ಮಾಲಾಶ್ರೀ 
ಸಿನಿಮಾ ಸುದ್ದಿ

'ಉಪ್ಪು, ಹುಳಿ, ಖಾರ' ಸಂಬಂಧ ಮಾಲಾಶ್ರೀ ಕಣ್ಣೀರು

ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು, ಹುಳಿ, ಖಾರ' ಚಿತ್ರದಿಂದ ಕೈಬಿಟ್ಟಿದ್ದಕ್ಕೆ ಹಿರಿಯ ನಟಿ ಮಾಲಾಶ್ರೀ ಅವರು ಕಣ್ಣೀರಿಟ್ಟ ಘಟನೆ...

ಬೆಂಗಳೂರು: ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು, ಹುಳಿ, ಖಾರ' ಚಿತ್ರದಿಂದ ಕೈಬಿಟ್ಟಿದ್ದಕ್ಕೆ ಹಿರಿಯ ನಟಿ ಮಾಲಾಶ್ರೀ ಅವರು ಕಣ್ಣೀರಿಟ್ಟ ಘಟನೆ ಗುರುವಾರ ನಡೆಯಿತು.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಲಾಶ್ರೀ, ಚಿತ್ರದ ನಿರ್ಮಾಪಕ ಕೆ.ಮಂಜು ಅವರು ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಲು ಅವಕಾಶ ನೀಡಿದ್ದರು. ಅಲ್ಲದೆ ಎರಡು ದಿನ ನಾನು ಶೂಟಿಂಗ್ ನಲ್ಲೂ ಭಾಗವಹಿಸಿದ್ದೆ. ಆದರೆ ನಂತರ ದಿಢೀರ್ ಅಂತ ಚಿತ್ರದಿಂದ ನನ್ನನ್ನು ಕೈಬಿಡಲಾಗಿದ್ದು, ಇದರಿಂದ ತಮಗೆ ತುಂಬಾ ನೋವಾಗಿದೆ ಎಂದರು.
ಎರಡು ದಿನದ ಶೂಟಿಂಗ್ ನಂತರ ನನ್ನ ಅಭಿನಯ ಚೆನ್ನಾಗಿಲ್ಲ ಎಂದು ಹೇಳಿದರು. ಇದನ್ನು ಕೇಳಿ ನಿಜಕ್ಕೂ ನನಗೆ ಆಘಾತವಾಯಿತು. ನನ್ನನ್ನು ಕರೆದು ಅವಮಾನ ಮಾಡಿರುವುದು ತುಂಬಾ ನೋವಾಗಿದೆ. ನನ್ನ 25 ವರ್ಷದ ಅನುಭವದಲ್ಲಿ ಎಂದಿಗೂ ಹೀಗೆ ಆಗಿಲ್ಲ ಎಂದು ಮಾಲಾಶ್ರೀ ಕಣ್ಣೀರಿಟ್ಟರು. 
ಇದು ಕೆ.ಮಂಜು ನಿರ್ಮಾಣದ ಸಿನಿಮಾ ಅಂತ ನನಗೆ ಹೇಳಿದ್ದರು. ಆದರೆ ಪೋಸ್ಟರ್ ನಲ್ಲಿ ಕೆ.ಮಂಜು ಹೆಸರೇ ಇರಲಿಲ್ಲ ಎಂದರು. ಅಲ್ಲದೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ ವಿರುದ್ಧವೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಟಿ, ಹಣದ ವಿಚಾರವಾಗಿ ನಾನು ಎಂದೂ ತಲೆಕೆಡಿಸಿಕೊಂಡಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 9ನೇ ಶತಕ ಸಿಡಿಸಿದ KL Rahul: 10,000 ಅಂತಾರಾಷ್ಟ್ರೀಯ ರನ್!

ಅಂತಿಮ ಹಂತದಲ್ಲಿ 21 ಚಿನ್ನದ ಪದಕಗಳು: 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟು 85 ಪದಕ!

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!