ಬೆಂಗಳೂರು: ಬಹುತಾರಾಗಣದ ಇಂದ್ರಜಿತ್ ಲಂಕೇಶ ಅವರ ಲವ್ ಯು ಆಲಿಯಾ ಸಿನೆಮಾಗೆ ಸೆನ್ಸಾರ್ ಮಂಡಲಿ ಯು/ಎ ಪ್ರಮಾಣ ಪತ್ರ ನೀಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ.
ಯು/ಎ ಪ್ರಮಾಣಪತ್ರದಿಂದ ವಿಚಲಿತರಾಗದ ನಿರ್ದೇಶಕ, 'ಎ' ನೀಡಿರುವುದು ಏಕೆಂದರೆ 'ಕಾಮಾಕ್ಷಿ..' ಐಟಮ್ ಹಾಡು ಮತ್ತು ಒಂದು ಲಿಪ್-ಲಾಕ್ ದೃಶ್ಯವಿರುವುದರಿಂದ ಎಂದಿದ್ದಾರೆ. "ನಾನು ಸೆನ್ಸಾರ್ ಮಂಡಲಿಯೊಂದಿಗೆ ವಾದ ಮಾಡಲು ಇಷ್ಟ ಪಡುವುದಿಲ್ಲ. ಯು/ಎ ಪ್ರಮಾಣ ಪತ್ರ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಏಕೆಂದರೆ ಅದು ನನ್ನ ಸಿನೆಮಾದ ಶೀರ್ಷಿಕೆಯ ತುಂಡು ಅವತಾರ" ಎಂದು ನಗುತ್ತಾರೆ.
ಗಣೇಶ ಚತುರ್ಥಿಗೆ ಸೆಪ್ಟಂಬರ್ ೧೭ ಕ್ಕೆ ಬಿಡುಗಡೆ ಮಾಡಲು ಇಂದ್ರಜಿತ್ ಚಿಂತಿಸುತ್ತಿದ್ದಾರೆ. ರವಿಚಂದ್ರನ್, ಭೂಮಿಕಾ ಚಾವ್ಲಾ, ಚಂದನ್, ಸಂಗೀತಾ ಚೌಹಾನ್, ಸಾಧು ಕೋಕಿಲಾ, ಸುಧಾರಾಣಿ. ಶಕೀಲಾ, ಸನ್ನಿ ಲಿಯೋನ್ ಇನ್ನಿತರು ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಸೆನ್ಸಾರ್ ಮಂಡಲಿಯ ವಾದ
ಲವ್ ಯು ಆಲಿಯಾ ಸಿನೆಮಾದಲ್ಲಿ ದ್ವಂದ್ವಾರ್ಥ ನೀಡುವ ಅತಿಯಾದ ಡಬಲ್ ಮೀನಿಂಗ್ ಜೋಕುಗಳನ್ನು ಬಳಸಿರುವುದರಿಂದ ಯು/ಎ ಪ್ರಮಾಣಪತ್ರ ನೀಡಲಾಗಿದೆ ಎನ್ನುತ್ತಾರೆ ಮಂಡಲಿಯ ಅಧಿಕಾರಿ ಎಂ ನಾಗೇಂದ್ರ ಸ್ವಾಮಿ. "ನಿರ್ದೇಶಕನಿಗೆ ಆ ಸಂಭಾಷಣೆಗಳನ್ನು ತೆಗೆದು ಹಾಕಲು ಕೇಳಿದೆವು. ಆದರೆ ಕಥೆಗೆ ಪೂರವಾಕವಾಗಿದ್ದು ಅವುಗಳು ಬೇಕೆಂದರು. ಸಾಧು ಕೋಕಿಲಾ ಅವರ ಒಂದು ದೃಶ್ಯಾವಳಿಗೆ ಕತ್ತರಿ ಹಾಕಲು ಹೇಳಿದೆವು. ಸನ್ನಿ ಲಿಯೋನ್ ಅವರ ಹಾಡು ಕೂಡ 'ಯು' ಪ್ರಾಮಾಣ ಪತ್ರಕ್ಕೆ ಒಗ್ಗುವುದಿಲ್ಲ" ಎನ್ನುತ್ತಾರೆ.