ಕೊಂಕಣಾ ಸೇನ್ ಶರ್ಮಾ ಮತ್ತು ರಣವೀರ್ ಶೋರೆ 
ಸಿನಿಮಾ ಸುದ್ದಿ

ಕೊಂಕಣಾ, ರಣವೀರ್ ವಿಚ್ಛೇದನ

ಕನ್ನಡ ನಟ ಸುದೀಪ್ ತಮ್ಮ ವೈವಾಹಿಕ ಬಂಧನದಿಂದ ಹೊರಬಂದ ವಿಷಯ ಇನ್ನೂ ಹಸಿಯಾಗಿರುವಾಗಲೇ ಬಾಲಿವುಡ್ ಜೋಡಿಯೊಂದು ತಮ್ಮ ವಿವಾಹ ವಿಚ್ಛೇದನವನ್ನು

ಮುಂಬೈ: ಕನ್ನಡ ನಟ ಸುದೀಪ್ ತಮ್ಮ ವೈವಾಹಿಕ ಬಂಧನದಿಂದ ಹೊರಬಂದ ವಿಷಯ ಇನ್ನೂ ಹಸಿಯಾಗಿರುವಾಗಲೇ ಬಾಲಿವುಡ್ ಜೋಡಿಯೊಂದು ತಮ್ಮ ವಿವಾಹ ವಿಚ್ಛೇದನವನ್ನು ಘೋಷಿಸಿದೆ.

ಜನಪ್ರಿಯ ನಟರಾದ ಕೊಂಕಣಾ ಸೇನ್ ಶರ್ಮಾ ಮತ್ತು ರಣವೀರ್ ಶೋರೆ ಸೋಮವಾರ ತಾವು ಬೇರೆಯಾಗುತ್ತಿರುವ್ದನ್ನು ಘೋಷಿಸಿದ್ದಾರೆ. ಐದು ವರ್ಷದ ಹಿಂದೆಯಷ್ಟೇ ಇವರು ವಿವಾಹವಾಗಿದ್ದರು.

ಬಹಳ ದಿನಗಳಿಂದ ಇವರ ವೈವಾಹಿಕ ಜೀವನದಲ್ಲಿ ಒಡಕು ಮೂಡಿದೆ ಎಂಬ ವದಂತಿಗಳಿದ್ದವು. ಈ ಜೋಡಿಗೆ ಹರೂನ್ ಎಂಬ ನಾಲ್ಕು ವರ್ಷದ ಮಗುವಿದ್ದು, ಆ ಮಗುವನ್ನು ಇಬ್ಬರೂ ಜೊತೆಯಾಗಿ ನೋಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

"ರಣವೀರ್ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ, ಆದರೆ ಗೆಳೆಯರಾಗಿ ಮುಂದುವರೆಯಲಿದ್ದು ನಮ್ಮ ಮಗನನ್ನು ಒಟ್ಟಿಗೆ ನೋಡಿಕೊಳ್ಳಲಿದ್ದೇವೆ, ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು" ಎಂದು ಹಿರಿಯ ನಟಿ ಅಪರ್ಣ ಸೇನ್ ಅವರ ಪುತ್ರಿ ಕೊಂಕಣಾ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ರಣವೀರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ಮಾಡಿದ್ದಾರೆ.

"ಕೊಂಕಣಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ, ಆದರೆ ಗೆಳೆಯರಾಗಿ ಮುಂದುವರೆಯಲಿದ್ದು ನಮ್ಮ ಮಗನನ್ನು ಒಟ್ಟಿಗೆ ನೋಡಿಕೊಳ್ಳಲಿದ್ದೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು" ಎಂದು ಅವರು ಬರೆದಿದ್ದಾರೆ.

ಈ ಜೋಡಿ 'ಗುರ್ ಹರಿ ದಸ್ತಾನ್:ದ ಫ್ರೀಡಂ ಫೈಲ್' ಸಿನೆಮಾದಲ್ಲಿ ನಟಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT