'ನಟರಾಜ ಸರ್ವಿಸ್'ನಲ್ಲಿ ಶರಣ್ ಮತ್ತು ಮಯೂರಿ
ಬೆಂಗಳೂರು: 'ನಟರಾಜ ಸರ್ವಿಸ್' ಚಲನಚಿತ್ರದ ಚಿತ್ರತಂಡ ವಿನೂತನ ಪ್ರಚಾರಕ್ಕೆ ಮುಂದಾಗಿದೆ. ಪ್ರತಿ ಸಿನೆತಾರೆಯೂ ಒಂದಲ್ಲ ಒಂದು ಬಾರಿ ನಟರಾಜ ಸರ್ವಿಸ್ ಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಇರುತ್ತದೆ ಎನ್ನುವ ನಿದೇಶಕ ಪವನ್ ಒಡೆಯರ್ "ಕನ್ನಡ ಚಲನಚಿತ್ರ ತಾರೆಯರು, ನಟರಾಜ ಸರ್ವಿಸ್ ಗೆ ಮೊರೆ ಹೋಗಬೇಕಾದ ಸಂದರ್ಭಗಳನ್ನು ನಾವು ಸೆರೆ ಹಿಡಿಯಲಿದ್ದೇವೆ" ಎನ್ನುತ್ತಾರೆ. "ಪುನೀತ್ ರಾಜಕುಮಾರ್ ಈಗಾಗಲೇ ತಮ್ಮ ಭಾಗವನ್ನು ಚಿತ್ರೀಕರಿಸಿದ್ದು, ಉಳಿದವರು ಸೋಮವಾರದಿಂದ ಚಿತ್ರೀಕರಣ ಮಾಡಲಿದ್ದಾರೆ" ಎಂದಿದ್ದಾರೆ.
ನಿರ್ದೇಶಕರಿಗೆ ಯಾವಾಗ ನಡುಗೆಯ ಮೊರೆಹೋಗಬೇಕಾಗಿ ಬಂತು ಎಂಬ ಪ್ರಶ್ನೆಗೆ 'ಗೋವಿಂದಾಯನಮಃ' ಸಿನೆಮಾಗೆ ನಿರ್ಮಾಪಕನನ್ನು ಹುಡುಕುವಾಗ ಎನ್ನುವ ಅವರು "ನನಗೆ ನಿರ್ಮಾಪಕ ಪ್ರಸಾದ್ ಅವರ ಪರಿಚಯವಾಗಿ ಅವರನ್ನು ಭೇಟಿ ಮಾಡಲು ಓಡಾಡುತಿದ್ದೆ. ಆಗ ನಾನು ಚಿತ್ರರಂಗದವರನ್ನು ಭೇಟಿ ಮಾಡಲು ಕುಣಿಗಲ್ ನಿಂದ ಬೆಂಗಳೂರಿಗೆ ಬರುತ್ತಿದ್ದೆ. ಅವೊತ್ತು ನಿರ್ಮಾಪಕರು ಮೆಜೆಸ್ಟಿಕ್ ನಲ್ಲಿ ಭೇಟಿ ಮಾಡಲು ತಿಳಿಸಿದ್ದರು, ನಾನು ಭೇಟಿ ಮುಗಿಸಿ ಹಿಂದಿರುಗಲು ನಿಶ್ಚಯಿಸಿದ್ದರಿಂದ ಉಳಿದೆಲ್ಲಾ ದುಡ್ಡನ್ನು ಊಟಕ್ಕೆ ವ್ಯಯಿಸಿದೆ. ಆದರೆ ನಿರ್ಮಾಪಕರು ಮತ್ತಿಕೆರೆಗೆ ಬರಲು ಹೇಳಿದರು ಆದುದರಿಂದ ಅಲ್ಲಿಯವರೆಗೂ ನಡೆದೇ ಹೋಗಬೇಕಾಗಿ ಬಂತು" ಎನ್ನುತ್ತಾರೆ ಪವನ್.
ಆದರೆ ನಿರ್ಮಾಪಕರು ಚಿತ್ರತಂಡ ಸೇರಲೇ ಇಲ್ಲ, ನಾನು ಮಾತ್ರ ಪಾಠ ಕಲಿತೆ ನ್ನುತ್ತಾರೆ ನಿರ್ದೇಶಕ. "ಇಂದು ಕೂಡ ಖಿನ್ನತೆಗೆ ಒಳಗಾದಾಗ ಕತ್ತಲಿನಲ್ಲಿ ನಡೆಯುತ್ತೇನೆ" ಎನ್ನುತ್ತಾರೆ.
ಈ ಸಿನೆಮಾದ ಹಾಡು 'ಅಲ್ಲಾ ಅಲ್ಲ' ಸಾಮಾಜಿಕ ಜಾಲತಾಣದಲ್ಲಿ ಮೂರೂ ಲಕ್ಷ ಬಾರಿ ವೀಕ್ಷಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಪವನ್.
ಪುನೀತ್ ರಾಜಕುಮಾರ್ ಅರ್ಪಿಸಿರುವ ಈ ರೋಮ್ಯಾಂಟಿಕ್ ಕಾಮಿಡಿ ಚಲನಚಿತ್ರದ ನಿರ್ಮಾಪಕ ಎನ್ ಎಸ್ ರಾಜಕುಮಾರ್. ಮಯೂರಿ ಚಿತ್ರದ ನಾಯಕನಟಿ. 'ಕೃಷ್ಣ ಲೀಲಾ', 'ಇಷ್ಟಕಾಮ್ಯ' ಸಿನೆಮಾಗಳ ನಂತರ ಮಯೂರಿ ಈ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಅರುಳ್ ಕೆ ಸೋಮಸುಂದರಂ ಸಿನೆಮ್ಯಾಟೋಗ್ರಾಫರ್.