ಬೆಂಗಳೂರು: ಮರಾಠಿ ಕಾದಂಬರಿ 'ದುನಿಯಾದ್ರಿ'ಯ ಅದೇ ಹೆಸರಿನ ಕನ್ನಡ ಸಿನೆಮಾ ಅವತರಿಣಿಕೆಯ ಭಾಗವಾಗಲು ಒಪ್ಪಿಕೊಂಡಿರುವ ನಟ ಚೇತನ್ ಈ ವರ್ಷ ಎರಡನೇ ಸಿನೆಮಾ ಕೂಡ ಒಪ್ಪಿಕೊಂಡಿದ್ದಾರೆ.
'ಆಕಾಶ್' ಮತ್ತು 'ಅರಸು' ಖ್ಯಾತಿಯ ಮಹೇಶ್ ಬಾಬು ನಿರ್ದೇಶಿಸುತ್ತಿರುವ ಇನ್ನು ಹೆಸರಿಡದ ಈ ಚಿತ್ರದಲ್ಲಿ ಚೇತನ್ ನಟಿಸುತ್ತಿರುವುದನ್ನು ಧೃಢೀಕರಿಸುವ ನಿರ್ದೇಶಕ "ಒಳ್ಳೆಯ ಕಮರ್ಶಿಯಲ್ ನಟನಾಗುವ ಗುಣಗಳಿರುವ ನಟ ಚೇತನ್ ಆದರೆ ಅವರು ವಿಷಯ ಆಯ್ಕೆಗಳ ಬಗ್ಗೆ ಬಹಳ ಎಚ್ಚರಿಕೆಯಂದಿರುತ್ತಾರೆ. ಈ ಸಿನೆಮಾ ಒಪ್ಪಿಕೊಳ್ಳುವುದಕ್ಕೂ ಮುಂಚಿತವಾಗಿ ನಟ ನಮ್ಮ ಜೊತೆಗೆ ಎರಡು ಸುತ್ತಿನ ಮಾತುಕತೆ ನಡೆಸಿದರು" ಎನ್ನುತ್ತಾರೆ.
ಸಾಮಾಜಿಕ ಆಯಾಮವಿರುವ ಈ ಸಿನೆಮಾದಲ್ಲಿ ಚೇತನ್ ಟಿವಿ ವಾಹಿನಿಯ ವರದಿಗಾರನಿಗೆ ನಟಿಸುತ್ತಿರುವುದು ಆಸಕ್ತಿದಾಯಕ. "ಆಗತಾನೆ ಕಾಲೇಜಿನಿಂದ ಹೊರಬಂದವರಂತೆ ಕಾಣುವ ನಟ ನಮಗೆ ಬೇಕಿತ್ತು" ಎನ್ನುವ ಮಹೇಶ್ "ಅಲ್ಲದೆ ಚೇತನ್ ಪ್ರೇಕ್ಷಕರಿಗೆ ಸಂದೇಶವನ್ನು ಪರಿಣಾಮಕಾರಿಯಾಗಿ ಮುಟ್ಟಿಸಬಲ್ಲರು" ಎಂದಿದ್ದಾರೆ.
ಪ್ರಕಾಶ್, ಪ್ರೇಮ್ ಮತ್ತು ವೇಣು ನಿರ್ಮಿಸುತ್ತಿರುವ ಈ ಸಿನೆಮಾ ಅಕ್ಟೋಬರ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಮೂರು ವರ್ಷದ ಹಿಂದೆ 'ಮೈನಾ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ಚೇತನ್ ದೀರ್ಘ ಕಾಲದವರೆಗೆ ಸಿನೆಮಾಗಳಿಂದ ದೂರವಿದ್ದರು.
ಈ ಮಧ್ಯೆ ದಿಲೀಪ್ ಪ್ರಕಾಶ್ ಮತ್ತು ಆಶಿಕಾ ರಂಗನಾಥ್ ನಟಿಸಿರುವ 'ಕ್ರೇಜಿ ಬಾಯ್' ಬಿಡುಗಡೆಗೆ ಮಹೇಶ್ ಮುಂದಾಗಿದ್ದಾರೆ. "ಈ ಸಿನೆಮಾ ಬಹುಷಃ ಆಗಸ್ಟ್ 19 ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ" ಎನ್ನುತ್ತಾರೆ.