ಭಜರಂಗಿ ಲೋಕಿ 
ಸಿನಿಮಾ ಸುದ್ದಿ

ಜಾಗ್ವಾರ್ ಮೂಲಕ ತೆಲುಗಿಗೆ ಹಾರಿದ ಭಜರಂಗಿ ಲೋಕಿ

ಇತ್ತೀಚಿನ ಕನ್ನಡದ ಯಶಸ್ವಿ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟಿನಲ್ಲಿ ಸರ್ವೋತ್ಕೃಷ್ಟ ಕೆಟ್ಟ ವ್ಯಕ್ತಿ(ವಿಲನ್) ಎಂದು ವಸಿಷ್ಠ ಸಿಂಹನನ್ನು...

ಇತ್ತೀಚಿನ ಕನ್ನಡದ ಯಶಸ್ವಿ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟಿನಲ್ಲಿ ಸರ್ವೋತ್ಕೃಷ್ಟ ಕೆಟ್ಟ ವ್ಯಕ್ತಿ(ವಿಲನ್) ಎಂದು ವಸಿಷ್ಠ ಸಿಂಹನನ್ನು ವ್ಯಾಖ್ಯಾನಿಸಲಾದರೆ ಅಷ್ಟೇ ಭೀತಿ ಮತ್ತೊಬ್ಬ ವಿಲನ್ ನನ್ನು ನೋಡಿದರೆ ಆಗುತ್ತದೆ. ಲೋಕೇಶ್ ಅಲಿಯಾಸ್ ಭಜರಂಗಿ ಲೋಕಿ. ಭಜರಂಗಿ ಮೂಲಕ ಖ್ಯಾತರಾದ ಯವ ವಿಲನ್ ಲೋಕೇಶ್.
ಲೋಕೇಶ್ ರಥಾವರ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಅವರ ಮುಂದಿನ ಸಿನಿಮಾ ಜಾಗ್ವರ್. ಕನ್ನಡ ಮತ್ತು ತೆಲುಗು ಅವತರಣಿಕೆಯಲ್ಲಿ ಜಗಪತಿ ಬಾಬು ಮತ್ತು ಸಂಪತ್ ಕುಮಾರ್ ಅವರೊಂದಿಗೆ ನಟಿಸುತ್ತಿದ್ದಾರೆ. 
ಜಾಗ್ವಾರ್ ತೆಲುಗು ಸಿನಿಮಾದಲ್ಲಿ ಸಂಪತ್ ಮುಖ್ಯ ವಿಲನ್ ಆಗಿ ನಟಿಸುತ್ತಿದ್ದರೆ, ಹೀರೋ ನಿಖಿಲ್ ಕುಮಾರ್ ಗೆ ಸವಾಲೊಡ್ಡುವ ಪಾತ್ರದಲ್ಲಿ ಲೋಕಿ ಕಾಣಿಸಿಕೊಳ್ಳಲಿದ್ದಾರೆ. ಇದು ತಮ್ಮ ವೃತ್ತಿ ಜೀವನದಲ್ಲಿ ಬಹುಮುಖ್ಯ ಪಾತ್ರವಾಗಲಿದೆ ಎಂದು ಲೋಕಿ ನಂಬಿದ್ದಾರೆ.
ಇನ್ನು ಕನ್ನಡದ ರಾಜ್ -ವಿಷ್ಣು ಚಿತ್ರದಲ್ಲಿ ಶರಣ್ ಮತ್ತು ಚಿಕ್ಕಣ್ಣ ಜೊತೆ ಲೋಕಿ ಅಭಿನಯಿಸುತ್ತಿದ್ದು, ಇದು ತಮಿಳಿನ ರಜಿನಿ ಮುರುಗನ್ ಚಿತ್ರದ ರಿಮೇಕ್ ಆಗಿದೆ. ಅದರಲ್ಲಿ ಸಮುತಿರಕನಿ ಅಭಿನಯಿಸಿದ ಪಾತ್ರದಲ್ಲಿ ಲೋಕಿ ಅಭಿನಯಿಸುತ್ತಿದ್ದಾರೆ.
''ಇತ್ತೀಚಿನ ದಿನಗಳಲ್ಲಿ ವಿಲನ್ ಗಳಿಗೂ ಚಿತ್ರಗಳಲ್ಲಿ ಸಮಾನ ಅವಕಾಶ, ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗಾಗಿ ನನಗೆ ವಿಲನ್ ಆಗಿ ಅಭಿನಯಿಸುವಾಗ ದೊಡ್ಡ ಜವಾಬ್ದಾರಿಯಿದೆ. ಈ ಎರಡು ಚಿತ್ರಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಮುಂದಿನ ಹೆಜ್ಜೆ ಇಡುವುದಾಗಿ ಲೋಕಿ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?