಬಿಜಿ ಮೋಹನ್ ಗೌಡ ನಿರ್ದೇಶನದ ಬೆತ್ತನೆಗೆರೆ ಸಿನೆಮಾದಲ್ಲಿ ಭೂಗತ ದೊರೆಯ ವೇಷ ಹಾಕಿದ್ದಾರೆ. ನಿಜ ಜೀವನದಲ್ಲಿ ರೌಡಿಗಳಾದ ಬೆತ್ತನಗೆರೆ ಸೀನ ಮತ್ತು ಶಂಕರ ಇವರ ಜೀವನಾಧಾರಿತ ಸಿನೆಮಾ ಇದು.

"ದಿಲ್ವಾಲೇ ಮತ್ತು ತಿರುಪತಿ ಎಕ್ಸ್ಪ್ರೆಸ್ಸ್ ಕಮರ್ಶಿಯಲ್ ಸಿನೆಮಾಗಳಲ್ಲಿ ಹಾಸ್ಯದ ಜೊತೆ ಪ್ರಯೋಗ ಮಾಡಿದೆ. ಬಿಡುಗಡೆಯಾಗಬೇಕಿರುವ 'ಭಲೇ ಜೋಡಿ' ರೋಮ್ಯಾಂಟಿಕ್ ಕಾಮಿಡಿ ಚಿತ್ರ. ಬೆತ್ತನೆಗೆರೆ ಆಕ್ಷನ್ ಚಿತ್ರ, ಇದು ಸ್ ಗೆ ಇಷ್ಟವಾಗುವಂತಹ ವಿಷಯ" ಎನುತ್ತಾರೆ ಸುಮಂತ್.

ಮತ್ತೊಬ್ಬ ನಾಯಕ ನಟ ಅಕ್ಷಯ್ ಅವರೊಂದಿಗೆ ಬೆತ್ತನಗೆರೆಯಲ್ಲಿ ನಟಿಸಿರುವ ಸುಮಂತ್ "ಬೆತ್ತನಗೆರೆ ಸಹೋದರರ ಜೀವನ ಬಹಳ ಆಸಕ್ತಿ ಮೂಡಿಸಿತು. ನಾನು ಹೆಚ್ಚಾಗಿ ಕ್ರೈಮ್ ಸುದ್ದಿ ಓದುವುದಿಲ್ಲ. ಈ ರೌಡಿ ಸಹೋದರರ ಸಂಬಧಿಗಳ ಬಗ್ಗೆ ನಿರ್ದೇಶಕ ತಿಳಿಸಿದಾಗ ನೆಲಮಂಗಲದಲ್ಲಿ  ನನಗೆ ಗೊತ್ತಿರುವ ಜನರ ಬಳಿ ಸೀನ ಮತ್ತು ಶಂಕರರ ಬಗ್ಗೆ ತಿಳಿದುಕೊಂಡೆ. ಈ ಸಂಗತಿಗಳೆಲ್ಲಾ ತಿಳಿದ ಮೇಲೆ ಈ ಪಾತ್ರದಲ್ಲಿ ನಟಿಸಲು ಆಸಕ್ತಿ ಹೆಚ್ಚಾಗುತ್ತಾ ಹೋಯಿತು" ಎನ್ನುತ್ತಾರೆ ನಟ.

ರೌಡಿಗಳ ಬೆಗ್ಗೆ ಸಿನೆಮಾ ಮಾಡುವುದ ಎಷ್ಟು ಮುಖ್ಯ ಎಂದು ಸುಮಂತ್ ಅವರನ್ನು ಪ್ರಶ್ನಿಸಿದರೆ "ಇಂದು ಜನ ಕೇವಲ ಮನರಂಜನೆಗಾಗಿ ಸಿನೆಮಾ ನೋಡುತ್ತಾರೆ, ಸಿನೆಮಾದಲ್ಲಿ ಸಂದೇಶ ಇದೆಯೇ, ಅದರಿಂದ ಏನಾದರೂ ಕಲಿಯಬಹುದೇ ಎಂಬುದು ಅವರಿಗೆ ಬೇಕಾಗಿಲ್ಲ. ತಮ್ಮ ಒತ್ತಡ ಜೀವನದಿಂದ ತಪ್ಪಿಸಿಕೊಳ್ಳಲು ಜನ ಸಿನೆಮಾ ನೋಡುತ್ತಾರೆ, ಪ್ರೀತಿ ಕೌಟುಂಬಿಕ ಭಾವನೆಗಳಿಗೂ ನೋಡುತ್ತಾರೆ, ಈ ಸಿನೆಮಾದಲ್ಲಿ ರೌಡಿ ಸಹೋದರರಿಗೆ ಏನಾಯಿತು ಎಂದು ಹೇಳಿದ್ದೇವೆ. ವಿನೋದ್ ಕಾಂಬ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದು, ಹಾಸ್ಯವೂ ಬಹಳಷ್ಟಿದೆ" ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?