ನಟ ದರ್ಶನ್ 
ಸಿನಿಮಾ ಸುದ್ದಿ

ಐರಾವತ ಬಿಡುಗಡೆಗೆ ಸಜ್ಜು; ದೋಷಮುಕ್ತನಾದ ಅರ್ಜುನ್; ಮೊದಲ ಟಿಕೆಟ್ ಬೆಲೆ ೧ ಲಕ್ಷ!

ವಿವಾದಗಳನ್ನೆಲ್ಲಾ ಬದಿಗಿಟ್ಟು ಐರಾವತ ಸಿನೆಮಾದ ನಿರ್ಮಾಪಕ ಎನ್ ಸಂದೇಶ್ ಅವರು, ನಿರ್ದೇಶಕ ಎ ಪಿ ಅರ್ಜುನ್ ಅವರನ್ನು ಈ ಯೋಜನೆಗೆ ಸೂಚಿಸಿದವರು ನಟ ದರ್ಶನ್

ಬೆಂಗಳೂರು: ವಿವಾದಗಳನ್ನೆಲ್ಲಾ ಬದಿಗಿಟ್ಟು ಐರಾವತ ಸಿನೆಮಾದ ನಿರ್ಮಾಪಕ ಎನ್ ಸಂದೇಶ್ ಅವರು, ನಿರ್ದೇಶಕ ಎ ಪಿ ಅರ್ಜುನ್ ಅವರನ್ನು ಈ ಯೋಜನೆಗೆ ಸೂಚಿಸಿದವರು ನಟ ದರ್ಶನ್ ಎಂದು ಹೇಳುವ ಮೂಲಕ ವಿವಾದಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.

ಸೆನ್ಸಾರ್ ಮಂಡಲಿ ಸಿನೆಮಾಗೆ ಯು/ಎ ಪ್ರಮಾಣಪತ್ರ ನೀಡಿದ್ದು, ಅಕ್ಟೋಬರ್ ೧ ಕ್ಕೆ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಯೋಗಿ, ಧ್ರುವ್, ಧನಂಜಯ್ ಜೊತೆ ಕೆಲಸ ಮಾಡಿದ್ದ ನಿರ್ದೇಶಕನಿಗೆ ಕನ್ನಡ ಚಿತ್ರೋದ್ಯಮದ ಅತಿ ಬೇಡಿಕೆಯ ನಟನೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಅರ್ಜುನ್ ಅವರು ಹೇಳುವಂತೆ ದರ್ಶನ್ ಎಂದಿಗೂ ಅತಿ ದೊಡ್ಡ ನಟನಂತೆ ವರ್ತಿಸಲಿಲ್ಲವಂತೆ. "ನಾನು ಅವರೊಂದಿಗೆ ಎಲ್ಲರಂತೆ ಇರುವ ಹಾಗೆ ಆರಾಮವಾಗಿ ಮಾತನಾಡಿಕೊಂಡಿದ್ದೆ. ಅವರ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ" ಎನ್ನುತ್ತಾರೆ.

ಆದರೆ ಬೃಹತ್ ತಾರಾಗಣದ ಜೊತೆ ಕೆಲಸ ಮಾಡುವುದು ಸುಲಭವಲ್ಲ ಎನ್ನುವ ಅವರು "ನನ್ನ ಕೊನೆಯ ಮೂರು ಸಿನೆಮಾಗಳು ಪ್ರೇಮ ಕಥೆಗಳು. ಮೊದಲ ಬಾರಿಗೆ ಸಂಪೂರ್ಣ ವಾಣಿಜ್ಯಾತ್ಮಕ ಸಿನೆಮಾಗೆ ಕೈ ಹಾಕಿದ್ದು. ಆದುದರಿಂದ ಆಗಲೇ ಸ್ಥಾಪಿತ ನಟರಾದ ದರ್ಶನ್, ಪ್ರಕಾಶ್ ರಾಜ್,. ಅನಂತ ನಾಗ್, ಸಿತಾರ, ಅಶೋಕ್ ಇಂತವರೊಂದಿಗೆ ಕೆಲಸ ಮಾಡುವಾಗ ಸ್ವಲ್ಪ ಭಯವಾಗಿತ್ತು" ಎನ್ನುತ್ತಾರೆ.

ಐರಾವತ ಕರ್ನಾಟಕದಾದ್ಯಂತ ಏಕಕಾಲಕ್ಕೆ ೩೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಲಹರಿ ಆಡಿಯೋ ಕಂಪನಿ ಸಿನೆಮಾದ ವಿದೇಶಿ ವಿತರಣೆಯ ಹಕ್ಕನ್ನು ಹೊತ್ತಿದೆಯಂತೆ, ಸದ್ಯಕ್ಕೆ ೩೧ ತೆರೆಗಳು ಧೃಢೀಕರಿಸಿದ್ದು ಇದು ೫೬ ಕ್ಕೆ ಏರಲಿದೆಯಂತೆ.

ಮೊದಲ ಟಿಕೆಟ್ ೧ ಲಕ್ಷಕ್ಕೆ ಬಿಕರಿ!

ಐರಾವತ ಸಿನೆಮಾದ ಮೊದಲ ಟಿಕೆಟ್ ಒಂದು ಲಕ್ಷ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಇದನ್ನು ಕೊಂಡಿರುವವರು ದರ್ಶನ್ ಅವರ ದೀರ್ಘ ಕಾಲದ ಗೆಳೆಯ ಸೃಜನ್ ಲೋಕೇಶ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT