ಚಿತ್ರನಟಿ ರಾಧಿಕಾ 
ಸಿನಿಮಾ ಸುದ್ದಿ

ರಾಜಕಾರಣಕ್ಕೆ ಬರಲಿದ್ದಾರೆಯೇ ರಾಧಿಕಾ?

ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರೊಂದಿಗಿನ ಚಿತ್ರನಟಿ ರಾಧಿಕಾ ಅವರ ಸಂಬಂಧದ ಬಗೆಗೆ ಹಲವಾರು ವದಂತಿಗಳು ಈಗಾಗಲೇ ಹರಡಿದ್ದರೂ, ಈಗ ಹೊಸ

ಬೆಂಗಳೂರು: ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರೊಂದಿಗಿನ ಚಿತ್ರನಟಿ ರಾಧಿಕಾ ಅವರ ಸಂಬಂಧದ ಬಗೆಗೆ ಹಲವಾರು ವದಂತಿಗಳು ಈಗಾಗಲೇ ಹರಡಿದ್ದರೂ, ಈಗ ಹೊಸ ವದಂತಿಗೆ ರೆಕ್ಕೆಪುಕ್ಕ ಬಂದಿದೆ. ಹಲವಾರು ಬಾರಿ ಮಂಗಳೂರಿಗೆ ಹೋಗಿ ಬರುತ್ತಿರುವ ರಾಧಿಕಾ, ಚಿತ್ರೋದ್ಯಮದಿಂದಲೂ ದೂರವುಳಿದಿದ್ದಾರೆ. ಇದೇಕೆ ಎಂದು ಬಲ್ಲ ಮೂಲಗಳನ್ನು ಪ್ರಶ್ನಿಸಿದಾಗ ರಾಧಿಕ ಬಿಜೆಪಿ ಪಕ್ಷ ಸೇರಿ ರಾಜಕಾರಣ ಮಾಡಲಿದ್ದಾರಂತೆ. "ಅವರು ರಾಜಕೀಯ ಸೇರುವುದು ನಿಶ್ಚಿತ. ಮತ್ತು ಬಿಜೆಪಿ ಪಕ್ಷ ಸೇರಲು ಅವರು ಹವಣಿಸಿದ್ದಾರೆ" ಎಂದು ಮೂಲಗಳು ತಿಳಿಸಿವೆ. ಎಚ್ ಡಿ ಕುಮಾರಸ್ವಾಮಿ ಅವರೊಂದಿಗಿನ ಸಂಬಂಧ ಮುರಿದಿರುವುದು ಹಳೆಯ ಸುದ್ದಿ ಎನ್ನುವ ಮೂಲಗಳು "ಆದರೂ ಅವರಿಬ್ಬರೂ ಮಗಳು ಶಮಿಕಾಗೋಸ್ಕರ ಪರಸ್ಪರ ಸಂಪರ್ಕದಲ್ಲಿದ್ದಾರೆ" ಎಂದಿವೆ.

ಚಿತ್ರೋದ್ಯಮದ ಮುಂದಿನ ಯೋಜನೆಗಳ ಬಗ್ಗೆ ಕೂಡ ಹೇಳುವ ಈ ಮೂಲಗಳು, ಅವರು ನಿರ್ಮಾಣ ಜವಾಬ್ದಾರಿ ಮಾತ್ರ ವಹಿಸಲಿದ್ದಾರೆ ಎನ್ನಲಾಗಿದೆ. "ಈಗ ಅವರಿಗೆ ನಟನೆಯಲ್ಲಿ ಆಸಕ್ತಿಯಿಲ್ಲ. ನಂದ ಕಿಶೋರ್ ಅವರ ಸ್ಕ್ರಿಪ್ಟ್ ಸೇರಿದಂತೆ ಹಲವಾರು ಚಿತ್ರಗಳನ್ನು ನಿರಾಕರಿಸಿದ್ದಾರೆ. ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ತೆಲುಗಿನ ಕೆಲವು ಒಳ್ಳೆಯ ಸ್ಕ್ರಿಪ್ಟ್ ಗಳ ಹುಡುಕಾಟದಲ್ಲಿದ್ದಾರೆ" ಎನ್ನಲಾಗಿದೆ.

ಅವರ ಹುಟ್ಟೂರಾದ ಕಟೀಲ್ ಗೆ ಮಂಗಳೂರು ಸಮೀಪದಲ್ಲಿರುವುದರಿಂದ ಅವರ ರಾಜಕೀಯ ಜೀವನವನ್ನು ಅಲ್ಲಿಂದಲೇ ಪ್ರಾರಂಭಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. "ಶೋಭಾ ಕರಂದ್ಲಾಜೆ ಅವರೊಂದಿಗೂ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ವಿವರಗಳು ತಿಳಿಯಬೇಕಿದೆ" ಎನ್ನುತ್ತವೆ ಮೂಲಗಳು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!