'ಉಪ್ಪು ಹುಳಿ ಖಾರ' ಸಿನೆಮಾಗೆ ಕ್ಲ್ಯಾಪ್ ಮಾಡಿದ ಲೇಖಕಿ ಸುಧಾ ಮೂರ್ತಿ 
ಸಿನಿಮಾ ಸುದ್ದಿ

'ಉಪ್ಪು ಹುಳಿ ಖಾರ' ದಲ್ಲಿ ಮೂರು 'ಶ್ರೀ'ಗಳನ್ನು ನಿರ್ದೇಶಿಸಲಿರುವ ಇಮ್ರಾನ್

ನೃತ್ಯ ನಿರ್ದೇಶಕನಿಂದ ನಿರ್ದೇಶಕನಾಗಿ ಭಡ್ತಿ ಪಡೆದು 'ಎಂದೆಂದಿಗೂ' ನಿರ್ದೇಶಿಸಿದ್ದ ಇಮ್ರಾನ್ ಸರ್ದಾರಿಯಾ ಈಗ ತಮ್ಮ ಎರಡನೆ ಚಿತ್ರ 'ಉಪ್ಪು ಹುಳಿ ಖಾರ'ಕ್ಕೆ ಅಣಿಯಾಗಿದ್ದಾರೆ.

ಬೆಂಗಳೂರು: ನೃತ್ಯ ನಿರ್ದೇಶಕನಿಂದ ನಿರ್ದೇಶಕನಾಗಿ ಭಡ್ತಿ ಪಡೆದು 'ಎಂದೆಂದಿಗೂ' ನಿರ್ದೇಶಿಸಿದ್ದ ಇಮ್ರಾನ್ ಸರ್ದಾರಿಯಾ ಈಗ ತಮ್ಮ ಎರಡನೆ ಚಿತ್ರ 'ಉಪ್ಪು ಹುಳಿ ಖಾರ'ಕ್ಕೆ ಅಣಿಯಾಗಿದ್ದಾರೆ. ಭಾನುವಾರ ಇದಕ್ಕೆ ಮುಹೂರ್ತ ನೆರವೇರಿದ್ದು ಇಂದಿನಿಂದ ಚಿತ್ರೀಕರಣ ಪ್ರಾಂಭವಾಗಲಿದೆ. ಎಂ ರಮೇಶ್ ರೆಡ್ಡಿ ಸಿನೆಮಾದ ನಿರ್ಮಾಪಕ.

ಸಿನೆಮಾಗೆ ಲೇಖಕಿ ಸುಧಾ ಮೂರ್ತಿ ಕ್ಲ್ಯಾಪ್ ಮಾಡಿದ್ದು, ಇಡಿ ಚಿತ್ರತಂಡ ಬನಶಂಕರಿ ದೇವಸ್ಥಾನದಲ್ಲಿ ನೆರೆದಿತ್ತು. "ಮೂರು 'ಶ್ರೀ'ಗಳು ಸಿನೆಮಾದಲ್ಲಿರುವುದು ನನಗೆ ಖುಷಿ ತಂದಿದೆ - ಮಾಲಾಶ್ರೀ, ಅನುಶ್ರೀ ಮತ್ತು ಜಯಶ್ರೀ" ಎನ್ನುತ್ತಾರೆ ನಿರ್ದೇಶಕ ಇಮ್ರಾನ್.

ಈ ಹಿಂದೆ ಹಾಸ್ಯ-ಹಾರರ್ ಮಿಶ್ರಣದ ಚಿತ್ರ ನೀಡಿದ್ದ ನಿರ್ದೇಶಕ ಇದು ಕೂಡ ಕಾಮಿಡಿ ಚಿತ್ರವಾಗಿರಲಿದೆ ಎನ್ನುತ್ತಾರೆ "ನಾನು ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸಬೇಕೆಂದಿದ್ದೆ, ಆದರೆ ವಿಭಿನ್ನವಾದ ಡಾರ್ಕ್ ಕಾಮಿಡಿ ಮಾಡಿದೆ. ಈಗ ನಾನು ಸಮಾಜದಲ್ಲಿ ನೋಡಿರುವ ನಿಜ ಜೀವನದ ಪಾತ್ರಗಳನ್ನು ತೆರೆಗೆ ತರಲಿದ್ದೇನೆ. ಹಾಗೆ ಯುವಕರು ಸಿನೆಮಾವನ್ನು ಆಸ್ವಾದಿಸಬಹುದು" ಎನ್ನುತ್ತಾರೆ.

ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭೂಕುಸಿತಕ್ಕೆ ಮುಂಬೈ-ಪುಣೆ ರೈಲು ಸಂಚಾರ ಸ್ಥಗಿತ; ಎಕ್ಸ್‌ಪ್ರೆಸ್‌ವೇ ಬಂದ್, ಸಾವಿರಾರು ಪ್ರಯಾಣಿಕರು ಪರದಾಟ..!

FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ, ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೆಯ್ಮಾರ್ ಕಣ್ಣೀರ ವಿದಾಯ! Video

ಮುಂಬೈನಲ್ಲಿ ಮಳೆ ಅವಾಂತರ: ಮನ್ಖುರ್ದ್'ನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; 6 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ..!

ಹಿಜ್ಬುಲ್ಲಾ ವಿರುದ್ಧ ಹೋರಾಟ: ಅಮೆರಿಕಾ ವಿರುದ್ಧವೇ ತಿರುಗಿಬಿದ್ದ ಇಸ್ರೇಲ್; ನಾವು ಒಂಟಿಯಲ್ಲ, ನಮ್ಮ ಹಿಂದೆ 140 ಕೋಟಿ ಮಂದಿ ಭಾರತೀಯರಿದ್ದಾರೆ- JD ವ್ಯಾನ್ಸ್‌ಗೆ ನೆತನ್ಯಾಹು ತಿರುಗೇಟು

61ನೇ ವಯಸ್ಸಿನಲ್ಲೂ ಏನು ಎನರ್ಜಿ! ಮಿಸ್ಟರ್ ಅಂಡ್ ಮಿಸೆಸ್ ಆಗುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಆಮೀರ್ ಖಾನ್, ಗೌರಿ ಸ್ಪ್ರಾಟ್! Video