'ಬಬ್ಲುಶ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ಹಾರರ್-ಲವ್ ಕೈಬಿಟ್ಟು ಕುಟುಂಬ ಮತ್ತು ಕುಸ್ತಿಯತ್ತ ವೆಂಕಟ್; ಬರಲಿದೆ 'ಬಬ್ಲುಶ'

'ಎ ಡೇ ಇನ್ ದ ಸಿಟಿ' ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ವೆಂಕಟ್ ಭಾರದ್ವಾಜ್ ತಮ್ಮ ಎರಡನೇ ಸಿನೆಮಾ 'ಬಬ್ಲುಶ'ಗೆ ಐತಿಹಾಸಿಕ ಕೌಟುಂಬಿಕ ಥ್ರಿಲ್ಲರ್ ಕಥೆಯೊಂದನ್ನು ಆಯ್ಕೆ ಮಾಡಿದ್ದಾರೆ.

ಬೆಂಗಳೂರು: 'ಎ ಡೇ ಇನ್ ದ ಸಿಟಿ' ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ವೆಂಕಟ್ ಭಾರದ್ವಾಜ್ ತಮ್ಮ ಎರಡನೇ ಸಿನೆಮಾ 'ಬಬ್ಲುಶ'ಗೆ ಐತಿಹಾಸಿಕ ಕೌಟುಂಬಿಕ ಥ್ರಿಲ್ಲರ್ ಕಥೆಯೊಂದನ್ನು ಆಯ್ಕೆ ಮಾಡಿದ್ದಾರೆ. 
"ಇಂದು ಬಹುತೇಕ ನಿರ್ದೇಶಕರು ಹಾರರ್ ಅಥವಾ ಪ್ರೀತಿಯ ವಿಷಯದ ಸಿನೆಮಾಗಳನ್ನು ಕೈಗೆತ್ತಿಕೊಳ್ಳುತ್ತಾರೆ. ನಾನು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದೆ ಆದುದರಿಂದ ಹಿನ್ನಲೆಯಲ್ಲಿ ಕೌಟುಂಬಿಕ ಮತ್ತು ಕ್ರೀಡಾ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ" ಎನ್ನುತ್ತಾರೆ ವೆಂಕಟ್. 
'ಬಬ್ಲೂಶ' ಸಿನೆಮಾ ಇನ್ನು ಹೆಚ್ಚು ಆಸಕ್ತಿದಾಯಕವಾಗುವುದು ಏಕೆಂದರೆ ಇದು ವಿಜಯನಗರ ಆಳ್ವಿಕೆಯ ಸಮಯದಲ್ಲಿ (1501 ನೇ ಇಸವಿ) ನಡೆದ ನಿಜ ಘಟನೆಯನ್ನು ಆಧರಿಸಿದೆಯಂತೆ. ಆ ಕಾಲದ ಪ್ರಖ್ಯಾತ ಕ್ರೀಡೆಯಾದ ಕುಸ್ತಿಯ ಬಗ್ಗೆ ಈ ಸಿನೆಮಾ. "ನನಗೆ 6 ಅಡಿಗೂ ಉದ್ದವಿದ್ದ ನಟನ ಅವಶ್ಯಕತೆಯಿತ್ತು. ಆದುದರಿಂದ 480 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಡಿಷನ್ ಮಾಡಿದೆ" ಎನ್ನುತ್ತಾರೆ ವೆಂಕಟ್. 
ಸಿನೆಮಾ ಹೆಚ್ಚು ನೈಜವಾಗಿರಲು ಕಲಾವಿದನೇ ಸ್ಟಂಟ್ ಗಳನ್ನೂ ಮಾಡಬೇಕು ಎಂದು ನಂಬುವ ವೆಂಕಟ್ "ನಾನು ಇಬ್ಬರು ಮುಖ್ಯ ನಟರನ್ನು ಆಯ್ಕೆ ಮಾಡಿದೆ. ಹರೀಶ್ ಅರ್ಜುನ್ ಮತ್ತು ಮಣಿ ಶೆಟ್ಟಿ. ಹಾಗೆಯೇ ಬಿಹಾರದ ಚಿನ್ನದ ಪದಕ ವಿಜೇತ ಘನಶ್ಯಾಮ್ ಅವರಿಂದ ತರಬೇತಿ ಪಡೆದ ಕೆಲವರನ್ನು ಕೂಡ. ಸ್ಟಂಟ್ ಮಾಸ್ಟರ್ ಸುಪ್ರೀಂ ಬಾಬು ಅವರನ್ನು ಕೂಡ ತೆಕ್ಕೆಗೆ ತೆಗೆದುಕೊಂಡೆವು" ಎಂದು ವಿವರಿಸುತ್ತಾರೆ. 
ಸಿ ವಿ ಶಿವಶಂಕರ್ ನಿರ್ಮಿಸಿರುವ 'ಬಬ್ಲೂಶ'ದಲ್ಲಿ ಮೃದುಲಾ ಭಾಸ್ಕರ್ ನಾಯಕನಟಿ. ಈ ಸಿನೆಮಾ ಮೊದಲು ಅಮೆರಿಕಾದಲ್ಲಿ ಬಿಡುಗಡೆಯಾಗಿ ನಂತರ ಇಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal flood: ಮೃತರ ಸಂಖ್ಯೆ 270ಕ್ಕೆ ಏರಿಕೆ, ಸುಮಾರು 288 ಭಾರತೀಯರು ನಾಪತ್ತೆ! 800ಕ್ಕೂ ಹೆಚ್ಚು ಜನರ ರಕ್ಷಣೆ