ಕೆಂಡಸಂಪಿಗೆಯಲ್ಲಿ ಮಾನ್ವಿತಾ ಮತ್ತು ವಿಕ್ಕಿ 
ಸಿನಿಮಾ ಸುದ್ದಿ

ಘಮಘಮಿಸಲಿದೆ ಕೆಂಡಸಂಪಿಗೆ

ದುನಿಯಾ ಸೂರಿಯವರ ಹೊಸ ಪ್ರಯೋಗ 'ಕೆಂಡಸಂಪಿಗೆ: ಪಾರ್ಟ್ ೨ ಗಿಣಿಮರಿ ಕೇಸ್" ನಾಳೆ ಬಿಡುಗಡೆಯಾಗಲಿದ್ದು ಸಿನೆಮಾ ಪ್ರೇಕ್ಷಕರ ಮನಸೂರೆಗೊಳ್ಳುವ ಬಗ್ಗೆ

ಬೆಂಗಳೂರು: ದುನಿಯಾ ಸೂರಿಯವರ ಹೊಸ ಪ್ರಯೋಗ 'ಕೆಂಡಸಂಪಿಗೆ: ಪಾರ್ಟ್ ೨ ಗಿಣಿಮರಿ ಕೇಸ್" ನಾಳೆ ಬಿಡುಗಡೆಯಾಗಲಿದ್ದು ಸಿನೆಮಾ ಪ್ರೇಕ್ಷಕರ ಮನಸೂರೆಗೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ನಿರ್ಮಾಪಕ.

"ಸಮಯ ಎನ್ನುವುದು ಅನಿರೀಕ್ಷಿತ ಮತ್ತು ಅದು ತನ್ನ ಸಿನೆಮಾವನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡುತ್ತಿದ್ದೇನೆಯೇ ಎಂಬ ಸಂದೇಹವನ್ನು ಎಲ್ಲ ನಿರ್ದೇಶಕನಲ್ಲಿಯೂ ಹುಟ್ಟಿಸುತ್ತದೆ. ಈ ಸಿನೆಮಾವನ್ನು ೧೧ ತಿಂಗಳ ಹಿಂದೆ ಮಾಡಿದ್ದು. ಆಗ ವಾಣಿಜ್ಯಾತ್ಮಕ ಸಿನೆಮಾಗಳು ಮುಂಚೂಣಿಯಲ್ಲಿ ಸದ್ದು ಮಾಡುತ್ತಿದ್ದವು. ರಂಗಿತರಂಗ, ಆಟಗಾರ ಇಂತಹ ಸಿನೆಮಾಗಳು ಭರವಸೆ ಮೂಡಿಸುತ್ತಿರುವ ಸಮಯದಲ್ಲಿ ಕೆಂಡಸಂಪಿಗೆ ಬಿಡುಗಡೆಯಾಗುತ್ತಿದೆ. ನಾನು ದುನಿಯಾ ಮಾಡಿದ ದಿನಕ್ಕೆ ಹೋಲಿಸಿದರೆ ಇಂದು ಸಿನೆಮಾ ನೋಡುವ ಪರಿ ಬದಲಾಗಿದೆ. ಅದು ಒಳ್ಳೆಯದೇ" ಎನ್ನುತ್ತಾರೆ ನಿರ್ದೇಶಕ ಸೂರಿ.

ತಮ್ಮ ಹಿಂದಿನ ಸಿನೆಮಾಗಳಾದ ಜಾಕಿ, ಅಣ್ಣಾಬಾಂಡ್, ಕಡ್ಡಿಪುಡಿ ಅಥವಾ ಈಗ ನಿರ್ದೇಶಿಸುತ್ತಿರುವ ದೊಡ್ಮನೆ ಹುಡುಗ ಸಿನೆಮಾಗಳಿಗೆ ಹೋಲಿಸಿದರೆ ಇಬ್ಬರು ಹೊಸಬ ನಟರಾದ ಮಾನ್ವಿತಾ ಮತ್ತು ವಿಕ್ಕಿ ನಟಿಸಿರುವ ಈ ಸಿನೆಮಾ ವಿಭಿನ್ನ ಮತ್ತು ಸಣ್ಣ ಸಂಭ್ರಮ ಎನ್ನುತ್ತಾರೆ, "ಹೊಸ ನಟರಿದ್ದು ಸಣ್ಣ ಬಜೆಟ್ ಆದರೂ ಕೆಂಡಸಂಪಿಗೆ ಅದೇ ಮಟ್ಟದ ಸಂಭ್ರಮ ನೀಡುತ್ತದೆ. ಸೆನ್ಸಾರ್ ಮಂಡಲಿ ಯಾವುದೇ ಭಾಗಕ್ಕೂ ಆಕ್ಷೇಪಣೆ ಎತ್ತಿಲ್ಲ. ಮಾನ್ವಿತಾ ರೇಡಿಯೋ ಜಾಕಿ ಅನುಭವ ಇದ್ದವಳು. ವಿಕ್ಕಿಗೆ ಸಿನೆಮಾದ ವಿವಿಧ ಆಯಾಮಗಳ ಬಗ್ಗೆ ಗೊತ್ತಿತ್ತು. ಅವರಿಗೆ ಸಿನೆಮಾ ಚನ್ನಾಗಿ ಅರ್ಥವಾಗಿ ನಟಿಸಿದ್ದಾರೆ" ಎನ್ನುತ್ತಾರೆ.

"ಆತ್ಮವಿಶ್ವಾಸದಿಂದ ಸಿನೆಮಾ ಬಿಡುಗಡೆ ಮಾಡುತ್ತಿದ್ದು, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ" ಎನ್ನುತಾರೆ ಸೂರಿ. ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫಿ ಮತ್ತು ಹರಿಕೃಷ್ಣ ಅವರ ಸಂಗೀತ ಇದೆ ಸಿನೆಮಾಗೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel