ರಘು ಮುಖರ್ಜಿ-ಅನು ಪ್ರಭಾಕರ್ 
ಸಿನಿಮಾ ಸುದ್ದಿ

ಬೆಂಗಳೂರಲ್ಲಿ ತಾರಾಜೋಡಿ ಅನು ಪ್ರಭಾಕರ್-ರಘು ಮುಖರ್ಜಿ ವಿವಾಹ

ಸ್ಯಾಂಡಲ್ ವುಡ್ ನ ದುಂಡು ಮುಖದ ಚೆಲುವೆ ಅನು ಪ್ರಭಾಕರ್ ಮತ್ತು ಹ್ಯಾಂಡ್ ಸಮ್ ಹೀರೋ ರಘು ಮುಖರ್ಜಿ ಅವರು...

ಬೆಂಗಳೂರು: ಸ್ಯಾಂಡಲ್ ವುಡ್ ನ ದುಂಡು ಮುಖದ ಚೆಲುವೆ ಅನು ಪ್ರಭಾಕರ್ ಮತ್ತು ಹ್ಯಾಂಡ್ ಸಮ್  ಹೀರೋ ರಘು ಮುಖರ್ಜಿ ಅವರು ಇಂದು ವಿವಾಹವಾಗಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ತಮ್ಮ ಸಮೀಪದ ಬಂಧು ಮಿತ್ರರ ಸಮ್ಮುಖದಲ್ಲಿ ಈ ಜೋಡಿ ಸರಳವಾಗಿ ಮದುವೆಯಾದರು ಎಂದು ಮೂಲಗಳು ತಿಳಿಸಿವೆ.

ಇಬ್ಬರಿಗೂ ಇದು ಮರು ಮದುವೆ. ಕೆಲ ವರ್ಷಗಳ ಹಿಂದೆ ಕನ್ನಡದ ಹಿರಿಯ ತಾರೆ ಜಯಂತಿಯವರ ಪುತ್ರ ಕೃಷ್ಣಕುಮಾರ್ ಗೆ ಅನು ಪ್ರಭಾಕರ್ ವಿಚ್ಛೇದನ ನೀಡಿದ್ದರೆ, ರಘು ಮುಖರ್ಜಿ ತಮ್ಮ ಪತ್ನಿ ಭಾವನಾ ಮುಖರ್ಜಿಯನ್ನು ತೊರೆದಿದ್ದರು.

ತಮ್ಮ ಮಧ್ಯೆ ಸ್ನೇಹ ಸಂಬಂಧವಿರುವ ವಿಷಯವನ್ನು ಇಷ್ಟು ದಿನ ಈ ಜೋಡಿ ಗುಟ್ಟಾಗಿಯೇ ಇಟ್ಟುಕೊಂಡಿದ್ದರು. ಇದೀಗ ಮದುವೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಇಂಗ್ಲಿಷ್ ದೈನಿಕವೊಂದು ಆಯೋಜಿಸಿರುವ 'ಬೆಂಗಳೂರಿನ ಅತ್ಯಂತ ಸುಂದರ ಪುರುಷ' ಸ್ಪರ್ಧೆಗೆ ತಮ್ಮ ಸ್ನೇಹಿತ ರಘು ಮುಖರ್ಜಿಗೆ ಮತ ಹಾಕಿ ಎಂದು ಜನರಲ್ಲಿ ಅನು ಪ್ರಭಾಕರ್ ಮನವಿ ಮಾಡಿಕೊಂಡಾಗಲೇ ಇಬ್ಬರ ಹತ್ತಿರದ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಇವರಿಬ್ಬರ ಸಂಬಂಧದ ಬಗ್ಗೆ ಅನುಮಾನ ಹುಟ್ಟಿಕೊಂಡಿತ್ತು

ಹಿರಿಯ ನಟಿ ಗಾಯತ್ರಿ ಪ್ರಭಾಕರ್ ಪುತ್ರಿ 35 ವರ್ಷದ ಅನು ಪ್ರಭಾಕರ್ ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಟಿಯಾಗಿ ಅವರ ಮೊದಲ ಚಿತ್ರ ಹೃದಯ ಹೃದಯ 1999ರಲ್ಲಿ ತೆರೆಗೆ ಬಂದಿದ್ದು ಶಿವರಾಜ್ ಕುಮಾರ್ ಮತ್ತು ರಮೇಶ್ ಅರವಿಂದ್ ಜೊತೆ ನಟಿಸಿದ್ದರು. 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಅಷ್ಟೇ ಪ್ರಾಯದ ರಘು ಮುಖರ್ಜಿ ಕೂಡ 2002ರಲ್ಲಿ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದು 2003ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಪ್ಯಾರಿಸ್ ಪ್ರಣಯ' ಚಿತ್ರದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಇತ್ತೀಚೆಗೆ ತೆರೆಕಂಡ ಜೆಸ್ಸಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಭಿನಯದ ಜೊತೆಗೆ ಟಿವಿ ಶೋಗಳನ್ನೂ ನಡೆಸಿಕೊಡುತ್ತಿದ್ದಾರೆ. ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಆಕ್ಷನ್ ಸ್ಟಾರ್ ರಿಯಾಲಿಟಿ ಶೋನ ನಿರೂಪಕರಾಗಿದ್ದಾರೆ ರಘು ಮುಖರ್ಜಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ