ಬಿಪಾಶಾ ಬಸು 
ಸಿನಿಮಾ ಸುದ್ದಿ

ಬಿಪಾಶಾ ಬಸು ಕನ್ನಡಕ್ಕೆ 'ಕಮಿಂಗ್ ಸೂನ್‌'

ಯಾವತ್ತೋ ಬರಬೇಕಿದ್ದ ಬಸ್ಸು ತಡವಾಗಿಯಾದರೂ ಆಗಮಿಸುತ್ತಿದೆ! ಬಾಲಿವುಡ್ ಬೆಡಗಿ ಬಿಪಾಶಾ ಬಸು ಕನ್ನಡಕ್ಕೆ ಬರುವುದು ಬಹುತೇಕ ಖಚಿತವಾಗಿದೆ.

ಯಾವತ್ತೋ ಬರಬೇಕಿದ್ದ ಬಸ್ಸು ತಡವಾಗಿಯಾದರೂ ಆಗಮಿಸುತ್ತಿದೆ! ಬಾಲಿವುಡ್ ಬೆಡಗಿ ಬಿಪಾಶಾ ಬಸು ಕನ್ನಡಕ್ಕೆ ಬರುವುದು ಬಹುತೇಕ ಖಚಿತವಾಗಿದೆ.

ಯುವ ನಿರ್ದೇಶಕ ವೇಣುಗೋಪಾಲ್ ಅವರು ತ್ರಿಭಾಷಾ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಬಿಪಾಶಾ ಬಸು ಅವರನ್ನು ಸಂಪರ್ಕಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಅಕ್ಟೋಬರ್‌ನಲ್ಲಿ ಬಿಪಾಶಾ ಕನ್ನಡದಲ್ಲಿ ಉಲಿಯಲಿದ್ದಾರೆ.

ಚಿತ್ರದ ಹೆಸರು 'ಕಮಿಂಗ್ ಸೂನ್‌'. ಈ ಮೊದಲು 'ಟೆಕೀಲಾ' ಎಂಬ ಶೀರ್ಷಿಕೆಯಲ್ಲಿ ಕಿಕ್ ಮೇಲ್ ಕಿಕ್ ಎಂಬ ಟ್ಯಾಗ್‌ಲೈನ್‌ನೊಂದಿಗೆ ಚಿತ್ರ ಸೆಟ್ಟೇರಿತ್ತು. ಇದು ವೇಣುಗೆ ಎರಡನೇ ಚಿತ್ರ.

ಚೊಚ್ಚಲ ಚಿತ್ರ 'ಟ್ಯೂಬ್‌ಲೈಟ್‌' ಇನ್ನೆರಡು ತಿಂಗಳಲ್ಲಿ ಹೊರತರುವ ಪ್ರಯತ್ನದಲ್ಲಿರುವ ವೇಣು 'ಕಮಿಂಗ್ ಸೂನ್‌' ಎಂದು ತೆಲುಗು, ತಮಿಳು ಮತ್ತು ಕನ್ನಡ ಮೂರು ಭಾಷೆಯಲ್ಲಿ ತರುತ್ತಿದ್ದಾರೆ. ನಂತರ ಹಿಂದಿಗೆ ಡಬ್ ಆಗಲಿದೆ.

ಇನ್ನೊಂದು ವಿಶೇಷವೆಂದರೆ ತಮಿಳಿನಿ ಲಿಟ್ಲ್ ಸೂಪರ್ ಸ್ಟಾರ್ ಸಿಂಬು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಚಿನ್ನಸ್ವಾಮಿ ಮೈದಾನದಲ್ಲಿ CSK ಮಣಿಸಿದ RCB, ಚೆನ್ನೈಗೆ ಸತತ 3ನೇ ಸೋಲು!

ಗುಜರಾತ್ ಜನರು ಅನಕ್ಷರಸ್ಥರು..; ಮೋದಿ, ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸಿದ್ದಾರೆ: Mallikarjun Kharge

ಟ್ರಂಪ್ 48 ಗಂಟೆಗಳ ಗಡುವು ಬೆನ್ನಲ್ಲೇ ಇರಾನ್‌ನ ಮತ್ತೊಬ್ಬ IRGC ಹಿರಿಯ ಕಮಾಂಡರ್ ಹತ್ಯೆಗೈದ ಇಸ್ರೇಲ್!

Operation Eagle Claw ವೈಫಲ್ಯ, ಮಣ್ಣು ಮುಕ್ಕಿದ್ದು ಮರೆತುಬಿಟ್ರಾ? 'ಈ ಸಂದೇಶ' ನೆನಪಿಡಿ: US Crazy Bast*rds ಪೋಸ್ಟ್ ಗೆ ಇರಾನ್ ವ್ಯಂಗ್ಯ!

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಸುರಿಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB

SCROLL FOR NEXT