ಸುದೀಪ್ ಮತ್ತು ವಿವೇಕ್ ಓಬೇರಾಯ್ 
ಸಿನಿಮಾ ಸುದ್ದಿ

ಮುತ್ತಪ್ಪ ರೈ ಆಗಿ ವಿವೇಕ್ ಓಬೇರಾಯ್: ಕಿಚ್ಚ ಸುದೀಪ್ ಔಟ್

ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಬರುತ್ತಿರುವ ಭೂಗತ ಲೋಕದ ದೊರೆ ಮುತ್ತಪ್ಪ ರೈ ಜೀವನ ಚರಿತ್ರೆ ಆಧರಿಸಿರುವ 'ರೈ' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್...

ಮುಂಬಯಿ:  ಸೆನ್ಸೇಷನಲ್ ಕಮ್ ಕಾಂಟ್ರವರ್ಶಿಯಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಬರುತ್ತಿರುವ ಭೂಗತ ಲೋಕದ ದೊರೆ ಮುತ್ತಪ್ಪ ರೈ ಜೀವನ ಚರಿತ್ರೆ ಆಧರಿಸಿರುವ 'ರೈ' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬದಲು ಕರ್ನಾಟಕದ ಅಳಿಯ ವಿವೇಕ್ ಓಬೇರಾಯ್ ಅಭಿನಯಿಸುತ್ತಿದ್ದಾರೆ.

ರೈ ಪಾತ್ರಕ್ಕೆ ಆರ್‌ಜಿವಿ ಬಾಲಿವುಡ್ ನಟ, ಕರ್ನಾಟಕದ ಅಳಿಯ ವಿವೇಕ್ ಓಬೇರಾಯ್ ಅವರನ್ನು ಆಯ್ಕೆ ಮಾಡಿದ್ದಾರೆ. ಮುತ್ತಪ್ಪ ರೈ ಜೀವನ ಕುರಿತು ಚಿತ್ರ ರೂಪಿಸುತ್ತಿರುವ ವರ್ಮಾ ಆ ವಿಷಯವನ್ನು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಈ ಚಿತ್ರವನ್ನು ನಿರ್ದೇಶಿಸುವುದಾಗಿ ವರ್ಮ ತಿಳಿಸಿದ್ದಾರೆ.

ಮೊದಲಿಗೆ ರೈ ಪಾತ್ರಕ್ಕೆ ಸುದೀಪ್ ಅವರನ್ನು ಆಯ್ಕೆ ಮಾಡಲು ಯೋಚಿಸಿದ್ದೆ. ಆದರೆ ಕೆಲ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ವಿವೇಕ್ ಓಬೇರಾಯ್ ಅವರನ್ನು ಆಯ್ಕೆ ಮಾಡಿದ್ದೇನೆ. ಬೆಂಗಳೂರು, ಮಂಗಳೂರು, ಮುಂಬೈ, ದುಬೈ, ಲಂಡನ್‌ಗಳಲ್ಲಿ ಚಿತ್ರದ ಶೂಟಿಂಗ್ ಮಾಡುವುದಾಗಿ ವರ್ಮಾ ಹೇಳಿಕೊಂಡಿದ್ದಾರೆ.

ಮುತ್ತಪ್ಪ ರೈ ಜನ್ಮದಿನವಾದ ಮೇ 1 ರಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಮುತ್ತಪ್ಪ ರೈ ಅವರೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಿದ್ದಾರೆ ಅಂತಾ ಕೂಡಾ ಆರ್‌ಜಿವಿ ಟ್ವೀಟ್ ಮಾಡಿದ್ದಾರೆ. ಸಿ ಆರ್ ಮನೋಹರ್ ಚಿತ್ರವನ್ನು ನಿರ್ಮಿಸಲಿದ್ದಾರೆ ಎಂದು ವರ್ಮ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

ಅಚ್ಚರಿ: ಇಸ್ಲಾಮಿ ಹೆಸರುಗಳ ಕೈ ಬಿಟ್ಟು ಪಾಕಿಸ್ತಾನದ ಪ್ರದೇಶಗಳಿಗೆ ಹಿಂದೂ ಹೆಸರು ಮರು ನಾಮಕರಣ, ಏನಾಗ್ತಿದೆ ಲಾಹೋರ್ ನಲ್ಲಿ?

ಬಳ್ಳಾರಿ: ಪಶುವೈದ್ಯ ಪತಿ, ಅತ್ತೆ-ಮಾವರಿಂದ ಕಿರುಕುಳ; ಪ್ರೀತಿಸಿ ಮದುವೆಯಾಗಿದ್ದ ಯುವತಿ ಆತ್ಮಹತ್ಯೆಗೆ ಶರಣು!

ನಾಳೆ ರಾಜ್ಯಾದ್ಯಂತ ಮೆಡಿಕಲ್ ಶಾಪ್​ಗಳು ಬಂದ್; ಅಗತ್ಯ ಔಷಧಿಗಳನ್ನು ಇಂದೇ ಖರೀದಿಸಿ

ಲಂಕಾ ವಿರುದ್ಧ ಏಕದಿನ, ಟೆಸ್ಟ್​ ತಂಡ ಪ್ರಕಟ: ರಿಷಭ್ ಪಂತ್‌ಗೆ ಕೊಕ್; ಕನ್ನಡಿಗ ಕೆಎಲ್ ರಾಹುಲ್ ಉಪನಾಯಕ

SCROLL FOR NEXT