ನಟಿ ಹರಿಪ್ರಿಯಾ 
ಸಿನಿಮಾ ಸುದ್ದಿ

ನನ್ನ ನಟನೆಯೇ ವಿಮರ್ಶಕರಿಗೆ ಉತ್ತರವಾಗಲಿದೆ: ನಟಿ ಹರಿಪ್ರಿಯ

ನೀರ್ ದೋಸೆ ಚಿತ್ರದಲ್ಲಿ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡು ಸಾಕಷ್ಟು ಸುದ್ದಿಯಾಗುತ್ತಿದ್ದರೂ ಈ ವರೆಗೂ ಮೌನವಾಗಿಯೇ ಇದ್ದ ನಟಿ ಹರಿಪ್ರಿಯಾ ಅವರು ಇದೀಗ ತಮ್ಮ ಮೌನವನ್ನು ಮುರಿದಿದ್ದು, ನನ್ನ...

ಬೆಂಗಳೂರು: ನೀರ್ ದೋಸೆ ಚಿತ್ರದಲ್ಲಿ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡು ಸಾಕಷ್ಟು ಸುದ್ದಿಯಾಗುತ್ತಿದ್ದರೂ ಈ ವರೆಗೂ ಮೌನವಾಗಿಯೇ ಇದ್ದ ನಟಿ ಹರಿಪ್ರಿಯಾ ಅವರು ಇದೀಗ ತಮ್ಮ ಮೌನವನ್ನು ಮುರಿದಿದ್ದು, ನನ್ನ ನಟನೆಯೇ ವಿಮರ್ಶಕರಿಗೆ ಉತ್ತರವಾಗಲಿದೆ ಎಂದು ಹೇಳಿದ್ದಾರೆ.

ನೀರ್ ದೋಸೆ ಚಿತ್ರದಲ್ಲಿ ನಟಿಸುವ ಆಫರ್ ಬರುತ್ತಿದ್ದಂತೆಯೇ ನಾನು ನನ್ನ ಕುಟುಂಬ ಹಾಗೂ ಸ್ನೇಹಿತರ ಅಭಿಪ್ರಾಯವನ್ನು ಪಡೆದುಕೊಂಡಿದ್ದೆ. ನಂತರವಷ್ಟೇ ಚಿತ್ರಕ್ಕೆ ಸಹಿ ಮಾಡಿದ್ದೆ.  

ಚಿತ್ರದಲ್ಲಿ ನಟಿಸಲು ನಾನು ದೊಡ್ಡ ಮಟ್ಟದಲ್ಲಿ ಹಣವನ್ನು ಪಡೆದುಕೊಂಡಿದ್ದೇನೆಂದು ಮಾತನಾಡಿಕೊಳ್ಳುತ್ತಿದ್ದಾರೆ. ನಿಜ ಹೇಳಬೇಕೆಂದರೆ ಸಾಮಾನ್ಯವಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆಗಿಂತಲೂ ಈ ಚಿತ್ರದಲ್ಲಿ ಕಡಿಮೆ ತೆಗೆದುಕೊಂಡಿದ್ದೇನೆ. ಅಂದರೆ ಅರ್ಧದಷ್ಟು ಸಂಭಾವನೆಯನ್ನು ಪಡೆದುಕೊಂಡಿದ್ದೇನೆ. ಚಿತ್ರಕಥೆ ಹಾಗೂ ತಂಡದಿಂದ ನಾನು ಪಾತ್ರವನ್ನು ಒಪ್ಪಿಕೊಂಡೆ.

ಒಬ್ಬ ವೇಶ್ಯೆಯಾಗಿ ನಟಿಸುವುದು ನಟಿಯ ಭವಿಷ್ಯವನ್ನು ಹಾಳುಮಾಡುತ್ತದೆಯೇ? ದೊಡ್ಡ ನಿರ್ಮಾಣ ಸಂಸ್ಥೆಯಾಗಲಿ, ನಟರೊಂದಿಗಾಗಲಿ ಅಥವಾ ನಿರ್ದೇಶಕರೊಂದಿಗಾಗಲಿ ನಾನು ಕೆಲಸ ಮಾಡಿಲ್ಲ. ಒಂದು ವೇಳೆ ಮಾಡಿದ್ದರೆ ಚಿತ್ರರಂಗದಲ್ಲಿ ನನ್ನ ಭವಿಷ್ಯ ಚೆನ್ನಾಗಿರುತ್ತಿತ್ತೇನೋ. ಪ್ರತೀ ಚಿತ್ರದಲ್ಲೂ ನಾನು ಸಾಕಷ್ಟು ಕಲಿತಿದ್ದೇನೆ. ಎಲ್ಲಾ ಚಿತ್ರದಲ್ಲೂ ನನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದೇನೆ. ಹೀಗಾಗಿ ಈ ಪಾತ್ರವನ್ನು ಆಯ್ಕೆ ಮಾಡಿದೆ.

ಉದಾಹರಣೆಯಾಗಿ ನಟಿ ಸೌಂದರ್ಯ ಅವರನ್ನು ತೆಗೆದುಕೊಳ್ಳುವುದಾದರೆ, ಚಿತ್ರರಂಗದಲ್ಲಿ ಸೌಂದರ್ಯ ಅವರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಪ್ರಸ್ತುತ ಅವರು ಭೂಮಿ ಮೇಲೆ ಇಲ್ಲ. ಆದರೂ, ಅವರ ನಟನೆ ಬಗ್ಗೆ ಈಗಲೂ ಎಲ್ಲರೂ ಮಾತನಾಡುತ್ತಾರೆ. ಜನರು ನನ್ನ ನಟನೆಯಿಂದ ನನ್ನನ್ನು ನೆನಪಿಸಿಕೊಳ್ಳುವಂತೆ ಮಾಡಬೇಕು ಎಂದಿದ್ದಾರೆ.

ಚಿತ್ರದಲ್ಲಿ ನನ್ನ ಪಾತ್ರ ನನ್ನನ್ನು ಕಂಫರ್ಟ್ ಜೋನ್ ಗೆ ಕರೆದೊಯ್ದಿತ್ತು. ಪಾತ್ರದಲ್ಲಿ ನಾನು ತೊಡಗಿಕೊಂಡಿದ್ದೆ. ಪಾತ್ರಕ್ಕಾಗಿ ಯಾರನ್ನೂ ಭೇಟಿಯಾಗಿ ಅವರ ಅನುಭವವನ್ನು ಕೇಳಿರಲಿಲ್ಲ. ಲೈಂಗಿಕ ಕಾರ್ಯಕರ್ತೆಯರೊಂದಿಗೆ ಮಾತನಾಡುವ ಅವಕಾಶ ಸಿಕ್ಕರಿಲ್ಲ. ಆದರೆ, ಇದೇ ರೀತಿಯ ಪಾತ್ರ ನಿರ್ವಹಿಸಿದ್ದ ನಟಿಯರ ಕುರಿತ ಕೆಲ ಲೇಖನಗಳನ್ನು ಓದಿದ್ದೆ. ಅವರ ಸಂದರ್ಶನಗಳನ್ನು ನೋಡಿದ್ದೆ. ಸಾಕಷ್ಟು ನಟಿಯವರು ಮಾನಸಿಕ ಒತ್ತಡ ಬಗ್ಗೆಯೇ ಮಾತನಾಡಿದ್ದರು.

ಈ ಅಭಿಪ್ರಾಯ ಯಾಕೆ ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟುಹಾಕಿತ್ತು. ನಂತರ ಇದರ ಅನುಭವ ನನಗೂ ಆಯಿತು. ನನ್ನಲ್ಲಿ ಬದಲಾವಣೆ ತರುವುದು ಅಗತ್ಯವಾಗಿತ್ತು. ಮೊದಲು ಅದರ ಬಗ್ಗೆ ಗಮನ ಹರಿಸಿದೆ. ಸಿಗರೇಟ್ ಸೇದುವ ಅಭ್ಯಾಸವನ್ನೂ ಮಾಡಿಕೊಂಡೆ. ಒಬ್ಬ ವ್ಯಕ್ತಿಯ ಜೀವನದಂತೆ ಅವರ ಶೈಲಿಯನ್ನು ಅಳವಡಿಸಿಕೊಂಡು ನಟನೆ ಮಾಡುವುದು ಬಹಳ ಒತ್ತಡವಾಗಿರುತ್ತದೆ ಎಂಬುದರ ಅನುಭವ ನನಗೂ ಆಯಿತು ಎಂದು ಹರಿಪ್ರಿಯ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT