ನಟಿ ಮಿಶ್ಟಿ ಚಕ್ರವರ್ತಿ 
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗಕ್ಕೆ ಬರಲಿದ್ದಾರೆಯೇ ಮಿಶ್ಟಿ ಚಕ್ರವರ್ತಿ?

ಮನೋರಂಜನ್ ರವಿಚಂದ್ರನ್ ತಮ್ಮ ಎರಡನೇ ಸಿನೆಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಮೂಲದಲ್ಲಿ ಧನುಷ್ ನಟಿಸಿದ್ದ ತಮಿಳಿನ 'ವಿಐಪಿ' ಸಿನೆಮಾದ ರಿಮೇಕ್ ಅನ್ನು ನಂದಕಿಶೋರ್

ಬೆಂಗಳೂರು: ಮನೋರಂಜನ್ ರವಿಚಂದ್ರನ್ ತಮ್ಮ ಎರಡನೇ ಸಿನೆಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಮೂಲದಲ್ಲಿ ಧನುಷ್ ನಟಿಸಿದ್ದ ತಮಿಳಿನ 'ವಿಐಪಿ' ಸಿನೆಮಾದ ರಿಮೇಕ್ ಅನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದು, ಮುಂದಿನ ವಾರ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. 
ಈ ಹಿಂದಿನ ವದಂತಿಯಂತೆ ಮನೋರಂಜನ್ ಎದುರು ನಟಿ ರಚಿತಾ ರಾಮ್ ನಟಿಸುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿತ್ತು. ಆದರೆ ಈಗ ನಿರ್ಮಾಪಕರು ನಾಯಕನಟಿ ಪಾತ್ರಕ್ಕೆ ಮಿಶ್ಟಿ ಚಕ್ರವರ್ತಿ ಅವರನ್ನು ಪರಿಗಣಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಾಲಿ ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದ್ದ ಮಿಶ್ಟಿ ನಂತರ ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ಚಿತ್ರಗಳಲ್ಲಿ ನಟಿಸಿದವರು. ಈ ವದಂತಿ ನಿಜವಾದಲ್ಲಿ ಈ ನಟಿ ರಾಕ್ಲೈನ್ ವೆಂಕಟೇಶ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಡಿ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. 
ಇನ್ನು ಅಧಿಕೃತ ಘೋಷಣೆಯಾಗಬೇಕಿದ್ದರು, ಚಿತ್ರತಂಡದ ಬಲ್ಲ ಮೂಲಗಳ ಪ್ರಕಾರ ಮುಂದಿನ ಹಂತದ ಚಿತ್ರೀಕರಣದಲ್ಲಿ ಮಿಶ್ಟಿ ಭಾಗಿಯಾಗಲಿದ್ದಾರೆ. ಈ ಆಯ್ಕೆಯ ಗುಟ್ಟೇನು ಎಂಬುದನ್ನು ವಿವರಿಸುವ ಮೂಲಗಳು "ಮನೋರಂಜನ್ ಜೊತೆಗೆ ನಟಿಸಲು ತಾಜಾ ಮುಖವೊಂದನ್ನು ಪರಿಚಯಿಸಲು ನಿರ್ಮಾಪಕರು ಮುಂದಾದರು. ಮಿಶ್ಟಿ ಅವರನ್ನು ಕರೆತರಲು ಇದೆ ಕಾರಣ. ರಚಿತಾ ರಾಮ್ ಅವರ ಅಪಾರ ಪ್ರತಿಭೆ ಬಗ್ಗೆ ತಿಳಿದಿರುವ ನಿರ್ದೇಶಕ ನಂದಕಿಶೋರ್, ಈ ಪಾತ್ರ ಅವರಿಗೆ ಹೊಂದುಕೊಳ್ಳುವುದಿಲ್ಲ ಎಂದು ಕೂಡ ಅರಿತರು. ಮುಂದಿನ ಯೋಜನೆಗಳಿಗೆ ಅವರನ್ನು ತೊಡಗಿಸಿಕೊಳ್ಳುವ ಯೋಜನೆಗಳನ್ನು ನಿರ್ದೇಶಕ ಹಾಕಿಕೊಂಡಿದ್ದಾರೆ" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ