ನಟಿ ಪ್ರಿಯಾಂಕಾ ಚೋಪ್ರಾ 
ಸಿನಿಮಾ ಸುದ್ದಿ

ನಾನು ಮೊದಲು ಅವನನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ: ಪ್ರಿಯಾಂಕ ಚೋಪ್ರಾ

ನಾನು ಆ ಸ್ಥಾನದಲ್ಲಿದ್ದರೆ ಮೊದಲು ಅವನನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಅವರು ಬುಧವಾರ ಹೇಳಿದ್ದಾರೆ...

ನವದೆಹಲಿ: ನಾನು ಆ ಸ್ಥಾನದಲ್ಲಿದ್ದರೆ ಮೊದಲು ಅವನನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಅವರು ಬುಧವಾರ ಹೇಳಿದ್ದಾರೆ.

ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಕುರಿತಂತೆ ಮಾತನಾಡಿರುವ ಅವರು, ಆತ್ಮಹತ್ಯೆ ಪ್ರಕರಣಗಳಲ್ಲಿ ಮನರಂಜನಾ ಕ್ಷೇತ್ರಗಳ ಕಡೆ ಬೆಟ್ಟು ಮಾಡಿ ತೋರಿಸುವುದರ ಕುರಿತಂತೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರರಂಗವನ್ನು ಗುರಿಯಾಗಿಸುವವರು ಸಾಮಾನ್ಯ ಮಹಿಳೆಯರ ಪ್ರಕರಣಗಳನ್ನೇಕೆ ಗುರ್ತಿಸುವುದಿಲ್ಲ ಎಂದು ಹೇಳಿದ್ದಾರೆ.

ಸಾಕಷ್ಟು ಮಹಿಳೆಯರು ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಮನೆಯಲ್ಲಿ ಸಂತೋಷವಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಗುರ್ತಿಸುವ ಬದಲು ನಟಿಯರು ಆತ್ಮಹತ್ಯೆ ಮಾಡಿಕೊಂಡಾಗ ಸತ್ಯಾಸತ್ಯತೆ ತಿಳಿಯದೆಯೇ ನಟಿಯರ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ.

24 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ಬಗ್ಗೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ, ಆದರೆ, ಆಕೆಯ ಸಾವಿನ ಹಿಂದಿರುವ ರಹಸ್ಯವನ್ನು ಯಾರೂ ಹುಡುಕುವ ಪ್ರಯತ್ನವನ್ನು ಮಾಡುವುದಿಲ್ಲ. ನಟಿಯರಿಗೆ ಹಾಗೂ ನಟಿಯರ ಕುಟುಂಬಕ್ಕೆ ಗೌರವ ನೀಡಬೇಕಿರುವ ಗೌರವವನ್ನು ನೀಡದೆಯೇ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಯುವಕರು ಇಂದು ಕಾಲೇಜು ಹಾಗೂ ಹಾಸ್ಟೆಲ್ ಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಯುವಕರು ತಮ್ಮ ಜೀವವನ್ನು ತಾವೇ ಅಂತ್ಯಗೊಳಿಸಬಾರದು. ನಮಗೆ ನೋವು ಮಾಡಿದ ವ್ಯಕ್ತಿಗೆ ಬದುಕಿದ್ದು ಉತ್ತಮ ಪಾಠ ಕಲಿಸಬೇಕು. ಯಾರೋ ಒಬ್ಬ ವ್ಯಕ್ತಿಗಾಗಿ ನಾವೇಕೆ ನಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕು. ಒಂದು ವೇಳೆ ನಾನು ಆ ಸ್ಥಾನದಲ್ಲಿದ್ದರೆ ಮೊದಲು ಆ ವ್ಯಕ್ತಿಯನ್ನು ಕೊಂದು ನಂತರ ನಾನು ಸಾಯುತ್ತಿದ್ದೆ ಎಂದು ಹೇಳಿದ್ದಾರೆ.

ಇದೇ ವೇಳೆ ತಮ್ಮ ವಿರುದ್ಧ ಮಾಜಿ ಮ್ಯಾನೇಜರ್ ಪ್ರಕಾಶ್ ಜಾಜೂ ಮಾಡುತ್ತಿರುವ ಆತ್ಮಹತ್ಯೆ ಯತ್ನ ಆರೋಪದ ಕುರಿತಂತೆ ಇದೇ ಮೊದಲ ಬಾರಿಗೆ ಮೌನ ಮುರಿದು ಮಾತನಾಡಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು, ಇದು ನಿಜಕ್ಕೂ ತೀರಾ ಅಸಂಬದ್ಧವಾದದ್ದು. ಆರೋಪ ಮಾಡುತ್ತಿರುವ ವ್ಯಕ್ತಿ ನನಗೆ ಕಿರುಕುಳ ನೀಡಿದ ಆರೋಪದ ಮೇಲೆ ಜೈಲಿನಲ್ಲಿದ್ದ. ವ್ಯಕ್ತಿ ಪೂರ್ವಾಗ್ರಹ ಹಾಗೂ ಆತನ ಇತಿಹಾಸ ಪರಿಶೀಲಿಸದೆಯೇ ಇಂತಹ ವ್ಯಕ್ತಿಯ ಮೇಲೆ ಮಾಧ್ಯಗಳು ವಿಶ್ವಾಸ ಮಾಡುತ್ತಿರುವುದು ಬೇಸರದ ಸಂಗತಿ. ಮಾಧ್ಯಮಗಳೇ ಇಂತಹ ವ್ಯಕ್ತಿ ಮೇಲೆ ವಿಶ್ವಾಸವಿಟ್ಟಿರುವಾಗ, ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಕಿರುತೆರೆ ನಟಿ ಪ್ರತ್ಯೂಷ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಿಯಾಂಕಾ ಅವರ ಮಾಜಿ ಮ್ಯಾನೇಜರ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಈ ಹಿಂದೆ ಕಷ್ಟಕಾಲದಲ್ಲಿದ್ದಾಗ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಿದ್ದರು.

ಚಿತ್ರರಂಗದಲ್ಲಿರುವ ಹೆಚ್ಚಿನ ಯುವತಿಯರು ಜೀವನದಲ್ಲಿ ಹತಾಶೆ ಆವರಿಸಿದಾಗಲೆಲ್ಲಾ ಆತ್ಮಹತ್ಯೆ ಬಗ್ಗೆ ಚಿಂತಿಸುತ್ತಾರೆ. ಇದಕ್ಕೆ ಪ್ರಿಯಾಂಕಾ ಚೋಪ್ರಾ ಅವರು ಕೂಡ ಉದಾಹರಣೆಯಾಗಿದ್ದಾರೆ. ಪ್ರಿಯಾಂಕಾ ಅವರು ಇಂದು ಅತಿಯಾದ ವೃತ್ತಿ ಭದ್ರತೆಯ ಭಾವನೆಯಲ್ಲಿರಬಹುದು. ಆದರೆ, ಅವಕಾಶಗಳಿಗಾಗಿ ಹೋರಾಡುತ್ತಿದ್ದ ಸಮಯದಲ್ಲಿ ಅವರಿಗೂ ಅಭದ್ರತೆ ಕಾಡಿತ್ತು.

2002ರಲ್ಲಿ ಬಾಯ್ ಫ್ರೆಂಡ್ ಅಸೀಮ್ ಮರ್ಚಂಟ್ ತಾಯಿ ತೀರಿಕೊಂಡ ಸಂದರ್ಭದಲ್ಲಿಯೂ ದಃಖದಲ್ಲಿದ್ದ ಪ್ರಿಯಾಂಕಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆಗ ನಾನು ತಡೆದಿದ್ದೆ. ಇನ್ನು ಅಸೀಮ್ ಮತ್ತು ಪ್ರಿಯಾಂಕಾ ನಡುವೆ ಪ್ರತಿ ನಿತ್ಯ ಜಗಳವಾಗುತ್ತಿತ್ತು. ಆಗಲೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು ಎಂದು ಹೇಳಿದ್ದರು.

ಈ ಹಿಂದೆ ಪ್ರಿಯಾಂಕಾ ಅವರ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಪ್ರಕಾಶ್ ಜಾಜೂ ಅವರು ಕಿರುಕುಳ ನೀಡುತ್ತಿದ್ದಾರೆಂದು ಹೇಳಿ ಪ್ರಿಯಾಂಕಾ ಅವರು ದೂರು ದಾಖಲಿಸಿದ್ದರು. ನಂತರ ಪ್ರಕಾಶ್ ಜಾಜು ಅವರು ಕೂಡ ಸರಿ ಸಮಯಕ್ಕೆ ವೇತನವನ್ನು ನೀಡುತ್ತಿಲ್ಲ ಎಂದು ಪ್ರಿಯಾಂಕಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕಿರುಕುಳ ನೀಡಿದ ಆರೋಪದ ಈಗಾಗಲೇ 67 ದಿನಗಳ ಕಾಲ ಜೈಲುವಾಸ ಅನುಭವಿಸಿರುವ ಜಾಜು ಈಗಷ್ಚೇ ಬಿಡುಗಡೆಗೊಂಡಿದ್ದಾರೆ. ಇದರಂತೆ ಜಾಜು ಮಾಡುತ್ತಿರುವ ಆರೋಪದ ವಿರುದ್ದ ಕಿಡಿಕಾರಿರುವ ಪ್ರಿಯಾಂಕಾ ಚೋಪ್ರಾ ಅವರ ತಂದೆ ಅಶೋಕ್ ಚೋಪ್ರಾ ಅವರು, ಮಗಳ ಖಾಸಗಿ ಜೀವನದಲ್ಲಿ ಅನಾವಶ್ಯಕವಾಗಿ ತಲೆಹಾಕುತ್ತಿದ್ದಾರೆಂದು ಮತ್ತೆ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್