ಬೆಂಗಳೂರು: ತಂದೆ ಮಕ್ಕಳ ಸಂಬಂಧದ ಬಗೆಗೆ ಬಾಲಿವುಡ್ ನಲ್ಲಿ 'ಪೀಕು' ಕನ್ನಡದಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಲನಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಯಶಸ್ವಿಯಾದವು. ಈಗ ತಂದೆ ಮತ್ತು ಮಗಳ ಭಾವನಾತ್ಮಕ ಸಂಬಂಧದ ಎಳೆಯುಳ್ಳ ಮತ್ತೊಂದು ಚಿತ್ರ 'ಪುಷ್ಪಕ ವಿಮಾನ' ಅಂತಹುದೇ ನಿರೀಕ್ಷೆಯೊಂದನ್ನು ಸೃಷ್ಟಿಸಿದೆ.
ರಮೇಶ್ ಅರವಿಂದ್ ಅವರ 100 ನೇ ಚಿತ್ರ ಮತ್ತು ಜೂಹಿ ಚವಾಲಾ ಹಾಡೊಂದರಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಹೀಗೆ ವಿಶೇಷತೆಗಳನ್ನು ತುಂಬಿಕೊಂಡಿರುವ ಚಿತ್ರದಲ್ಲಿ ಬಾಲ ನಟಿ ಯುವಿನಾ ಪಾರ್ಥವಿ ನಟಿಸಿದ್ದಾರೆ.
ಈಗ ಸಿನೆಮಾ ಸದ್ಯಕ್ಕೆ ರೀ-ರೆಕಾರ್ಡಿಂಗ್ ಹಂತದಲ್ಲಿದ್ದು ಸದ್ಯದಲ್ಲೇ ಅದ್ದೂರಿ ಆಡಿಯೋ ಬಿಡುಗಡೆಗೆ ಚಿತ್ರತಂಡ ಸಿದ್ಧವಾಗಿದೆ. ಹಾಗೆಯೇ ನಟಿ ರಚಿತಾ ರಾಮ್ ಅವರ ಪಾತ್ರದ ಮೊದಲ ನೋಟ ಲಭ್ಯವಿದ್ದು ಭಾವನಾತ್ಮಕ ದೃಶ್ಯದಲ್ಲಿ ನಟಿಸಿರುವುದು ಗೋಚರವಾಗುತ್ತದೆ.
ಇದು ತಂದೆ ಮಗಳ ಬಾಂಧವ್ಯದ ಚಿತ್ರವಾಗಿರುವುದರಿಂದ ಭಾವನಾತ್ಮಕ ದೃಶ್ಯ ಸಾಮಾನ್ಯ ಎನ್ನುವ ನಟಿ "ನಾನು ನನ್ನ ತಂದೆಗೆ ಬಹಳ ಹತ್ತಿರ ಆದುದರಿಂದ ಈ ಪಾತ್ರದ ಜೊತೆಗೆ ಒಳ್ಳೆಯ ಹೊಂದಾಣಿಕೆ ಸಾಧ್ಯವಾಯಿತು. ಈ ದೃಶ್ಯಪೂರ್ತಿ ನಾನು ರಮೇಶ್ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿತು. ನಾನು ನಮ್ಮ ತಂದೆಯನ್ನು ನನ್ನ ಕಣ್ಮುಂದೆ ಕಲ್ಪಿಸಿಕೊಳ್ಳುತ್ತಿದೆ" ಎನ್ನುತ್ತಾರೆ ರಚಿತಾ.
ವೈಯಕ್ತಿಕವಾಗಿ ಮಾತಿಗಿಳಿದ ರಚಿತಾ ರಾಮ್, ಹೆಣ್ಣುಮಕ್ಕಳು ತಮ್ಮ ಪೋಷಕರನ್ನು ನೋಡಿಕೊಳ್ಳುವುದಿಲ್ಲ ಎಂಬ ಪುರಾಣ ಈಗ ಸತ್ಯವಲ್ಲ ಎನ್ನುತ್ತಾರೆ. "ನಮ್ಮ ಪೋಷಕರನ್ನು ಈಗ ನಾನು ಮತ್ತು ನನ್ನ ಸಹೋದರಿ ಬೆಂಬಲಿಸುತ್ತಿದ್ದೇವೆ. ಇಂದು 'ಪೋಷಕರ ಜೊತೆಗೆ ನಾವಿದ್ದೇವೆ' ಎಂಬುದು ಹೆಣ್ಣುಮಕ್ಕಳ ಮಂತ್ರ" ಎನ್ನುವ ರಚಿತಾ ತಮ್ಮ ತಂದೆ ಕೂಡ ತಮ್ಮಂತೆಯೇ ಭಾವನಾತ್ಮಕ ಜೀವಿ ಎನ್ನುತ್ತಾರೆ.
"ಅವರಿಗೆ ಎಲ್ಲವು ನಾನು ಮತ್ತು ನನ್ನ ಸಹೋದರಿ ನೀತಾ ರಾಮ್. ಅವರೆಂದು ಗಂಡು ಮಗುವಿಲ್ಲ ಎಂದು ಕೊರಗಲಿಲ್ಲ ಮತ್ತು ನಮ್ಮ ಬಗ್ಗೆ ಇಂದಿಗೂ ಭರವಸೆಯಿಟ್ಟಿದ್ದರು. ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತಲೂ ಚೆನ್ನಾಗಿ ಪೋಷಕರನ್ನು ನೋಡಿಕೊಳ್ಳಬಲ್ಲರು ಎಂಬುದು ಅವರ ಸದಾ ನಂಬಿಕೆಯಾಗಿತ್ತು" ಎನ್ನುತ್ತಾರೆ ರಚಿತಾ.