ನಟ ಶಾಮ್ 
ಸಿನಿಮಾ ಸುದ್ದಿ

ಮಹೇಶ್ ರಾವ್ ಸಿನೆಮಾದಲ್ಲಿ ಆದಿತ್ಯ ಬದಲಿಗೆ ಶಾಮ್

ತಮ್ಮ ಹಾದಿಯಲ್ಲಿ ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಯಾವಾಗಲು ಹವಣಿಸುವ ನಟ ಶಾಮ್ ಅವರಿಗೆ, ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ

ಬೆಂಗಳೂರು: ತಮ್ಮ ಹಾದಿಯಲ್ಲಿ ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಯಾವಾಗಲು ಹವಣಿಸುವ ನಟ ಶಾಮ್ ಅವರಿಗೆ, ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುವ ಅವಕಾಶ ಬಂದಾಗ ಕೂಡಲೇ ಒಪ್ಪಿಗೆ ಸೂಚಿಸಿದ್ದಾರೆ. ಮಹೇಶ್ ರಾವ್ ನಿರ್ದೇಶನದ ಈ ಚಿತ್ರಕ್ಕೆ ಖಳನಾಯಕನಾಗಿ ನಟಿಸಬೇಕಿದ್ದ ಆದಿತ್ಯ, ಕೊನೆಯ ಕ್ಷಣದಲ್ಲಿ ದಿನಾಂಕಗಳು ಹೊಂದಾಣಿಕೆಯಾಗದಿದ್ದಕ್ಕೆ ಹಿಂದೆ ಸರಿದಿದ್ದರಿಂದ ಈಗ ಆ ಪಾತ್ರಕ್ಕೆ ಶಾಮ್ ಆಯ್ಕೆಯಾಗಿದ್ದಾರೆ.

ಇದನ್ನು ವಿವರಿಸುವ ನಿರ್ದೇಶಕ ಮಹೇಶ್ "ಆದಿತ್ಯ ಹಿಂದೆ ಸರಿದಾಗ ನಾವು ಆತುರಪಡಲಿಲ್ಲ. ಆ ಖಳನಾಯಕನ ಪಾತ್ರವನ್ನು ಪೋಷಿಸಬಲ್ಲ ಮತ್ತು ಅದಕ್ಕೆ ನ್ಯಾಯ ಒದಗಿಸಬಲ್ಲ ನಟನ ಹುಡುಕಾಟದಲ್ಲಿದ್ದೆವು. ಆಗ ನಮ್ಮ ಮನಸ್ಸಿಗೆ ಬಂದಿದ್ದು ಶಾಮ್. ಭಾನುವಾರ ಒಪ್ಪಂದ ಅಂತಿಮವಾಗಿದೆ" ಎನ್ನುತ್ತಾರೆ. ಶಾಮ್ ಸದ್ಯದ ಯೋಜನೆ ಪೂರ್ಣಗೊಳಿಸಿ ತಂಡವನ್ನು ಸೇರಲಿದ್ದಾರಂತೆ. ಇದಕ್ಕಾಗಿ ತಮ್ಮ ಮುಂದಿನ ಯೋಜನೆಯನ್ನು ಮುಂದೂಡಿದ್ದಾರಂತೆ.

ಅಲ್ಲದೆ ಮೂಲಗಳ ಪ್ರಕಾರ ಈ ಸಿನೆಮಾಗಾಗಿ ಯಶ್ ಮತ್ತು ರಾಧಿಕಾ ತಮ್ಮ ಅವತಾರವನ್ನು ಬದಲಾಯಿಸಿಕೊಳ್ಳುತ್ತಿದ್ದಾರಂತೆ. ಹೊಸ ಕೇಶಶೈಲಿಗಾಗಿ ಯಶ್ ಸದ್ಯಕ್ಕೆ ಮುಂಬೈನಲ್ಲಿದ್ದಾರಂತೆ. ಕೆ ಮಂಜು ನಿರ್ಮಾಣದ ಈ ಸಿನೆಮಾದ ಶೀರ್ಶಿಕೆಗಾಗಿ ಇನ್ನೂ ಕೆಲವು ದಿನ ಕಾಯಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT