ಪೂಜಾ ಗಾಂಧಿ ಮತ್ತು ಜೆ.ಡಿ ಚಕ್ರವರ್ತಿ 
ಸಿನಿಮಾ ಸುದ್ದಿ

ಪೂಜಾಗಾಂಧಿ ಪ್ರೊಡಕ್ಷನ್ ನಲ್ಲಿ ಕನ್ನಡ ಚಿತ್ರ ನಿರ್ದೇಶಿಸಲಿದ್ದಾರೆ ಜೆಡಿ ಚಕ್ರವರ್ತಿ?

ಕನ್ನಡ ಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಲು ಪಣ ತೊಟ್ಟಿರುವ ಮಳೆ ಹುಡುಗಿ ಪೂಜಾ ಗಾಂಧಿ ತಮ್ಮದೇ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡುವ ...

ಬೆಂಗಳೂರು: ಕನ್ನಡ ಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಲು ಪಣ ತೊಟ್ಟಿರುವ ಮಳೆ ಹುಡುಗಿ ಪೂಜಾ ಗಾಂಧಿ ತಮ್ಮದೇ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಿಸುವ ಚಿತ್ರವನ್ನು ಬಹುಭಾಷಾ ನಿರ್ದೇಶಕ ಜೆಡಿ ಚಕ್ರವರ್ತಿ ಅವರಿಂದ ನಿರ್ದೇಶಿಸಲು ಪೂಜಾ ಉತ್ಸುಕರಾಗಿದ್ದಾರೆ. ಬೇರೊಂದು ಸಿನಿಮಾ ಶೂಟಿಂಗ್ ನಲ್ಲಿ ಸದ್ಯ ಬ್ಯುಸಿ ಇರುವ ಪೂಜಾ ಗಾಂಧಿ ತಮ್ಮ ಬಾಕಿ ಉಳಿದಿರುವ ಎಲ್ಲಾ ಪ್ರಾಜೆಕ್ಟ್ ಗಳನ್ನು ಮುಗಿಸಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಲಿದ್ದಾರೆ.

ರಾವಣಿ ಚಿತ್ರದಲ್ಲಿ ಜೆ.ಡಿ ಚಕ್ರವರ್ತಿ ಜೊತೆ ಪೂಜಾ ಅಭಿನಯಿಸುತ್ತಿದ್ದು ಶೀಘ್ರವೇ ಈ ಚಿತ್ರ ತೆರೆ ಕಾಣಲಿದೆ. ಪೂಜಾ ನಿರ್ಮಾಣ ಮಾಡುವ ಚಿತ್ರ ಆಕೆಯ  ಸಿನಿಮಾ ಕೆರಿಯರ್ ನಲ್ಲೇ ಅತಿ ದೊಡ್ಡ ಬಜೆಟ್ ನ ಸಿನಿಮಾವಾಗಲಿದೆ. ಒಂದು ಹಾಡನ್ನು ಸುಮಾರು 37 ದಿನಗಳ ಕಾಲ ಚಿತ್ರೀಕರಿಸಲಿದ್ದಾರೆ.

ಮೇ 1ರಂದು ಜೆಡಿ ಚಕ್ರವರ್ತಿ ಬೆಂಗಳೂರಿಗೆ ಆಗಮಿಸಲಿದ್ದು, ಅಂದೇ ಚಿತ್ರ ನಿರ್ದೇಶನದ ಎಲ್ಲಾ ವಿವರಗಳನ್ನು ತಿಳಿಸಲಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಸಿನಿಮಾಗಲ್ಲೂ ಜೆ.ಡಿ ಚಕ್ರವರ್ತಿ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾಪ ಅತ್ಯಂತ ಅಪಾಯಕಾರಿ ಹಾಗೂ ಸಂವಿಧಾನದ ಮೇಲಿನ ದಾಳಿ: ಸೋನಿಯಾ ಗಾಂಧಿ

ರಾಜ್ಯದಲ್ಲಿ ರಣ ಬಿಸಿಲು: 35 ಡಿಗ್ರಿ ತಲುಪಿದ ತಾಪಮಾನ, ಮಳೆ ಮುನ್ಸೂಚನೆ ಇಲ್ಲ ಎಂದ IMD

ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

SCROLL FOR NEXT