ನಟಿ ರಾಧಿಕಾ ಪಂಡಿತ್ 
ಸಿನಿಮಾ ಸುದ್ದಿ

ನನ್ನ ವೃತ್ತಿಜೀವನ ಮುಂದುವರೆಯಲಿದೆ: ರಾಧಿಕಾ ಪಂಡಿತ್

ನಟ ಯಶ್ ಅವರೊಂದಿಗೆ ನಿಶ್ಚಿತಾರ್ಥ ಆದಾಗಿಲಿಂದಲೂ ನಟಿ ರಾಧಿಕಾ ಪಂಡಿತ್ ಮುಂದೆ ಸಿನೆಮಾಗಳಲ್ಲಿ ನಟಿಸಲಿದ್ದಾರೆಯೇ ಎಂಬ ಪ್ರಶ್ನೆ ಎಂದಿನಂತೆ ಉದ್ಭವವಾಗಿತ್ತು.

ಬೆಂಗಳೂರು: ನಟ ಯಶ್ ಅವರೊಂದಿಗೆ ನಿಶ್ಚಿತಾರ್ಥ ಆದಾಗಿಲಿಂದಲೂ ನಟಿ ರಾಧಿಕಾ ಪಂಡಿತ್ ಮುಂದೆ ಸಿನೆಮಾಗಳಲ್ಲಿ ನಟಿಸಲಿದ್ದಾರೆಯೇ ಎಂಬ ಪ್ರಶ್ನೆ ಎಂದಿನಂತೆ ಉದ್ಭವವಾಗಿತ್ತು. ಆದರೆ ಎಲ್ಲ ಸಂದೇಹಗಳನ್ನು ನಿವಾರಿಸಲು ಅವರು ಸಿಟಿ ಎಕ್ಸ್ಪ್ರೆಸ್ ಜೊತೆಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. 
"ನಾನು ಮೊದಲಿನಿಂದಲೂ ನನ್ನ ವೈಯಕ್ತಿಕ ಮತ್ತು ವೃತ್ತಿ ಜೀವನಗಳನ್ನು ಬೆರೆಸಿಲ್ಲ. ಆದುದರಿಂದ ನಾನು ನಿಶ್ಚಿತಾರ್ಥ ಮಾಡಿಕೊಂಡಿರುವುದು ನನ್ನ ವೃತ್ತಿಜೀವನಕ್ಕೆ ಅಡ್ಡಬರಬೇಕಿಲ್ಲ. 'ಸಂತು ಸ್ಟ್ರೇಟ್ ಫಾರ್ವಾರ್ಡ್' ನನ್ನ ಕೊನೆಯ ಸಿನೆಮಾ ಎಂದು ಕೆಲವರು ಮಾತಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಜನ ನನ್ನ ಬಗ್ಗೆ ಏಕೆ ತೀರ್ಪು ನೀಡುತ್ತಿದ್ದಾರೋ ತಿಳಿಯುತ್ತಿಲ್ಲ. ನನ್ನ ವೈಯಕ್ತಿಕ ಜೀವನ ನನ್ನದು ಮತ್ತು ಅದು ನನ್ನ ವೃತ್ತಿಗೆ ಅಡೆತರುವುದಿಲ್ಲ" ಎನ್ನುತ್ತಾರೆ ಆತ್ಮವಿಶ್ವಾಸದ ನಟಿ ರಾಧಿಕಾ. 
ಎಂಟು ವರ್ಷ ಕನ್ನಡ ಚಿತ್ರರಂಗದಲ್ಲಿ ಮನೆಮಾತಾಗಿರುವ ನಟಿ ಯಾವುದೇ ಮಹಿಳೆಗೆ ನಿಶ್ಚಿತಾರ್ಥ ಅವರ ವೃತ್ತಿಯ ಕೊನೆಯಲ್ಲ ಎನ್ನುತ್ತಾರೆ. "ಎಲ್ಲ ರೀತಿಯ ವೃತ್ತಿಯಲ್ಲಿ 60 ಕ್ಕೂ ಹೆಚ್ಚು ವರ್ಷ ದುಡಿಯುವ ಮಹಿಳೆಯರಿದ್ದಾರೆ. ನಾವು ಈಗ ಆಧುನಿಕ ಮತ್ತು ವಿಶಾಲ ಮನಸ್ಸಿನ ಸಮಾಜದಲ್ಲಿ ಬದುಕುತ್ತಿದ್ದೇವೆ. ಮದುವೆಯಾದ ತಕ್ಷಣ ಮಹಿಳೆಯರು ಕೆಲಸ ಬಿಡುತ್ತಿದ್ದ ಕಾಲ ಸರಿದುಹೋಗಿದೆ. ಅಂತಹ ಸಮಾಜದಲ್ಲಿ ನಾವಿಲ್ಲ. ಆದುದರಿಂದ ನಾನು ಮುಂದೇನು ಮಾಡಬೇಕು ಎಂದು ಬೇರೆಯವರು ನಿಶ್ಚಯಿಸುವ ಅಗತ್ಯ ಇಲ್ಲ" ಎನ್ನುತ್ತಾರೆ. 
"ನನ್ನ ಪಾತ್ರಗಳನ್ನೂ ಜನ ಇಷ್ಟ ಪಟ್ಟಿದ್ದಾರೆ ಮತ್ತು ಜನರ ಮನಸ್ಸಿನಲ್ಲಿ ಅವುಗಳು ಉಳಿದುಕೊಂಡಿವೆ. ನಾನು ಸಿನಿಮಾರಂಗಕ್ಕೆ ಕೊಡುಗೆ ನೀಡುವುದನ್ನು ಮುಂದುವರೆಸುತ್ತೇನೆ " ಎಂದು ಕೂಡಾ ರಾಧಿಕಾ ಹೇಳುತ್ತಾರೆ. 
ರಾಧಿಕಾ ಪಂಡಿತ್ ನಟನೆಯ 'ಜೂಮ್' 50 ದಿನಗಳ ಪ್ರದರ್ಶನ ಮುಗಿಸಿದ್ದು, ಪುನೀತ್ ಅವರೊಂದಿಗೆ ನಟಿಸಿರುವ 'ದೊಡ್ಮನೆ ಹುಡುಗ' ಬಿಡುಗಡೆಯಾಗಬೇಕಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT