ಚೆನ್ನೈ: ಖ್ಯಾತ ನಟ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ದಟ್ಟ ಗಡ್ಡ ಬಿಟ್ಟಿರುವ ರಜನಿ ಬಹುಮಹಡಿ ಕಟ್ಟಡವೊಂದರಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತ ಅವರ ಭಂಗಿ ಭಾರೀ ಸದ್ದು ಮಾಡಿದ್ದು, ಚಿತ್ರದಲ್ಲಿ ರಜನಿಕಾಂತ್ ಮಧ್ಯವಯಸ್ಕನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಬಾಲಿ ರಜನಿಕಾಂತ್ ಅವರ 159 ನೇ ಚಿತ್ರವಾಗಿದ್ದು, ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚೆನ್ನೈ ಮೂಲದ ಭೂಗತ ಪಾತಕಿ ಕಬಾಲಿ ಕಥೆಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗುತ್ತಿದ್ದು ಪಿ.ಎ ರಂಜಿತ್ ನಿರ್ದೇಶನ ಮಾಡುತ್ತಿದ್ದಾರೆ. ರಾಧಿಕಾ ಆಪ್ಟೆ ಚಿತ್ರದ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ.