ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಮದುವೆ ವದಂತಿ ತಳ್ಳಿಹಾಕಿದ ಮಿಲ್ಕಿ ಬ್ಯೂಟಿ ತಮನ್ನಾ

ಬಾಹುಬಲಿ ನಟಿ ತಮನ್ನಾ ಭಾಟಿಯಾ ಅವರು ಮದುವೆಯಾಗುತ್ತಿದ್ದಾರೆ ಮತ್ತು ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ ಎಂಬ ವರದಿಗಳನ್ನು ಮಿಲ್ಕಿ ಬ್ಯೂಟಿ...

ತಮನ್ನಾ ಭಾಟಿಯಾ
Lingaraj Badiger
Updated On : 19 Apr 2016, 6:31 am
ನವದೆಹಲಿ: ಬಾಹುಬಲಿ ನಟಿ ತಮನ್ನಾ ಭಾಟಿಯಾ ಅವರು ಮದುವೆಯಾಗುತ್ತಿದ್ದಾರೆ ಮತ್ತು ತಮ್ಮ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ವರದಿಗಳನ್ನು ಮಿಲ್ಕಿ ಬ್ಯೂಟಿ ತಳ್ಳಿಹಾಕಿದ್ದಾರೆ.
ಇದೊಂದು ಸುಳ್ಳು ಸುದ್ದಿ. ನಾನು ಮದುವೆಯಾಗುತ್ತಿಲ್ಲ. ನಾನು ದಾಂಪತ್ಯ ಜೀವನಕ್ಕೆ ಕಾಲಿಡುವ ದಿನ ಬಂದಾಗ ಅದನ್ನು ಮೊದಲು ಪ್ರಪಂಚಕ್ಕೆ ತಿಳಿಸುತ್ತೇನೆ ಎಂದು ತಮನ್ನಾ ಸ್ಪಷ್ಟಪಡಿಸಿದ್ದಾರೆ.
ನಾನು ಈಗ ಸದ್ಯ ಪ್ರಭುದೇವ್ ಅವರ ಮುಂದಿನ ಚಿತ್ರ ಹಾಗೂ ಇತರೆ ಕೆಲವು ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದು ತಮನ್ನಾ ಹೇಳಿಕೆ ನೀಡಿದ್ದಾರೆ.

Advertisement

Advertisement

ಬಹುಭಾಷಾ ನಟಿ ತಮನ್ನಾ ಅವರು ಈ  ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದು, ಕಳೆದ ಕೆಲವು ದಿನಗಳಿಂದ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವರದಿ ಮಾಡಲಾಗಿತ್ತು. ಅಲ್ಲದೆ ತಮನ್ನಾ 'ಬಾಹುಬಲಿ-2' ಚಿತ್ರದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಗಾಸಿಪ್ ಟಾಲಿವುಡ್ ಅಂಗಳದಲ್ಲಿ ಕೇಳಿಬಂದಿತ್ತು.
ಪಂಜಾಬಿ ಬೆಡಗಿ ತಮನ್ನಾ ತಮ್ಮ ನಟನೆ ಜೊತೆ ಜೊತೆಗೆ ಬ್ಯೂಟಿಯಿಂದಲೂ ಹೆಸರು ಮಾಡಿದವರು. ತಮಿಳು, ತೆಲುಗು,ಹಿಂದಿ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತನ್ನ ಬಬ್ಲಿ ಬಬ್ಲಿ ನಟನೆಯಿಂದ ಪಡ್ಡೆಗಳ ಕನಸಿನ ರಾಣಿಯಾಗಿರುವ ಈ ಬ್ಯೂಟಿಗೆ ಬ್ರೇಕ್ ನೀಡಿದ್ದು ತೆಲುಗಿನ ಫ್ಲರ್ಟರ್ ಬಾಯ್ ಸಿದ್ದಾರ್ಥ ಜೊತೆಗಿನ 'ಕೊಚ್ಚಂ ಇಷ್ಟಂ ಕೊಚ್ಚಂ ಕಷ್ಟಂ' ಸಿನಿಮಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments