ಖ್ಯಾತ ತಮಿಳು ಸಾಹಿತಿ ಹಾಗೂ ಅಂಕಣಕಾರ ನ. ಮುತ್ತು ಕುಮಾರ್ 
ಸಿನಿಮಾ ಸುದ್ದಿ

ಖ್ಯಾತ ಸಾಹಿತಿ ನ. ಮುತ್ತುಕುಮಾರ್ ವಿಧಿವಶ

ಅನಾರೋಗ್ಯದಿಂದ ನರಳುತ್ತಿದ್ದ ಖ್ಯಾತ ತಮಿಳು ಸಾಹಿತಿ ಹಾಗೂ ಅಂಕಣಕಾರ ನ. ಮುತ್ತುಕುಮಾರ್ ಅವರು ಶನಿವಾರ ವಿಧಿವಶರಾಗಿದ್ದಾರೆ...

ಚೆನ್ನೈ: ಅನಾರೋಗ್ಯದಿಂದ ನರಳುತ್ತಿದ್ದ ಖ್ಯಾತ ತಮಿಳು ಸಾಹಿತಿ ಹಾಗೂ ಅಂಕಣಕಾರ ನ. ಮುತ್ತುಕುಮಾರ್ ಅವರು ಶನಿವಾರ ವಿಧಿವಶರಾಗಿದ್ದಾರೆ.

ಕೆಲ ದಿನಗಳಿಂದ ಜಾಡೀಂಸ್ ನಿಂದ ಬಳಲುತ್ತಿದ್ದ ನ. ಮುತ್ತುಕುಮಾರ್ (41) ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.

ಮುತ್ತುಕುಮಾರ್ ಅವರು ಈವರೆಗೂ 1000ಕ್ಕೂ ಹೆಚ್ಚು ಚಿತ್ರಗಳ ಹಾಡಿಗೆ ಸಾಹಿತಿ ಬರೆದಿದ್ದಾರೆ. ನಿರ್ದೇಶನದ ಕನಸು ಹಿಡಿದು ತಮಿಳು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದ ಮುತ್ತುಕುಮಾರ್ ಅವರು, ಬಾಲು ಮಹೇಂದರ್ ಅವರೊಂದಿಗೆ ಕೆಲಸ ಮಾಡಲು ಆರಂಭಿಸಿದ್ದರು. ನಂತರ ಸಾಹಿತ್ಯ ರಂಗದಲ್ಲಿ ಹೆಸರು ಮಾಡಲು ಆರಂಭಿಸಿದ್ದರು.  ತಂಗ ಮೀಂಗಲ್ ಸಿನಿಮಾದ ಆನಂದ ಯಾಜೈ ಮತ್ತು ಸೈವಂ ಚಿತ್ರದ ಅಜಾಗೆ ಅಜಾಗು ಹಾಡಿನ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು.

ಕಾಂಚೀಪುರಂನ ಕನ್ನಿಕಾಪುರಂನಲ್ಲಿ ಜನಿಸಿದ್ದ ಮುತ್ತುಕುಮಾರ್ ಅವರು ಚಿಕ್ಕ ಮಗುವಿದ್ದಾಗಲೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಪುಸ್ತಕದ ಜೊತೆಯೇ ಬೆಳೆದಿದ್ದ ಇವರು, 2006ರಲ್ಲಿ ಜೀವನಲಕ್ಷ್ಮೀ ಎಂಬುವವರೊಂದಿಗೆ ವಿವಾಹವಾಗಿದ್ದರು. ಇವರಿಗೆ 9 ವರ್ಷದ ಮಗ ಆಧವನ್ ಹಾಗೂ 9 ತಿಂಗಳ ಹೆಣ್ಣು ಮಗು ಯೋಗಲಕ್ಷ್ಮಿ ಎಂಬ ಮಕ್ಕಳಿದ್ದಾರೆ.  

ಮುತ್ತುಕುಮಾರ್ ಅವರ ಸಾವಿಗೆ ಸಾಮಾಜಿಕ ತಾಣದಲ್ಲಿ ಸಾಕಷ್ಟು ಮಂದಿ ಸಂತಾಪ ಸೂಚಿಸುತ್ತಿದ್ದಾರೆ, ನಟ ಸಿದ್ಧಾರ್ಥ್ ಅವರು ಟ್ಟಿಟರ್ ನಲ್ಲಿ ಆಘಾತ ವ್ಯಕ್ತಪಡಿಸಿದ್ದು, 'ಮುತ್ತು ಕುಮಾರ್ ಅವರು ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಚಿತ್ರರಂಗಕ್ಕೆ ದೊಡ್ಡ ನಷ್ಟ! ದುಃಖದ ದಿನ' ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT