ಎಸ್.ವಿ.ರಾಜೇಂದ್ರ ಸಿಂಗ್ ಬಾಬು 
ಸಿನಿಮಾ ಸುದ್ದಿ

ರಾಜೇಂದ್ರಸಿಂಗ್ ಹಣಕಾಸು ವಿವಾದ ಇತ್ಯರ್ಥ

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹಾಗೂ ನವಶಕ್ತಿ ಎಂಟರ್‍ಪ್ರೈಸ್ ಮಾಲೀಕ ಸಿ.ನಾಗರಾಜ್ ನಡುಹಣಕಾಸಿನ ವಿವಾದ ...

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹಾಗೂ ನವಶಕ್ತಿ ಎಂಟರ್‍ಪ್ರೈಸ್  ಮಾಲೀಕ ಸಿ.ನಾಗರಾಜ್ ನಡುಹಣಕಾಸಿನ ವಿವಾದ ಪರಸ್ಪರ ಮಾತುಕತೆಯ ಮೂಲಕ ತಾತ್ಕಾಲಿಕವಾಗಿ ಇತ್ಯರ್ಥಗೊಂಡಿದೆ. ನವಶಕ್ತಿ ಎಂಟರ್ ಪ್ರೈಸಸ್ ಮಾಲೀಕ ನಾಗರಾಜ್ ಅವರಿಗೆ ರಾಜೇಂದ್ರ ಸಿಂಗ್ ಬಾಬು ಪಡೆದಿದ್ದ ರು. 7 ಲಕ್ಷ ನಗದನ್ನು ಶೀಘ್ರವೇ ಹಿಂತಿರುಗಿಸುವುದಾಗಿ ಬಾಬು ಪುತ್ರ ಹಾಗೂ ನಟ ಆದಿತ್ಯ, ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಅವರ ನಿವಾಸ ಜಪ್ತಿಗೆ ತೆರಳಿದ್ದ ಅಧಿಕಾರಿಗಳು ವಾಪಸ್ ಬಂದಿದ್ದಾರೆಂದು ಹೇಳಲಾಗಿದೆ. ಆದಿತ್ಯ, ಸದಾ, ಆದಿ ಲೋಕೇಶ್, ಸುಹಾಸಿನಿ ಹಾಗೂ ಅನುಪ್ರಭಾಕರ್ ಅಭಿನಯದ `ಮೋಹಿನಿ' ಚಿತ್ರ ನಿರ್ಮಾಣಕ್ಕಾಗಿ ನಿರ್ದೇಶಕ ಸಿಂಗ್ ಬಾಬು ಅವರು, ನವಶಕ್ತಿ ಎಂಟರ್ ಪ್ರೈಸಸ್ ಮಾಲೀಕ ಸಿ. ನಾಗರಾಜ್ ಅವರಿಂದ ಮುಂಗಡವಾಗಿ ಪಡೆದಿದ್ದ ರು. 7 ಲಕ್ಷ ನಗದನ್ನು ಪಡೆದಿದ್ದರು. ಆದರೆ ಚಿತ್ರ ತೆರೆಕಂಡು ವರ್ಷಗಳು ಕಳೆದರೂ ಅವರು ಹಣ ಹಿಂತಿರುಗಿಸದ ಕಾರಣ, ನಾಗರಾಜ್, ಕೋರ್ಟ್ ಮೆಟ್ಟಿಲು ಹತ್ತಿದ್ದರು. ಅವರ ದಾವೆಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ರಾಜೇಂದ್ರ ಸಿಂಗ್ ಬಾಬು ಅವರ ನಿವಾಸ ಜಪ್ತಿಗೆ ಆದೇಶಿಸಿತ್ತು. ಈ ಆದೇಶದಂತೆ ಮಂಗಳವಾರ ಅಧಿಕಾರಿಗಳು ರಾಜೇಂದ್ರ ಸಿಂಗ್ ಬಾಬು ಅವರ ಮನೆ ಜಪ್ತಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ರಾಜೇಂದ್ರ ಸಿಂಗ್ ಬಾಬು ಮೈಸೂರಿನಲ್ಲಿದ್ದರೆನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ನಟ ಆದಿತ್ಯ, ಅಧಿಕಾರಿಗಳ ಬಳಿ ಮಾತುಕತೆ ನಡೆಸಿ, ಇನ್ನೊಂದು ವಾರದಲ್ಲಿ ನಾಗರಾಜ್   ಅವರಿಗೆ ರು.7 ಲಕ್ಷ ನಗದನ್ನು ಹಿಂತಿರುಗಿಸಲಾಗುವುದು. ಇದಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಅಲ್ಲದೇ, ನಾಗರಾಜ್ ಬಳಿಯೂ ಮಾತನಾಡಿ, ಭರವಸೆ ನೀಡಿದ ಹಿನ್ನೆಲೆಯಲ್ಲಿ ಮನೆ ಜಪ್ತಿಗೆ ಹೋಗಿದ್ದ ಅಧಿಕಾರಿಗಳು ವಾಪಸ್ ಬಂದಿದ್ದಾರೆಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ