ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್

ಧುರಂಧರ್ ಖ್ಯಾತಿಯ ಆಯೇಷಾ ಖಾನ್ ಅವರು ಹಂಚಿಕೊಂಡಿರುವ ಫೋಟೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
Dhurandhar Fame Ayesha Khan Engaged? Actress Flaunts Diamond Ring In; Hugs Mystery Man In Dreamy Pics
ಆಯೇಷಾ ಖಾನ್
Updated on

ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ, ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾದ ‘ಶರಾರತ್’ ಹಾಡಿನ ಮೂಲಕ ಭಾರೀ ಸದ್ದು ಮಾಡಿದ್ದ ನಟಿ ಆಯೇಷಾ ಖಾನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

‘ಧುರಂಧರ್’ ಸಿನಿಮಾದಲ್ಲಿ ತಮ್ಮ ಗ್ಲಾಮರಸ್ ಡ್ಯಾನಸ್​ನಿಂದ ಪ್ರೇಕ್ಷಕರ ಮನ ಗೆದ್ದಿದ್ದ ನಟಿ ಆಯೇಷಾ ಖಾನ್ ಅವರು ಹಂಚಿಕೊಂಡಿರುವ ಫೋಟೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಧುರಂಧರ್ ಖ್ಯಾತಿಯ ನಟಿ ಹಂಚಿಕೊಂಡ ಪೋಸ್ಟ್‌ನಲ್ಲಿ ಆಕರ್ಷಕ ವಜ್ರದ ಉಂಗುರವೂ ಇದೆ. ಹೀಗಾಗಿ ಆಯೇಷಾ ಖಾನ್ ಅವರು ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಈ ಕಥೆಯಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ.

Dhurandhar Fame Ayesha Khan Engaged? Actress Flaunts Diamond Ring In; Hugs Mystery Man In Dreamy Pics
Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

ಆಯೇಷಾ ಖಾನ್ ಇತ್ತೀಚೆಗೆ ಮಿಸ್ಟ್ರಿ ಮ್ಯಾನ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳಲ್ಲಿ ಅವರ ಕೈಯಲ್ಲಿರುವ ವಜ್ರದ ಉಂಗುರ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಆಯೇಷಾ ತಮ್ಮ ಜೊತೆಗಿರುವ ವ್ಯಕ್ತಿಯ ಮುಖವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಜೊತೆಗೆ ಕೈಯಲ್ಲಿ ಡೈಮಂಡ್ ರಿಂಗ್ ಕಾಣಿಸುತ್ತಿದ್ದರೂ, ನಿಶ್ಚಿತಾರ್ಥ ಎಂದು ಹೇಳಿಲ್ಲ. ಇದು ಯಾವುದೋ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್‌ನ ಫೋಟೋಶೂಟ್ ಆಗಿರಬಹುದು ಎಂದು ಸಹ ಹೇಳಲಾಗುತ್ತಿದೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.

ಈ ಫೋಟೋಶೂಟ್ ವಿಚಾರವಾಗಿ ನಟಿ ಆಯೇಷಾ ಖಾನ್ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ವೈರಲ್ ಆಗಿರುವ ವಜ್ರದ ಉಂಗುರ ಹಾಗೂ ಮಿಸ್ಟ್ರಿ ಮ್ಯಾನ್ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com