ಆಡಿಷನ್ ನಲ್ಲಿ ಡ್ಯಾನಿಶ್ ಸೇಟ್ ನಿರ್ದೇಶಕ ಸಾದ್ ಖಾನ್ 
ಸಿನಿಮಾ ಸುದ್ದಿ

ನೊಗರಾಜ್ ಖ್ಯಾತಿಯ ಡ್ಯಾನಿಶ್ ಸೇಟ್ ನೊಂದಿಗೆ ನಟಿಸಲು ಸಾಲುಗಟ್ಟಿ ನಿಂದ ಯುವಕರು

ಡ್ಯಾನಿಶ್ ಅವರೊಂದಿಗೆ ನಟಿಸಲು ಹಲವು ಯುವಕರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.

ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸುತ್ತಿರುವ ಜೆ ಡ್ಯಾನಿಶ್ ಸೇಟ್ ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದ್ದು, ಡ್ಯಾನಿಶ್ ಅವರೊಂದಿಗೆ ನಟಿಸಲು ಹಲವು ಯುವಕರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. 
ಡ್ಯಾನಿಶ್ ಸೇಟ್ ಅವರ ಚಿತ್ರವನ್ನು ನಿರ್ದೇಶಿಸುತ್ತಿರುವ ಸಾದ್ ಖಾನ್ ಆಯೋಜಿಸಿದ್ದ ಆಡಿಷನ್ ನಲ್ಲಿ ಕೇವಲ ಒಂದೇ ದಿನದಲ್ಲಿ 500 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಆಡಿಷನ್ ಗೆ ಹಲವಾರು ಯುವಕರು ನೋಂದಣಿ ಮಾಡಿಕೊಂಡಿದ್ದು ಆಡಿಷನ್ ನಲ್ಲಿ ಭಾಗವಹಿಸುತ್ತಿರುವವರಿಗೆ ಡ್ಯಾನಿಶ್ ಸೇಟ್ ಹಾಗೂ ನಿರ್ದೇಶಕ ಸಾದ್ ಖಾನ್ ಕೆಲವು ಸಲಹೆಗಳನ್ನು ನೀಡುತ್ತಿದ್ದಾರೆ. 
ಹಲವು ಪಾತ್ರಗಳನ್ನು ಹೊಂದಿರುವ ಹಾಸ್ಯ ಸಿನಿಮಾದಲ್ಲಿ ನಟಿಸುತ್ತಿರುವ ಡ್ಯಾನಿಶ್ ಸೇಠ್ ಹಾಗು ಚಿತ್ರದ ನಿರ್ದೇಶಕರು ಆಡಿಷನ್ ವೇಳೆ ಭಾಗವಹಿಸುವವರಿಗೆ ನೃತ್ಯ, ಹಾಡು ಸೇರಿದಂತೆ ವಿವಿಧ ರೀತಿಯಲ್ಲಿ ಪರೀಕ್ಷೆ ಮಾಡುತ್ತಿದ್ದು, ಆಡಿಷನ್ ಅತ್ಯಂತ ಮೋಜಿನಿಂದ ಕೂಡಿದೆ ಎನ್ನುತ್ತಾರೆ ಪ್ರೊಡೆಕ್ಷನ್ ಯುನಿಟ್ ನ ಸದಸ್ಯರು. 
ಮಂಜುನಾಥ ಹಾಗೂ ಆತನ ಪತ್ನಿ ಲಾವಣ್ಯ ಎಂಬ ಪಾತ್ರಗಳಿಗೆ ಆಡಿಷನ್ ನಡೆಯುತ್ತಿದ್ದು, ಈ ಎರಡು ಪಾತ್ರಗಳ ಜೊತೆಯಲ್ಲಿ ಇನ್ನೂ 10-12 ಪಾತ್ರಗಳು ಇರಲಿವೆ. ಹಂಬಲ್‌ ಪೊಲಿಟಿಷಿಯನ್‌ ನೋಗರಾಜ್‌ ಚಿತ್ರವನ್ನು ಪುಷ್ಕರ್ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. 
ಆಡಿಷನ್ ನಲ್ಲಿ ಭಾಗವಹಿಸಲು ಇಚ್ಛಿಸುವವರು ಬೆಳಿಗ್ಗೆ 10 ರಿಂದ ಸಂಜೆ 8 ರ ವರೆಗೆ ಹೆಚ್ಎಎಲ್ 2 ನೇ ಹಂತ, ಇಂದಿರಾನಗರದಲ್ಲಿರುವ ಪ್ರಾಸ್ಪೆರೋ ಪ್ರೊಡಕ್ಷನ್ಸ್ ಗೆ ಭೇಟಿ ನೀಡಬಹುದಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT