ಶೃತಿ ಹಾಸನ್, ಕಮಲ್ ಹಾಸನ್, ಗೌತಮಿ(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಶೃತಿ-ಗೌತಮಿ ಜಗಳ: ನಿಜ ಸಂಗತಿ ಇದು

ಹಿರಿಯ ನಟ ಕಮಲ್ ಹಾಸನ್ ಅವರ ಮಹತ್ವಾಕಾಂಕ್ಷಿ ಚಿತ್ರ ಸುಬ್ಬಾಶ್ ನಾಯ್ಡು ಬಿಡುಗಡೆಗೆ ಮುನ್ನವೇ ಹಲವು ಸಂಕಷ್ಟಗಳನ್ನು...

ಹಿರಿಯ ನಟ ಕಮಲ್ ಹಾಸನ್ ಅವರ ಮಹತ್ವಾಕಾಂಕ್ಷಿ ಚಿತ್ರ ಸುಬ್ಬಾಶ್ ನಾಯ್ಡು ಬಿಡುಗಡೆಗೆ ಮುನ್ನವೇ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ನಿರ್ದೇಶಕ ಟಿ.ಕೆ.ರಾಜೀವ್  ಕುಮಾರ್ ಅಸೌಖ್ಯಕ್ಕೀಡಾಗಿದ್ದರಿಂದ ಮಧ್ಯದಲ್ಲಿ ಚಿತ್ರವನ್ನು ನಿರ್ದೇಶಿಸಬೇಕಾಗಿ ಬಂತು. ನಂತರ ಕಾಲು ಕಮಲ್ ಹಾಸನ್ ಅವರು ಕಾಲು ನೋವಿನಿಂದ ಆಸ್ಪತ್ರೆ ಸೇರಿ ಸ್ವಲ್ಪ ದಿನಗಳ ಕಾಲ ಶೂಟಿಂಗ್ ನಿಂತಿತ್ತು. ಇದೀಗ ಮತ್ತೊಂದು ಅಸಹಜ ತೊಂದರೆಯಲ್ಲಿ ಕಮಲ್ ಸಿಲುಕಿದ್ದಾರೆ. ತಮ್ಮ ಜೀವನ ಸಂಗಾತಿ ಗೌತಮಿ ತಡಿಮಲ್ಲ ಮತ್ತು ಮಗಳು ಶೃತಿ ಹಾಸನ್ ಮಧ್ಯೆ ಜಗಳ ಉಂಟಾಗಿದ್ದು, ಕಮಲ್ ಹಾಸನ್ ಅವರಿಗೆ ನುಂಗಲೂ ಅಲ್ಲ, ಬಿಡಲೂ ಅಲ್ಲ ಎಂಬಂಥ ಪರಿಸ್ಥಿತಿ ಉಂಟಾಗಿದೆ.
ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಸುಬ್ಬಾಶ್ ನಾಯ್ಡು ಚಿತ್ರದಲ್ಲಿ ಶೃತಿ ಹಾಸನ್ ಮುಖ್ಯ ಪಾತ್ರದಲ್ಲಿದ್ದಾರೆ.ಗೌತಮಿ ಕಾಸ್ಟ್ಯೂಮ್ ಡಿಸೈನರ್. ಚಿತ್ರದಲ್ಲಿ ತಮ್ಮ ನೋಟವನ್ನು ಗೌತಮಿಯವರು ಬದಲಾಯಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರಂತೆ ಶೃತಿ. ಗೌತಮಿ ಕಾಸ್ಟ್ಯೂಮ್ ಮಾಡಿದ ಬಟ್ಟೆ ತೊಡುವುದು ಶೃತಿಗೆ ಒಂಚೂರು ಇಷ್ಟವಿಲ್ಲವಂತೆ. ಹಾಗಾಗಿ ಸೆಟ್ ನಲ್ಲಿ ಇಬ್ಬರೂ ಜಗಳವಾಡಿಕೊಂಡಿದ್ದಾರೆ, ಇದರಿಂದ ಇಡೀ ಚಿತ್ರ ತಂಡದಲ್ಲಿ ಗೊಂದಲದ ವಾತಾವರಣ ಉಂಟಾಗಿದೆ. ಒಂದು ದಿನ ಪರಿಸ್ಥಿತಿ ಎಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಯಿತೆಂದರೆ ಇಡೀ ದಿನದ ಶೂಟಿಂಗ್ ನ್ನೇ ರದ್ದುಪಡಿಸಲಾಯಿತು ಎನ್ನುತ್ತದೆ ಚಿತ್ರ ತಂಡದ ಮೂಲಗಳು.
ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎನ್ನುವಾಗ ಶೃತಿ ತಮ್ಮ ವಕ್ತಾರರ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಈ ಎಲ್ಲಾ ವದಂತಿಗಳಿಗೆ ತೆರೆ ಎಳೆಯಲು ಪ್ರಯತ್ನಿಸಿರುವ 30 ವರ್ಷದ ನಟಿ ಶೃತಿ, ತಾವು ಯಾವತ್ತಿಗೂ ಗೌತಮಿ ಜೊತೆಗೆ ಉತ್ತಮ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದಾರೆ.
ತನ್ನ ತಂದೆ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಶೃತಿ ಹಾಸನ್ ರದ್ದು ಯುವ, ಸಿಡುಕಿನ ಯುವತಿ ಪಾತ್ರ. ಲಾಸ್ ಏಂಜಲೀಸ್ ನಲ್ಲಿ ಬೆಳೆದ ಆಕೆ ತನ್ನ ಚಮಾತ್ಕಾರಿ ಮತ್ತು ಯಾವದಕ್ಕೂ ಹೆದರದ ಸ್ವಭಾವದ ಮನೋಧರ್ಮಕ್ಕೆ ಫ್ಯಾಶನ್ ನ್ನು ಭಾವನೆ ವ್ಯಕ್ತಪಡಿಸಲು ಬಳಸುತ್ತಾಳೆ. ಇದನ್ನು ಗಮನದಲ್ಲಿಟ್ಟುಕೊಂಡು ಗೌತಮಿ ಕೆಲವು ಬಟ್ಟೆಗಳನ್ನು ಶೃತಿಗಾಗಿ ತಂದಿದ್ದರು. ಚಿತ್ರದ ಪೂರ್ವ ನಿರ್ಮಾಣ ಹಂತದಲ್ಲಿ ಡ್ರೆಸ್ ಹೇಗೆ ಕಾಣುತ್ತದೆಂದು ಹಾಕಿ ನೋಡಲಾಗಿತ್ತು. ಬಟ್ಟೆ ಧರಿಸಿ ನೋಟದಲ್ಲಿ ಹೇಗೆ ಕಾಣುತ್ತದೆ ಎಂದು ನೋಡುವುದು, ಸಲಹೆ, ಅಭಿಪ್ರಾಯಗಳನ್ನು ಕೊಡುವುದು ಚಿತ್ರದ ಒಂದು ಸಿದ್ದ ಪ್ರಕ್ರಿಯೆ ಎಂದು ಶೃತಿ ಹಾಸನ್ ವಕ್ತಾರರು ತಿಳಿಸಿದ್ದಾರೆ.
ಚಿತ್ರದ ಕೋರ್ ತಂಡ ಕೂಡ ಶೃತಿ ಪಾತ್ರದ ನೋಟಕ್ಕೆ ಇನ್ನೂ ಹೆಚ್ಚಿನ ಅಗತ್ಯವಿದೆ ಎಂದು ಮನಗಂಡು ಗೌತಮಿಯವರಿಗೆ ತಿಳಿಸಿತು. ವೃತ್ತಿ ಮನೋಧರ್ಮದ ಗೌತಮಿ ಸಲಹೆಯನ್ನು ಅರ್ಥ ಮಾಡಿಕೊಂಡು ಹೊಸ ಬಟ್ಟೆಗಳನ್ನು ಖರೀದಿಸಿ ತಂದಿದ್ದಾರೆ. ಶೃತಿ ಸ್ವತಃ ಕೆಲ ಸಮಯ ಲಾಸ್ ಏಂಜಲೀಸ್ ನಲ್ಲಿ ನೆಲೆಸಿದ್ದರಿಂದ ಸ್ಟೈಲ್ ಸೆನ್ಸ್ ಗೊತ್ತಿರುವುದರಿಂದ ಗೌತಮಿಯವರಿಗೆ ವಸ್ತ್ರ ವಿನ್ಯಾಸದಲ್ಲಿ ಕೆಲ ಅಂಶಗಳನ್ನು ಸೇರಿಸುವಂತೆ ಹೇಳಿದರಂತೆ. ಅದಕ್ಕೆ ಗೌತಮಿಯವರೂ ಒಪ್ಪಿದ್ದಾರಂತೆ.
ಕಮಲ್ ಹಾಸನ್ ನಿರ್ದೇಶನದ ಸುಬ್ಬಾಶ್ ನಾಯ್ಡು ಕಾಮಿಡಿ-ಸಾಹಸ ಪ್ರಧಾನ ಚಿತ್ರವಾಗಿದ್ದು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಒಟ್ಟಿಗೆ ತಯಾರಾಗುತ್ತಿದೆ. ಡಿಸೆಂಬರ್ 1ರಂದು ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT