ನಟ ಅವಿನಾಶ್ ದಿವಾಕರ್ 
ಸಿನಿಮಾ ಸುದ್ದಿ

'ಚೇಸ್ - ಇನ್ ದ ಡಾರ್ಕ್'ಗೆ ಅವಿನಾಶ್ ಸಿದ್ಧ

ನಟ ಅವಿನಾಶ್ ದಿವಾಕರ್ ಸದ್ಯಕ್ಕ ಕನ್ನಡ ಮತ್ತು ತಮಿಳು ದ್ವಿಭಾಷಾ ಚಿತ್ರದಲ್ಲಿ ನಿರತರಾಗಿದ್ದಾರೆ. ಆದರೆ ಅವರ ಮುಂದಿನ ಚಿತ್ರದ ಆಯ್ಕೆಯಲ್ಲಿ ಸಮಯಹರಣ ಮಾಡದೆ, 'ಚೇಸ್ ಇನ್ ದ ಡಾರ್ಕ್'ನಲ್ಲಿ

ಬೆಂಗಳೂರು: ನಟ ಅವಿನಾಶ್ ದಿವಾಕರ್ ಸದ್ಯಕ್ಕ ಕನ್ನಡ ಮತ್ತು ತಮಿಳು ದ್ವಿಭಾಷಾ ಚಿತ್ರದಲ್ಲಿ ನಿರತರಾಗಿದ್ದಾರೆ. ಆದರೆ ಅವರ ಮುಂದಿನ ಚಿತ್ರದ ಆಯ್ಕೆಯಲ್ಲಿ ಸಮಯಹರಣ ಮಾಡದೆ, 'ಚೇಸ್ ಇನ್ ದ ಡಾರ್ಕ್'ನಲ್ಲಿ ನಟಿಸಲು ಸಿದ್ಧರಾಗಿದ್ದಾರೆ, 
ಈ ಸಿನೆಮಾದ ಮೂಲಕ ಹರಿ ಆನಂದ್ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. 
"ನಾನು ಮುಂದಿನ ಸಿನೆಮಾದಲ್ಲಿ ತಂತ್ರಜ್ಞಾನದಲ್ಲಿ ನುರಿತ ಚಿತ್ರತಂಡದೊಂದಿಗೆ ಕೆಲಸ ಮಾಡಲಿದ್ದೇನೆ. ಈ ಸಿನೆಮಾ ತನಿಖೆಯ ಬಗೆಗೆ" ಎಂದು ತಿಳಿಸುವ ನಟ "ಈ ಹಿಂದೆ 'ಹಾಲಿಡೆ' ಎಂಬ ಸಿನೆಮಾದಲ್ಲಿ ಹರಿ ಆನಂದ್ ನನ್ನನ್ನು ನಿರ್ದೇಶಿಸಬೇಕಿತ್ತು ಆದರೆ ಅದು ನಿಂತು ಹೋಯಿತು ಈಗ 'ಚೇಸ್..' ನಮ್ಮನ್ನು ಒಟ್ಟಿಗೆ ತರಿಸಿದೆ" ಎನ್ನುತ್ತಾರೆ. 
ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಅವಿನಾಶ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಗಣೇಶ್ ನಟನೆಯ 'ಮದುವೆ ಮನೆ' ಸಿನೆಮಾದಲ್ಲಿ ಖಾಕಿ ಧರಿಸಿದ್ದರು. 
ನಟಿ ಶೀತಲ್ ಶೆಟ್ಟಿ ಅವಿನಾಶ್ ಎದುರು ನಟಿಸಲಿದ್ದು, ಅನಂತ್ ಅರಸ್ ಅವರ ಛಾಯಾಗ್ರಹಣ ಸಿನೆಮಾಗಿದೆ. ಕಾರ್ತಿಕ್ ಆಚಾರ್ಯ ಸಂಗೀತ ನೀಡುತ್ತಿದ್ದಾರೆ. 
ಸದ್ಯಕ್ಕೆ ನಿರತವಾಗಿರುವ ದ್ವಿಭಾಷಾ ಚಲನಚಿತ್ರದ ಬಗ್ಗೆ ಹೇಳುವ ಅವರ "ಇದು ಕನ್ನಡದಲ್ಲಿ 'ವರ' ಮತ್ತು ತಮಿಳಿನಲ್ಲಿ 'ಮಂಜು ವಿರತ್ತು' ಎಂದು ಚಿತ್ರೀಕರಣಗೊಳ್ಳುತ್ತಿದ್ದು, ಚೆನ್ನೈ ನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಹುಡುಗನೊಬ್ಬನ ಕಥೆ ಇದು. ಅವನು ಮಲಯಾಳಂ ಹುಡುಗಿಯನ್ನು ಪ್ರೀತಿಸುತ್ತಾನೆ. ಈ ಸಿನೆಮಾವನ್ನು ತೆಲುಗು ಮತ್ತು ಮಲಯಾಳಂ ಗೆ ಡಬ್ ಮಾಡಲು ಕೂಡ ನಿರ್ಮಾಪಕರು ಚಿಂತಿಸುತ್ತಿದ್ದಾರೆ" ಎನ್ನುತ್ತಾರೆ ಅವಿನಾಶ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT