ರಾಮ್ ಗೋಪಾಲ್ ವರ್ಮಾ 
ಸಿನಿಮಾ ಸುದ್ದಿ

ಆರ್ ಜಿ ವಿ ನಿರ್ದೇಶನದ ಸಿನೆಮಾ ಮುಂದುವರೆಸುವೆ: ನಿರ್ಮಾಪಕ ಸಿ ಆರ್ ಮನೋಹರ್

ಕೋಟಿಗೊಬ್ಬ 2 ಸಿನೆಮಾದ ಸುದೀಪ್ ಅವರ ನಟನೆಯನ್ನು ಹೊಗಳಿದ್ದ ರಾಮ್ ಗೋಪಾಲ್ ವರ್ಮಾ, ಸುದೀಪ್ ನಟನೆಯ ಮುಂದೆ ವಿಷ್ಣುವರ್ಧನ್ ಅಪ್ರಬುದ್ಧ ನಟ ಎಂಬ ಮಾತು ಖ್ಯಾತ ಕನ್ನಡ ನಟ

ಬೆಂಗಳೂರು: ಕೋಟಿಗೊಬ್ಬ 2 ಸಿನೆಮಾದ ಸುದೀಪ್ ಅವರ ನಟನೆಯನ್ನು ಹೊಗಳಿದ್ದ ರಾಮ್ ಗೋಪಾಲ್ ವರ್ಮಾ, ಸುದೀಪ್ ನಟನೆಯ ಮುಂದೆ ವಿಷ್ಣುವರ್ಧನ್ ಅಪ್ರಬುದ್ಧ ನಟ ಎಂಬ ಮಾತು ಖ್ಯಾತ ಕನ್ನಡ ನಟ ದಿವಂಗತ ವಿಷ್ಣುವರ್ಧನ್ ಅಭಿಮಾನಿಗಳನ್ನು ಕೆರಳಿಸಿತ್ತು. ವಿಷ್ಣುವರ್ಧನ್ ಅಭಿಮಾನಿಗಳ ಸಂಘಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿ ರಾಮ್ ಗೋಪಾಲ್ ವರ್ಮಾ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸುವಂತೆ ಆಗ್ರಹಿದ್ದವು. ಈ ನಡುವೆ ಸುದೀಪ್ ಹೊಸದಾಗಿ ಟ್ವೀಟ್ ಮಾಡಿ ದಂತಕತೆಗಳಾದ ರಜನಿಕಾಂತ್ ಆಗಲಿ ವಿಷ್ಣುವರ್ಧನ್ ಆಗಲಿ ಅವರಿಗೆ ನಾನು ಸರಿಸಮಾನನಲ್ಲ ಎಂದಿದ್ದರು. 
ಈಗ ಮುತ್ತಪ್ಪ ರೈ ಸಿನೆಮಾವೊಂದನ್ನು ಆರ್ ಜಿ ವಿ ನಿರ್ದೇಶಿಸುತ್ತಿದ್ದ, ಅದರ ನಿರ್ಮಾಪಕ ಸಿ ಆರ್ ಮನೋಹರ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ "ನಾನು ಆರ್ ಜಿ ವಿ ಸಿನೆಮಾವನ್ನು ಮುಂದುವರೆಸಲಿದ್ದೇನೆ. ಸಿನೆಮಾ ಈ ವರ್ಷದ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ ಎಂದಿದ್ದಾರೆ".
ಭೂಗತ ದೊರೆ ಮುತ್ತಪ್ಪ ರೈ ಜೀವನಾಧಾರಿತ ಈ ಚಿತ್ರ ಬಹು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. 
ಆರ್ ಜಿ ವಿ ವಿವಾದಾತ್ಮಕ ಟ್ವೀಟ್ ಗಳ ಬಗ್ಗೆ ಹೆಚ್ಚು ಚರ್ಚಿಸಲು ಇಷ್ಟಪಡದ ಮನೋಹರ್ "ಅವರು ಪ್ರತಿಕ್ರಿಯಿಸುತ್ತಿರುವ ಸಿನೆಮಾಗಳ ಬಗ್ಗೆಯಾಗಲಿ ಅಥವಾ ಇತರ ಸಿನೆಮಾಗಳ ಬಗ್ಗೆಯಾಗಲಿ ನನಗೆ ಸಂಬಂಧ ಇಲ್ಲ. ನನ್ನ ಆರ್ ಜಿ ವಿ ಸಂಬಂಧ ಇರುವುದು ರೈ ಸಿನೆಮಾದ ಬಗ್ಗೆ ಮಾತ್ರ. ಅದು ಮೇ 1 ರಂದು ಚಾಲನೆಗೊಂಡಿದೆ" ಎಂದು ಹೇಳಿದ್ದಾರೆ. 
"ಆರ್ ಜಿ ವಿ ನಡೆಗಳನ್ನು ನಾನು ಹೇಗೆ ನಿರ್ದೇಶಿಸಲಿ? ಅವರು ವಿಚಿತ್ರ ಮನುಷ್ಯ. ಅದು ಅವರ ಅನಿಸಿಕೆ, ಅದಕ್ಕೆ ಅವರು ಉತ್ತರ ನೀಡಬೇಕಾಗುತ್ತದೆ. ಆರ್ ಜಿ ವಿ ಟ್ವೀಟ್ ಗಳ ಬಗ್ಗೆ ನಾನು ಉತ್ತರಿಸಬೇಕಿಲ್ಲ. ನಾನು ನಿರ್ಮಾಪಕ ಮಾತ್ರ ಮತ್ತು ಸಿನೆಮಾಗಳಲ್ಲಿ ಹೂಡಿಕೆ ಮಾಡುತ್ತೇನೆ" ಎಂದು ಮನೋಹರ್ ಹೇಳಿದ್ದಾರೆ. 
ಈ ಹಿಂದೆ 2010 ರಲ್ಲಿ ಬಿಡುಗಡೆಯಾದ ವಿಷ್ಣುವರ್ಧನ್ ಅವರ 'ಸ್ಕೂಲ್ ಮಾಸ್ಟರ್' ಸಿನೆಮಾವನ್ನು ಮನೋಹರ್ ನಿರ್ಮಿಸಿದ್ದರು. "ನನಗೆ ವಿಷ್ಣು ಸರ್ ಅವರ ಮೇಲೆ ಅಪಾರ ಗೌರವವಿದೆ ಮತ್ತು ಅವರ ಸಿನೆಮಾ ಜೊತೆಗೆ ಗುರುತಿಸಿಕೊಂಡಿರುವುದಕ್ಕೆ ಹೆಮ್ಮೆಯಿದೆ" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!