'ರಾಜರಥ'ದಲ್ಲಿ ನಿರೂಪ್ ಬಂಢಾರಿ 
ಸಿನಿಮಾ ಸುದ್ದಿ

ಅನೂಪ್ ಸಿನೆಮಾದಲ್ಲಿ ಮಿ.ಪಚಬಾಳೆ ಬಾಳೆಹಣ್ಣು ಪಾತ್ರ

ಸಹೋದರ ನಿರೂಪ್ ಬಂಢಾರಿ ಅವರ ಹುಟ್ಟುಹಬ್ಬದ ದಿನ ನಿರ್ದೇಶಕ ಅನೂಪ್ ಬಂಢಾರಿ ತಮ್ಮ ಹೊಸ ಚಿತ್ರ 'ರಾಜರಥ'ದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ನಿರೂಪ್ ಈ ಸಿನೆಮಾದ...

ಬೆಂಗಳೂರು: ಸಹೋದರ ನಿರೂಪ್ ಬಂಢಾರಿ ಅವರ ಹುಟ್ಟುಹಬ್ಬದ ದಿನ ನಿರ್ದೇಶಕ ಅನೂಪ್ ಬಂಢಾರಿ ತಮ್ಮ ಹೊಸ ಚಿತ್ರ 'ರಾಜರಥ'ದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ನಿರೂಪ್ ಈ ಸಿನೆಮಾದ ನಾಯಕ ನಟ. 
ಅವಂತಿಕಾ ಶೆಟ್ಟಿ ಮತ್ತು ರವಿಶಂಕರ್ ಕೂಡ ನಟಿಸುತ್ತಿರುವ ಈ ಸಿನೆಮಾದಲ್ಲಿ ಅನೂಪ್ ಬಾಳೆಹಣ್ಣಿನ ಹೊಸ ಪಾತ್ರವೊಂದನ್ನು ಕೂಡ ಸೃಷ್ಟಿಸಿದ್ದಾರೆ. ಸಿನೆಮಾದಲ್ಲಿ ಇದು ಮುಖ್ಯ ಪಾತ್ರವಾಗಿ ಕಾಣಿಸಿಕೊಳ್ಳಲಿದ್ದು, ಅದರ ಹೆಸರ ಮಿ.ಪಚ್ಬಾಳೆ.
ಮಿ.ಪಚ್ಬಾಳೆ ಬಗ್ಗೆ ಹೆಚ್ಚು ಗುಟ್ಟು ಬಿಚ್ಚಿಡದ ನಿರೂಪ್ "ಈ ಹಣ್ಣನ್ನು ಚಾರ್ಲಿ ಚಾಪ್ಲಿನ್ ಸಿನೆಮಾದಿಂದ ಹಿಡಿದು ಹಲವಾರು ಸಿನಿಮಾಗಲ್ಲಿ ಬಳಸಿದ್ದಾರೆ" ಎನ್ನುವ ಅವರು ಉದಾಹರಣೆಗೆ ಚಾರ್ಲಿ ಚಾಪ್ಲಿನ್ ಸಿನೆಮಾಗಳ ಹಲವು ಸಿನೆಮಾಗಳಲ್ಲಿ ಅವರು ಬಾಳೆ ಹಣ್ಣಿನ ಸಿಪ್ಪೆ ಸುಲಿಯುವುದನ್ನು ಹಲವಾರು ಬಾರಿ ನೋಡಿರುತ್ತೀರಿ "ನಮ್ಮ ಸಿನೆಮಾ ಮಾಡುವಾಗ ಕೂಡ ಈ ಪಾತ್ರ ಒಳಗೊಳ್ಳುವ ಐಡಿಯಾ ಬಂದದ್ದು. ಬಹಳ ಆಸಕ್ತಿದಾಯಕವಾಗಿತ್ತು" ಎನ್ನುತ್ತಾರೆ ನಿರೂಪ್. "ಅಲ್ಲದೆ ಹಣ್ಣಿನ ಜೊತೆಗೆ ಹಳದಿ ಬಣ್ಣ ಕೂಡ ನಮ್ಮ ಸಿನೆಮಾದಲ್ಲಿ ಪ್ರಮುಖ" ಎನ್ನುತ್ತಾರೆ. 
ಒಂದು ವರ್ಷದವರೆಗೆ ಪ್ರದರ್ಶನ ಕಂಡ 'ರಂಗಿತರಂಗ'ದ ನಂತರ ಮತ್ತೆ ಈ ಸಹೋದರರು ಒಟ್ಟಾಗಿದ್ದಾರೆ. ಹಾರರ್ ಪ್ರಾಕಾರದಿಂದ ರೋಮ್ಯಾಂಟಿಕ್ ಹಾಸ್ಯ ಪ್ರಾಕಾರಕ್ಕೆ ಜಿಗಿದಿದ್ದಾರೆ. "'ರಾಜರಥ' ಒಂಭತ್ತು ದಿನಗಳ ಚಿತ್ರೀಕರಣ ಮುಗಿಸಿದೆ, ಈ ಸಮಯದಲ್ಲಿ ಎರಡು ಹಾಡುಗಳು ಮತ್ತು ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ಮುಂದಿನ ಹಂತದ ಚಿತ್ರೀಕರಣ ಆಗಸ್ಟ್ 26 ರಿಂದ ಮುಂದುವರೆಯಲಿದೆ" ಎನ್ನುತ್ತಾರೆ ನಿರೂಪ್. 
ಈ ಸಿನೆಮಾಗೆ ವಿಲಿಯಂ ಡೇವಿಡ್ ಸಿನೆಮ್ಯಾಟೋಗ್ರಾಫರ್ ಮತ್ತು ಅನೂಪ್ ಅವರೇ ಸಂಗೀತ ನೀಡುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT